ಕರಾವಳಿಯತ್ತ ಪ್ರವಾಸಿಗರನ್ನು ಸೆಳೆಯುವುದಕ್ಕೆ ವಿನೂತನ ಪ್ರಯತ್ನ

|

Updated on: Mar 22, 2021 | 4:29 PM

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಶಾಂಭವಿ ನದಿಯಲ್ಲಿ ಸಿಂಗಲ್ ಲೆಗ್ ಕಯಾಕಿಂಗ್ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಮುಂಜಾನೆ ಮತ್ತು ಸಂಜೆ ನೂರಾರ ಜನ ಸಿಂಗಲ್ ಪೆಡ್ಲಿಂಗ್ ಮಾಡುತ್ತಾರೆ. ಹೊರ ಜಿಲ್ಲೆಯಿಂದ ಸಾಕಷ್ಟು ಪ್ರವಾಸಿಗರು ಉಡುಪಿ ಕಡೆ ಬರುತ್ತಿದ್ದಾರೆ.

ಕರಾವಳಿಯತ್ತ ಪ್ರವಾಸಿಗರನ್ನು ಸೆಳೆಯುವುದಕ್ಕೆ ವಿನೂತನ ಪ್ರಯತ್ನ
ಸಿಂಗಲ್ ಲೆಗ್ ಕಯಾಕಿಂಗ್
Follow us on

ಉಡುಪಿ: ರಜಾದಿನಗಳು ಬಂದರೆ ಸಾಕು ಜನ ಪ್ರವಾಸಿ ತಾಣಗಳ ಕಡೆ ಮುಖ ಮಾಡುತ್ತಾರೆ. ಅದರಲ್ಲೂ ರಾಜ್ಯದ ಮೂಲೆ ಮೂಲೆಗಳಿಂದ ಕರವಾಳಿ ಜಿಲ್ಲೆಗೆ ಪ್ರವಾಸ ಕೈಗೊಳ್ಳುವವರೆ ಹೆಚ್ಚು. ಸದ್ಯ ಕೊರೊನಾ ಹಾವಳಿಯಿಂದ ದೇವಾಲಯ, ಬೀಚ್ಗೂ ಪ್ರವಾಸಿಗರ ಆಗಮನ ಕಡಿಮೆಯಾಗುತ್ತಿದೆ. ಅದರೆ ಬೀಚ್​ಗಳಿಗೆ ಪ್ರವಾಸಿಗರನ್ನು ಸೆಳೆಯುವುದಕ್ಕೆ ನೂತನ ಪ್ರಯತ್ನ ನಡೆಯುತ್ತಿದೆ.

ಉಡುಪಿ, ಮಂಗಳೂರು ಕಡೆಗೆ ಬಂದರೆ ಒಂದಲ್ಲ ಎರಡು ಅಲ್ಲ ಹತ್ತಾರು ಬೀಚ್​ಗಳು, ದ್ವೀಪಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಅದರೆ ಕೊರೊನಾ ಕಾರಣದಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಇದರಿಂದಾಗಿ ಕರಾವಳಿ ಪ್ರವಾಸೋದ್ಯಮಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಕರವಾಳಿ ತೀರದಲ್ಲಿ ವ್ಯಾಪಾರ ವ್ಯವಹಾರ ನಡೆಸಿ ಬದುಕು ಕಟ್ಟಿಕೊಳ್ಳುವ ಮಂದಿಗೂ ಸಂಕಷ್ಟ ಎದುರಾಗಿದೆ. ಅದರೆ ಪ್ರವಾಸಿಗರನ್ನು ಮತ್ತೆ ಸಮುದ್ರ ತೀರದ ಕಡೆಗೆ ಸೆಳೆಯುವುದಕ್ಕೆ ವಿನೂತನ ಪ್ರಯತ್ನ ನಡೆಯುತ್ತಲೇ ಇದೆ. ಬೋಟಿಂಗ್, ಸೀ ಗೇಮ್, ಸ್ಪೀಡ್ ಬೋಟಿಂಗ್, ರಿವರ್ ಬೋಟಿಂಗ್ ಹೀಗೆ ಪ್ರವಾಸಿಗರಿಗೆ ಥ್ರೀಲ್ ನೀಡುವ ಮೂಲಕ ಬೀಚ್​ಗಳಿಗೆ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ನಡೆಯುತ್ತವೆ. ಈ ನಡುವೆ ಸಿಂಗಲ್ ಲೆಗ್ ಕಯಾಕಿಂಗ್ ಬೋಟಿಂಗ್ ನಡೆಸುವುದಕ್ಕೆ ಮಂತ್ರ ಸರ್ಫಿಂಗ್ ಕ್ಲಬ್ ಪ್ರಯತ್ನ ನಡೆಸಿದೆ.

ಸಿಂಗಲ್ ಲೆಗ್ ಕಯಾಕಿಂಗ್ ಬೋಟಿಂಗ್ ನಡೆಸುವುದಕ್ಕೆ ಮಂತ್ರ ಸರ್ಫಿಂಗ್ ಕ್ಲಬ್ ಪ್ರಯತ್ನ ನಡೆಸಿದೆ

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಶಾಂಭವಿ ನದಿಯಲ್ಲಿ ಒಂಟಿ ಕಾಲು ಕಯಾಕಿಂಗ್ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಮುಂಜಾನೆ ಮತ್ತು ಸಂಜೆ ನೂರಾರ ಜನ ಸಿಂಗಲ್ ಪೆಡ್ಲಿಂಗ್ ಮಾಡುತ್ತಾರೆ. ಹೊರ ಜಿಲ್ಲೆಯಿಂದ ಸಾಕಷ್ಟು ಪ್ರವಾಸಿಗರು ಉಡುಪಿ ಕಡೆ ಬರುತ್ತಿದ್ದಾರೆ. ನದಿಯೊಳಗಿನ ಮ್ಯಾಂಗ್ರೋಸ್​ಗಳ ಒಳಗೆ ಪ್ರವಾಸಿಗರನ್ನು ಇನ್ಸ್ಟ್ರಕ್ಟರ್​ಗಳು ಕರೆದುಕೊಂಡು ಹೋಗುತ್ತಾರೆ. ಆರಾಮದಾಯಕ ಬೋಟಿಂಗ್ ಇದಾಗಿದ್ದು, ಮನಸ್ಸಿಗೆ ಹಿತ ಕೊಡುತ್ತದೆ.

ಶಾಂಭವಿ ನದಿಯಲ್ಲಿ ಸಿಂಗಲ್ ಲೆಗ್ ಕಯಾಕಿಂಗ್ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ

ಸೇಫ್ಟಿ ಜಾಕೆಟ್, ಫೈಬರ್ ಹ್ಯಾಂಡಲ್ಗಳನ್ನು ಸರ್ಫಿಂಗ್ ಕ್ಲಬ್ ಕೊಡುತ್ತಾರೆ. ಕರಾವಳಿಯಲ್ಲಿ ಸಿಕ್ಕಾಪಟ್ಟೆ ಬಿಸಿಲು ಇರುವುದರಿಂದ ವಾಟರ್ ಗೇಮ್ಸ್ ಕಡೆ ಜನ ಹೆಚ್ಚು ಮುಖ ಮಾಡುತ್ತಿದ್ದಾರೆ. ಸ್ವಿಮ್ಮಿಂಗ್, ಸರ್ಫಿಂಗ್, ಕಯಾಕಿಂಗ್ ಹೀಗೆ ವಿವಿಧ ವಾಟರ್ ಗೇಮ್ ಗಳಲ್ಲಿ ಪ್ರವಾಸಿಗರು ತೊಡಗಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ

ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಸೇವೆ ಶೀಘ್ರ ಆರಂಭ; 75 ಸಾವಿರ ಪ್ರಯಾಣಿಕರಿಗೆ ಅನುಕೂಲ!

ತುಪ್ಪದ ಬೆಡಗಿಗೆ ಖುಲಾಯಿಸಿದ ಅದೃಷ್ಟ; ಖಡಕ್​ ತನಿಖಾಧಿಕಾರಿಯಾಗಿ ಬರಲು ಸಿದ್ಧರಾಗುತ್ತಿದ್ದಾರೆ ರಾಗಿಣಿ ದ್ವಿವೇದಿ

Published On - 4:28 pm, Mon, 22 March 21