ಆರೋಗ್ಯದ ಸ್ಥಿತಿ ಗಂಭೀರವಾಗುವುದರ ಮೊದಲೇ ಆಸ್ಪತ್ರೆ ಸೇರಿ: ಉಡುಪಿ ಡಿಸಿ ಜಗದೀಶ್

|

Updated on: May 09, 2021 | 3:57 PM

ಜನರ ನಿರ್ಲಕ್ಷ್ಯಕ್ಕೆ ನಾವು ಜವಾಬ್ದಾರರಲ್ಲ. ರೋಗದ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. ಆರಂಭದಲ್ಲಿ ಆಕ್ಸಿಜನ್​ ಕೊಟ್ಟು ಜೀವ ಉಳಿಸಲು ಅವಕಾಶವಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್​ ಸೂಚನೆ ನೀಡಿದ್ದಾರೆ.

ಆರೋಗ್ಯದ ಸ್ಥಿತಿ ಗಂಭೀರವಾಗುವುದರ ಮೊದಲೇ ಆಸ್ಪತ್ರೆ ಸೇರಿ: ಉಡುಪಿ ಡಿಸಿ ಜಗದೀಶ್
ಜಿಲ್ಲಾಧಿಕಾರಿ ಜಿ.ಜಗದೀಶ್
Follow us on

ಉಡುಪಿ: ಜಿಲ್ಲೆಯಲ್ಲಿ 950 ಆಕ್ಸಿಜನ್ ಬೆಡ್​ಗಳು​ ಖಾಲಿಯಿವೆ. ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ನೀಡುವುದಕ್ಕೆ ಸರ್ಕಾರ ಸಿದ್ಧವಿದೆ. ಸೋಂಕಿತರಿಗೆ ವೆಂಟಿಲೇಟರ್​ ಚಿಕಿತ್ಸೆ ಕೊಡಲು ಅವಕಾಶವಿದೆ. ಆದರೆ ಮನೆಯಲ್ಲಿ ಸ್ಥಿತಿ ಗಂಭೀರವಾದ ನಂತರ ಆಸ್ಪತ್ರೆಗೆ ಬರಬೇಡಿ. ಗಂಭೀರ ಸ್ಥಿತಿಯಲ್ಲಿ ಬರೋರಿಗೆ ವೆಂಟಿಲೇಟರ್​ ನೀಡುವುದಿಲ್ಲ. ಕೊವಿಡ್ ಲಕ್ಷಣ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್​ ಸ್ಪಷ್ಟನೆ ನೀಡಿದ್ದಾರೆ.

ಜನರ ನಿರ್ಲಕ್ಷ್ಯಕ್ಕೆ ನಾವು ಜವಾಬ್ದಾರರಲ್ಲ. ರೋಗದ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. ಆರಂಭದಲ್ಲಿ ಆಕ್ಸಿಜನ್​ ಕೊಟ್ಟು ಜೀವ ಉಳಿಸಲು ಅವಕಾಶವಿದೆ. ಸ್ಥಿತಿ ಗಂಭೀರವಾಗಿದ್ದರೆ ಐಸಿಯು, ವೆಂಟಿಲೇಟರ್​​ಗೆ ಶಿಫ್ಟ್ ಮಾಡುತ್ತೇವೆ. ನನಗೆ ವೆಂಟಿಲೇಟರ್​ ಕೊಡುತ್ತೀರಾ ಎಂದು ಕರೆ ಮಾಡಬೇಡಿ. ಬುದ್ಧಿವಂತರ ಜಿಲ್ಲೆಯವರು ಜವಾಬ್ದಾರಿಯಿಂದ ವರ್ತಿಸಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿಲ್ಲದವರು ಬೆಡ್​ ಹುಡುಕುತ್ತಿದ್ದಾರೆ. ಮನೆಯಲ್ಲೇ ಕುಳಿತು ನೇರ ಐಸಿಯುಗೆ ಬಂದರೆ ಚಿಕಿತ್ಸೆ ಅಸಾಧ್ಯ ಎಂದು ಜಿ. ಜಗದೀಶ್​ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಉಡುಪಿಯಲ್ಲಿ ಮಹಾಮಾರಿ ಕೊರೊನಾ ಸೋಂಕು ವಿಪರೀತ ಹೆಚ್ಚಳವಾಗಿದೆ. ಜ್ವರ, ಶೀತ, ಕೆಮ್ಮು, ನೆಗಡಿ ಇದ್ದರೂ ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆಕ್ಸಿಜನ್​ ಬೆಡ್​ ಇಲ್ಲವೆಂದು ಗಾಬರಗೊಳ್ಳದಿರಿ ಎಂದು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ಮುಚ್ಲಕೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ
ಮಹಾಮಾರಿ ಕೊರೊನಾ ವೈರಸ್ ತಡೆಯಲು ಮುಚ್ಲಕೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಸುಬ್ರಹ್ಮಣ್ಯ ದೇವರಿಗೆ 1,008 ಎಳನೀರಿನ ಅಭಿಷೇಕ ಹಾಗೂ ರಾಷ್ಟ್ರದ ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

ಕಾರ್ಯಕ್ರಮದಲ್ಲಿ ಪೇಜಾವರ, ಪಲಿಮಾರು, ಪುತ್ತಿಗೆ ಸ್ವಾಮೀಜಿ ಭಾಗಿಯಾಗಿದ್ದಾರೆ. ಸಂಗ್ರಹವಾದ ದೇಣಿಗೆ ಹಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಗೋಗ್ರಾಸ ಸೇವೆ ಕೈಗೊಳ್ಳಲಾಗಿದೆ. ಹಾಗೂ ಪ್ರಧಾನಿ ಮೋದಿ ಹೆಸರಲ್ಲಿ ಗೋಶಾಲೆಯ ಒಂದು ಹಸು ದತ್ತು ಪಡೆಯಲಾಗಿದೆ. ಜೊತೆಗೆ ಆಂಬುಲೆನ್ಸ್ ಸೇವೆ ನೀಡುತ್ತಿರುವ ಇಬ್ಬರಿಗೆ ಐದು ಸಾವಿರ ಸಹಾಯಧನ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಮಾಡಲಾಗಿದೆ.

ಇದನ್ನೂ ಓದಿ: Coronavirus: ಗಾಳಿಯ ಮೂಲಕ ಕೊವಿಡ್-19 ಹರಡುವುದು ಹೇಗೆ? ತಜ್ಞರು ಏನಂತಾರೆ?

ಈವರೆಗೆ ಮಂಡ್ಯ ಜಿಲ್ಲೆಯಲ್ಲಿ 84 ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢ