AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus: ಗಾಳಿಯ ಮೂಲಕ ಕೊವಿಡ್-19 ಹರಡುವುದು ಹೇಗೆ? ತಜ್ಞರು ಏನಂತಾರೆ?

Covid-19 Pandemic: ಮುಚ್ಚಿದ ಸ್ಥಳಗಳಲ್ಲಿ ಅಥವಾ ಕಡಿಮೆ ಗಾಳಿ ಇರುವ ಪ್ರದೇಶಗಳಲ್ಲಿ ಈ ರೋಗವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚು . ದೊಡ್ಡ ಹನಿಗಳು ಸೆಕೆಂಡುಗಳಲ್ಲಿ ಚದುರಿಹೋಗುವುದರಿಂದ ಅಷ್ಟೊಂದು ಆತಂಕವಿಲ್ಲ

Coronavirus: ಗಾಳಿಯ ಮೂಲಕ ಕೊವಿಡ್-19 ಹರಡುವುದು ಹೇಗೆ? ತಜ್ಞರು ಏನಂತಾರೆ?
ಮಾಸ್ಕ್
ರಶ್ಮಿ ಕಲ್ಲಕಟ್ಟ
|

Updated on:May 09, 2021 | 1:07 PM

Share

ಭಾರತದಲ್ಲಿ ಕೊವಿಡ್-19 ಸಾಂಕ್ರಾಮಿಕ ಎರಡನೇ ಅಲೆ ನಿಯಂತ್ರಣಾತೀತವಾಗಿರುವಾಗಿರುವ ಹೊತ್ತಿನಲ್ಲಿಯೇ ಕೊರೊನಾವೈರಸ್ ಗಾಳಿಯಲ್ಲಿ ಪ್ರಸರಣವಾಗುತ್ತದೆ ಎಂದು ವಿದೇಶದ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.ಕೊವಿಡ್-19 ಗಾಳಿಯಲ್ಲಿ ಹರಡುತ್ತದೆ ಎಂದು ಹೇಳಿದರೂ ವಾತಾವರಣದಲ್ಲಿರುವ ಗಾಳಿ ಉಸಿರಾಡಿವರೆಲ್ಲರಿಗೂ ಸೋಂಕು ತಗಲುತ್ತದೆ ಎಂದರ್ಥವಲ್ಲ. ಅಮೆರಿಕದ ಸೆಂಟರ್ಸ್ ಆಫ್ ಡಿಸೀಸ್ ಕಂಟ್ರೋಲ್ (CDC) ಕೊರೊನಾವೈರಸ್ ಸೋಂಕು ಪ್ರಸರಣದ ಬಗ್ಗೆ ಹೊಸ ಸಲಹಾ ಕ್ರಮವೊಂದನ್ನು ಪ್ರಕಟಿಸಿದೆ. ಇದರ ಪ್ರಕಾರ ಕೊವಿಡ್-19 ರೋಗ ಬರುವುದಕ್ಕೆ ಮೂರು ಮುಖ್ಯ  ರೀತಿಗಳಿವೆ. ಕೊರೊನಾವೈರಸ್ ಉಚ್ವಾಸದ ಮೂಲಕ, ಸೀನು ,ಕೆಮ್ಮುವ ಮೂಲಕ ದೇಹ ದಿಂದ ಹೊರಬರುವ ತ್ಯಾಜ್ಯಗಳು ಮತ್ತು ಸ್ಪರ್ಶದಿಂದ ಬರುತ್ತದೆ. ವ್ಯಕ್ತಿಯೊಬ್ಬರು ಕೊರೊನಾವೈರಸ್ ಇರುವ ಗಾಳಿಯನ್ನು ಸೇವಿಸಿದರೆ ಅಂಥವರಿಗೆ ಸೋಂಕು ಸುಲಭವಾಗಿ ತಗಲುತ್ತದೆ.

ಸೋಂಕಿತ ವ್ಯಕ್ತಿಯಿಂದ ಮೂರರಿಂದ ಆರು ಅಡಿಗಳ ಒಳಗೆ ಇನ್ನೊಬ್ಬ ವ್ಯಕ್ತಿ ಸಂಪರ್ಕಕ್ಕೆ ಬಂದರೆ ಸೋಂಕು ಹರಡುವ ಅಪಾಯ ಹೆಚ್ಚು ಎಂದು ಅದು ತೋರಿಸುತ್ತದೆ. ಯಾಕೆಂದರೆ ಸೋಂಕಿತ ವ್ಯಕ್ತಿಯಿಂದ ಬಂದ ಉಗುಳು ಅಥವಾ ಸೀನು ಮೂಲಕ ಹೊರ ಬಂದ ಹನಿಗಳ ಪ್ರಮಾಣವು ವಾತವರಣದಲ್ಲಿರುತ್ತದೆ .ಉಸಿರಾಟ, ಮಾತನಾಡುವಾಗ, ಹಾಡುವಾಗ, ವ್ಯಾಯಾಮ, ಕೆಮ್ಮು, ಸೀನುವುದು ಮತ್ತು ಸೋಂಕನ್ನು ಹರಡುವಂತಹ ಚಟುವಟಿಕೆಗಳ ಸಮಯದಲ್ಲಿ ದೇಹದಿಂದ ಹೊರ ಬರುವ ಈ ಹನಿಗಳು ಉಸಿರಾಡುವ ಮೂಲಕ ಹರಡುತ್ತವೆ ಎಂದು ಸಿಡಿಸಿ ಹೇಳಿದೆ.

ಇದರರ್ಥ ಮುಚ್ಚಿದ ಸ್ಥಳಗಳಲ್ಲಿ ಅಥವಾ ಕಡಿಮೆ ಗಾಳಿ ಇರುವ ಪ್ರದೇಶಗಳಲ್ಲಿ ಈ ರೋಗವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚು . ದೊಡ್ಡ ಹನಿಗಳು ಸೆಕೆಂಡುಗಳಲ್ಲಿ ಚದುರಿಹೋಗುವುದರಿಂದ ಅಷ್ಟೊಂದು ಆತಂಕವಿಲ್ಲ. ಆದರೆ ಈ ಹನಿಗಳು ಒಣಗಿದಾಗ ರೂಪುಗೊಳ್ಳುವ ಸೂಕ್ಷ್ಮ ಹನಿಗಳು ಮತ್ತು ವಾತಾವರಣದಲ್ಲಿರುವ ದ್ರವಕಣಗಳು ಕನಿಷ್ಠ 30 ನಿಮಿಷದಿಂದ 1 ಗಂಟೆಯವರೆಗೆ ಇರುತ್ತವೆ ಎಂದಿದೆ ಸಿಡಿಸಿ.

ಕೊವಿಡ್ -19 ಎರಡನೇ ಅಲೆ ಬಗ್ಗೆ ಅಧ್ಯಯನ ನಡೆಸುವ ಇಬ್ಬರು ವೈದ್ಯಕೀಯ ಆರೋಗ್ಯ ತಜ್ಞರು ಕೊವಿಡ್ ಗಾಳಿಯಲ್ಲಿ ಪ್ರಸರಣವಾಗುತ್ತದೆ ಎಂದರೆ ವೈರಾಣು ವಾತಾವರಣದಲ್ಲಿದೆ ಎಂಬರ್ಥವಲ್ಲ ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

Airborne ಅಥವಾ ಗಾಳಿಯಲ್ಲಿ ಸೋಂಕು ಹರಡುತ್ತದೆ ಎಂದರೆ ಅದು ಗಾಳಿಯಲ್ಲಿದೆ ಮತ್ತು ನೀವು ಎಲ್ಲಿದ್ದರೂ ಅದನ್ನು ಹಿಡಿಯಬಹುದು ಎಂದಲ್ಲ. ಸಣ್ಣ ಕೋಣೆಯಲ್ಲಿ ಕೊವಿಡ್ -19 ರೋಗಿ ಇದ್ದರೆ ಅಥವಾ ವಾತಾಯನ ಕೊರತೆ ಇರುವ ಸ್ಥಳದಲ್ಲಿ ಈ ವ್ಯಕ್ತಿಯು ಕೆಮ್ಮಿದರೆ, ಆ ಗಾಳಿಯಲ್ಲಿ ದ್ರವ ಕಣಗಳು 30 ನಿಮಿಷದಿಂದ 1 ಗಂಟೆಯವರೆಗೆ ಇರುತ್ತದೆ ಎಂದು ಮ್ಯಾಕ್ಸ್ ಹೆಲ್ತ್‌ಕೇರ್‌ನ ಡಾ ರೊಮೆಲ್ ಟಿಕು ಹೇಳಿದ್ದಾರೆ.

ಸರ್ ಗಂಗಾ ರಾಮ್ ಆಸ್ಪತ್ರೆಯ ವಾಸ್ಕುಲರ್ ಮತ್ತು ಎಂಡೋವಾಸ್ಕುಲರ್ ಸರ್ಜನ್ ಆಗಿರುವ ಡಾ.ಅಂಬರೀಶ್ ಸಾತ್ವಿಕ್ ಅವರ ಪ್ರಕಾರ ಈ ದ್ರವಕಣಗಳು ಧೂಮಪಾನ ಮಾಡುವ ವ್ಯಕ್ತಿಯಿಂದ ಹೊರಹೊಮ್ಮುವ ಹೊಗೆ ಮೋಡದಂತಿರುತ್ತದೆ ಎಂದಿದ್ದಾರೆ. ಯಾರಾದರೂ ದೊಡ್ಡ ಕೋಣೆಯ ಒಂದು ಮೂಲೆಯಲ್ಲಿ ಸಿಗರೇಟು ಸೇದುತ್ತಿದ್ದರೆ, ಕೋಣೆಯ ಇನ್ನೊಂದು ಮೂಲೆಯಲ್ಲಿ ನಿಂತಿರುವ ನಿಮಗೆ ಸಿಗರೇಟ್ ಹೊಗೆಯನ್ನು ವಾಸನೆ ಬರುತ್ತದೆ. ವೈರಸ್ ಪ್ರಸ್ತುತ ಈ ರೀತಿ ವರ್ತಿಸುತ್ತಿದೆ. ಇದು ಕೋಣೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಚದುರುತ್ತದೆ. ಆ ಕೋಣೆಯಲ್ಲಿ ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾಗಿದ್ದರೆ, ಅದೇ ಜಾಗವನ್ನು ಹಂಚಿಕೊಳ್ಳುವ ಇತರರು ಮಾಸ್ಕ್ ಹಾಕದಿದ್ದರೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಒಬ್ಬ ವ್ಯಕ್ತಿಯು ಒಂದು ಗಂಟೆ ಮುಂಚಿತವಾಗಿ ಸಿಗರೇಟು ಸೇದಿದ್ದ ಕೋಣೆಗೆ ನೀವು ಪ್ರವೇಶಿಸಿದರೂ ಸಹ, ನಿಮ್ಮ ಮೂಗಿಗೆ ಹೇಗೆ ವಾಸನೆ ಬಡಿಯುತ್ತದೆಯೋ ಅದೇ ರೀತಿ ಕೊರನಾ ವೈರಸ್ ಹೇಗೆ ವರ್ತಿಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ ಎಂದಿದ್ದಾರೆ .

ಮಾಸ್ಕ್ ಸರಿಯಾಗಿ ಧರಿಸುವುದು ಹೇಗೆ ಎಂದು ಜನರಿಗೆ ಇನ್ನೂ ತಿಳಿದಿಲ್ಲ ಎಂದು ಇಬ್ಬರೂ ವೈದ್ಯರು ಹೇಳುತ್ತಾರೆ. ನಾವು ಯಾವ ರೀತಿ ವೈರಸ್ ಸಂಪರ್ಕಕ್ಕೆ ಬಂದೆವು ಎಂದು ಕೆಲವರು ಅಚ್ಚರಿ ವ್ಯಕ್ತ ಪಡಿಸುತ್ತಾರೆ . ‘ಅರ್ಧದಷ್ಟು ಜನರಿಗೆ ಮಾಸ್ಕ್ ಹೇಗೆ ಧರಿಸಬೇಕೆಂದು ತಿಳಿದಿಲ್ಲ. ನಮ್ಮಿಂದ ಏನೂ ಆಗಲ್ಲ ಎಂದು ಧೋರಣೆಯಿಂದ ಅವರು ಫಾರ್ಮಸಿ,ಅಂಗಡಿ ಇತರ ಸ್ಥಳಗಳಿಗೆ ಹೋಗುತ್ತಾರೆ, ಜನರನ್ನು ಭೇಟಿಯಾಗುತ್ತಾರೆ. ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ನೀವು ವೈರಸ್ ಸಂಪರ್ಕಕ್ಕೆ ಒಳಗಾಗುವವರೆಗೂ ಅದು ನಿಮ್ಮ ಸಂಪರ್ಕಕ್ಕೆ ಬರುವುದಿಲ್ಲ’ ಅಂತಾರೆ ಟಿಕು.

ಇದನ್ನೂ ಓದಿ: Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ

Explainer: ಏನಿದು ವೈದ್ಯಕೀಯ ಆಮ್ಲಜನಕ? ಇದನ್ನು ಉತ್ಪಾದಿಸುವುದು ಹೇಗೆ?

Published On - 1:05 pm, Sun, 9 May 21

ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ