AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಕ್ಕೆ ಹೊರಟವರ ಬಾಳಲ್ಲಿ ವಿಧಿಯಾಟ: ಬಂಡೆಗೆ ಬಸ್ ಅಪ್ಪಳಿಸಿ 9 ಮಂದಿ ಸಾವು

ಉಡುಪಿ: ಅಂತಿಂಥಾ ಅಪಘಾತ ಅಲ್ಲ.. ಸ್ವತಃ ಯಮನೇ ಬಂದು ಬರಸಿಡಿಲಿನಂತೆ ಬಸ್​ಗೆ ಅಪ್ಪಳಿಸಿದಂತಿತ್ತು. ಇಡೀ ಬಸ್ ಅನ್ನೇ ಹೊಸಕಿ ಹಾಕಿದಂತಿತ್ತು. ಆ ಭೀಕರ ಹೊಡೆತಕ್ಕೆ ಒಳಗಿದ್ದವರಿಗೆ ದಿಕ್ಕೇ ತಿಳಿದಿಲ್ಲ. ವಿಧಿಯಾಟದ ಮುಂದೆ ಸೋತು ಕೆಲವರು ಘೋರವಾಗಿ ಪ್ರಾಣ ಬಿಟ್ರೆ, ಇನ್ ಕೆಲವರು ಗಾಯಗಳಿಂದ ನರಳಾಡ್ತಿದ್ರು. ಸಹಾಯಕ್ಕಾಗಿ ಅಂಗಲಾಚುತ್ತಿದ್ರು, ರಸ್ತೆಯಲ್ಲಿ ಕುಳಿತು ಗೋಗರೆಯುತ್ತಿದ್ರು. ನಿಜ.. ಇದೊಂದು ಭೀಕರ ದುರಂತ. ಈ ದೃಶ್ಯಗಳನ್ನು ನೋಡ್ತಿದ್ರೆನೇ ಎಲ್ಲರ ಮನಸು ಕಲಕುತ್ತೆ. ಹೃದಯ ಭಾರವಾಗುತ್ತೆ. ಕಣ್ಣೀರು ತುಂಬಿ ಬರುತ್ತೆ. ಆ ಪರಿ ಘೋರಾತಿಘೋರವಾಗಿ […]

ಪ್ರವಾಸಕ್ಕೆ ಹೊರಟವರ ಬಾಳಲ್ಲಿ ವಿಧಿಯಾಟ: ಬಂಡೆಗೆ ಬಸ್ ಅಪ್ಪಳಿಸಿ 9 ಮಂದಿ ಸಾವು
ಸಾಧು ಶ್ರೀನಾಥ್​
|

Updated on:Feb 16, 2020 | 2:46 PM

Share

ಉಡುಪಿ: ಅಂತಿಂಥಾ ಅಪಘಾತ ಅಲ್ಲ.. ಸ್ವತಃ ಯಮನೇ ಬಂದು ಬರಸಿಡಿಲಿನಂತೆ ಬಸ್​ಗೆ ಅಪ್ಪಳಿಸಿದಂತಿತ್ತು. ಇಡೀ ಬಸ್ ಅನ್ನೇ ಹೊಸಕಿ ಹಾಕಿದಂತಿತ್ತು. ಆ ಭೀಕರ ಹೊಡೆತಕ್ಕೆ ಒಳಗಿದ್ದವರಿಗೆ ದಿಕ್ಕೇ ತಿಳಿದಿಲ್ಲ. ವಿಧಿಯಾಟದ ಮುಂದೆ ಸೋತು ಕೆಲವರು ಘೋರವಾಗಿ ಪ್ರಾಣ ಬಿಟ್ರೆ, ಇನ್ ಕೆಲವರು ಗಾಯಗಳಿಂದ ನರಳಾಡ್ತಿದ್ರು. ಸಹಾಯಕ್ಕಾಗಿ ಅಂಗಲಾಚುತ್ತಿದ್ರು, ರಸ್ತೆಯಲ್ಲಿ ಕುಳಿತು ಗೋಗರೆಯುತ್ತಿದ್ರು.

ನಿಜ.. ಇದೊಂದು ಭೀಕರ ದುರಂತ. ಈ ದೃಶ್ಯಗಳನ್ನು ನೋಡ್ತಿದ್ರೆನೇ ಎಲ್ಲರ ಮನಸು ಕಲಕುತ್ತೆ. ಹೃದಯ ಭಾರವಾಗುತ್ತೆ. ಕಣ್ಣೀರು ತುಂಬಿ ಬರುತ್ತೆ. ಆ ಪರಿ ಘೋರಾತಿಘೋರವಾಗಿ ಜನ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ರು. ಯಾರೂ ಊಹಿಸದ ರೀತಿಯಲ್ಲಿ ಉಸಿರು ಚೆಲ್ಲಿ ಮಲಗಿದ್ರು.

ಪ್ರವಾಸಕ್ಕೆ ಹೊರಟಿದ್ದಾಗಲೇ ನಡೀತು ದುರಂತ..!  ನಿನ್ನೆ ಸಂಜೆ 5.30ರ ಸಮಯ. ಉಡುಪಿ ಜಿಲ್ಲೆಯ ಕುದುರೆಮುಖದ ಸುಂದರ ಪರ್ವತಶ್ರೇಣಿಯ ನಡುವಿನ ಹೆದ್ದಾರಿಯಲ್ಲಿ 35ಜನ್ರನ್ನು ಹೊತ್ತು ಖಾಸಗಿ ಬಸ್ ಬರುತ್ತಿತ್ತು. ಒಳಗಿದ್ದ ಯುವಕ-ಯುವತಿಯರು ಖುಷಿಯಲ್ಲಿದ್ರು. ಮೋಜು-ಮಸ್ತಿ ಮಾಡಿಕೊಂಡು, ಅಂತಾಕ್ಷರಿ ಹಾಡ್ಕೊಂಡು ಎಂಜಾಯ್ ಮಾಡ್ತಿದ್ರು.

ಒಂದೇ ಕಂಪನಿಯ 9 ಉದ್ಯೋಗಿಗಳು ದಾರುಣ ಅಂತ್ಯ: ಆದ್ರೆ, ಈ ಖುಷಿ ಹೆಚ್ಚು ಹೊತ್ತು ಉಳಿಯಲೇ ಇಲ್ಲ. ಗಾಟಿಯಿಂದಿಳಿದು ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದೆ. ಅಷ್ಟೇ.. ರಸ್ತೆಯ ಎಡಗಡೆ ಇದ್ದ ತಡೆಗೋಡೆಗೆ ಗುದ್ದಿದೆ. ಸ್ವಲ್ಪ ದೂರ ಬಂಡೆಯಿಂದ ಬಂಡೆಗೆ ಉಜ್ಜಿಕೊಂಡೇ ಹೋಗಿದೆ. ಇದ್ರ ಪರಿಣಾಮ ಬಸ್​ನಲ್ಲಿದ್ದ ಒಂದೇ ಕಂಪನಿಯ 9 ಮಂದಿ ಉದ್ಯೋಗಿಗಳು ಪ್ರಾಣ ಬಿಟ್ಟಿದ್ದಾರೆ. ಇನ್ನುಳಿದ 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ.

ಮೈಸೂರಿಂದ ಪ್ರಯಾಣ.. ಉಡುಪಿಯಲ್ಲಿ ಮರಣ..! ಫೆಬ್ರವರಿ 14ರಂದು ಮೈಸೂರಿನಿಂದ 35 ಜನ ಪ್ರವಾಸಕ್ಕೆ ತೆರಳಿದ್ರು. ನಂಜನಗೂಡು ಸಮೀಪದ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪನಿಯ ನೌಕರರೂ ಟ್ರಿಪ್​ಗೆ ಹೋಗಿದ್ರು. ಶೃಂಗೇರಿ, ಹೊರನಾಡು ಕಳಸ ಸುತ್ತಾಡಿದ್ದಾರೆ. ಅಲ್ಲಿಂದ ಉಡುಪಿ ಜಿಲ್ಲೆಯ ಮಲ್ಪೆ ಬೀಚ್​ಗೆ ಹೊರಟಿದ್ರು. ಆದ್ರೆ ಮಾರ್ಗಮಧ್ಯೆ ವಿಧಿ ಅಟ್ಟಹಾಸ ಮೆರೆದಿದೆ. ಮೃತರನ್ನು ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ರಾಧಾ ರವಿ, ಯೋಗೇಂದ್ರ, ಪ್ರೀತಂಗೌಡ, ಬಸವರಾಜು, ಅನುಜ್ಞಾ, ಪಿ.ರಂಜಿತಾ, ಶಾರೋಲ್, ಚಾಲಕ ಮಾರುತಿ ಅಂತಾ ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡಿರೋ 25ಜನರಿಗೆ ಕಾರ್ಕಳದ ಸಿಟಿ ಆಸ್ಪತ್ರೆ, ಕಾರ್ಕಳ ಸರ್ಕಾರಿ ಆಸ್ಪತ್ರೆ, ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಗಾಯಾಳುಗಳ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಪೊಲೀಸರ ತಂಡ ಆಸ್ಪತ್ರೆಯಲ್ಲಿ ಬೀಡು ಬಿಟ್ಟಿದೆ. ಈ ಅಪಘಾತಕ್ಕೆ ಕಿರಿದಾದ ರಸ್ತೆಯೇ ಕಾರಣ ಅಂತಾ ಹೇಳಲಾಗ್ತಿದೆ. ಸದ್ಯ ಅಪಘಾತ ಸ್ಥಳದಲ್ಲಿ ಇದ್ದ ಬಸ್​ನ್ನು ತೆರವುಗೊಳಿಸಲಾಗಿದೆ. ಅದೇನೆ ಇರಲಿ, ಪ್ರವಾಸಕ್ಕೆ ಹೋದ 9 ಮಂದಿ ಸಾವಿನ ಮನೆ ಸೇರಿದ್ದು ನಿಜಕ್ಕೂ ಘೋರ.

Published On - 2:45 pm, Sun, 16 February 20

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ