ಮಲ್ಪೆ ಸಮೀಪದ ಪ್ರವಾಸಿ ತಾಣದಲ್ಲಿ ಹೊಸ ವಿವಾದವೊಂದು ಎದ್ದಿದೆ. ಪಡುಕೆರೆ ಕಡಲ ತೀರದಲ್ಲಿ ಇರುವ ಹೋಮ್ ಸ್ಟೇಗಳ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ನೈತಿಕತೆ ಮತ್ತು ಕಾನೂನಿನ ಪ್ರಶ್ನೆ ಎತ್ತಿದ್ದಾರೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಹೋಮ್ ಸ್ಟೇ ಕಾಟೇಜ್ ಮಾಡಿದವರು ಆತಂಕಕ್ಕೊಳಗಾಗಿದ್ದಾರೆ.
ಇತ್ತೀಚೆಗೆ ಮಾಲ್ಡೀವ್ಸ್ ವಿಚಾರದಲ್ಲಿ ವಿವಾದ ಎದ್ದಾಗ ನಾವ್ಯಾಕೆ ನಮ್ಮ ಕರಾವಳಿಯ ಬೀಚ್ ಗಳ ಬಗ್ಗೆ ಗಮನಹರಿಸಲ್ಲ… ವಿದೇಶವನ್ನು ಮೀರಿಸುವ ಬೀಚ್ ನಮ್ಮಲ್ಲಿರುವಾಗ ಅದ್ಯಾಕೆ ಪ್ರವಾಸೋದ್ಯಮವನ್ನು ಅಟ್ರಾಕ್ಟ್ ಮಾಡುವಲ್ಲಿ ಹಿಂದೆ ಬಿದ್ದಿದ್ದೇವೆ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು. ವಿದೇಶಕ್ಕೆ ಹೋದದ್ದು ಸಾಕು ಬನ್ನಿ ನಮ್ಮ ಬೀಚ್ ಗಳಿಗೆ ಎಂದು ಜನಪ್ರತಿನಿಧಿಗಳು ಆಹ್ವಾನವನ್ನು ಕೂಡ ನೀಡಿದರು.
ಈ ನಡುವೆ ಸಮಸ್ಯೆಯೊಂದು ಶುರುವಾಗಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ ಹೋದರೆ ಯಾವ ರೀತಿಯಲ್ಲೂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಉಡುಪಿಯ ಮಲ್ಪೆ ಸಮೀಪದ ಪಡುಕರೆಯಲ್ಲಿ, ಪ್ರವಾಸಿಗಳಿಗಾಗಿ ನಿರ್ಮಾಣಗೊಂಡಿರುವ ಹೋಂ ಸ್ಟೇ ಗಳಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ತಡರಾತ್ರಿ ನಂತರ ಹೋಂ ಸ್ಟೇಯಲ್ಲಿ ಉಳಿದುಕೊಂಡ ಪ್ರವಾಸಿಗರು ನಿಯಮಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಪಡುಕೆರೆ ಬೀಚ್ ನಲ್ಲಿ ಹೋಂಸ್ಟೇ ಗಳಿಗೆ ಕಡಿವಾಣ ಹಾಕಲು ಜನ ಒತ್ತಾಯಿಸಿದ್ದಾರೆ. ಪಡುಕೆರೆ ಕಡೆಕಾರು ನಡುವೆ ಅಂದಾಜು 15 ಹೋಂಸ್ಟೇಗಳಿಗೆ. ನಮ್ಮ ಸಂಸ್ಕೃತಿ ಹಾಳಾಗುತ್ತದೆ. ಮದ್ಯಪಾನ, ಅಮಲು ಡ್ರಗ್ಸ್ ಗಾಂಜಾ ಸೇವನೆಯ ಆತಂಕವನ್ನು ಮಹಿಳೆಯರು ಹೊರಹಾಕಿದ್ದಾರೆ. ಹೋಂಸ್ಟೇ ಗಳು ಅನೈತಿಕ ಚಟುವಟಿಕೆಗಳ ತಾಣ ಅನ್ನೋದು ಗ್ರಾಮಸ್ಥರ ಸಂಶಯ.
ಈ ಬೆಳವಣಿಗೆ ಹೋಂಸ್ಟೇ ಮಾಲೀಕರ ನಿದ್ದೆಗೆಡಿಸಿದೆ. ಕೆಲವರು ನೆಮ್ಮದಿಯಿಂದ ವ್ಯವಹಾರ ಮಾಡೋಕೆ ಬಿಡಲ್ಲ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದ ಸೂಚನೆಗೆ ಅನುಗುಣವಾಗಿ ಹೋಂಸ್ಟೇ ನಡೆಸುತ್ತಿದ್ದೇವೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ಮಾತ್ರ ಹೋಂಸ್ಟೇ ಇದೆ. ಎನ್ಒಸಿ ಪರ್ಮಿಷನ್ ಪಡೆದೇ ಹೋಮ್ ಸ್ಟೇ ನಡೆಸುತ್ತಿದ್ದೇವೆ ಅಂತಿದ್ದಾರೆ ಹೋಂ ಸ್ಟೇ ಮಾಲೀಕರು.
ಇದನ್ನೂ ಓದಿ: Shivaratri Special Recipe : ಮಹಾಶಿವರಾತ್ರಿಗೆ ಸಬ್ಬಕ್ಕಿಯ ಈ ರೆಸಿಪಿಗಳನ್ನು ಮಿಸ್ ಮಾಡ್ಲೆಬೇಡಿ, ಇಲ್ಲಿದೆ ಸಿಂಪಲ್ ರೆಸಿಪಿ
ಸಾರ್ವಜನಿಕ ರಸ್ತೆ ಆಗಿರುವ ಕಾರಣ ಪೊಲೀಸ್ ಬೀಟ್ ಜಾಸ್ತಿ ಮಾಡಬೇಕೆಂಬ ಒತ್ತಾಯವಿದೆ. ಗ್ರಾಮಸ್ಥರು ಸಭೆ ನಡೆಸಿ ಶಾಸಕ ಯಶ್ ಪಾಲ್ ಸುವರ್ಣ ಮುಂದೆ ಸಮಸ್ಯೆ ತೋಡಿಕೊಂಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಗುರಿ ಒಂದೆಡೆ. ಗ್ರಾಮದಲ್ಲಿ ಯಾವುದೇ ಹೋಂ ಸ್ಟೇಗಳು ಇರಬಾರದು ಎಂಬ ಒತ್ತಾಯ ಮತ್ತೊಂದೆಡೆ. ಹೀಗಾದರೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು ಹೇಗೆ? ಎರಡು ಕಡೆಯವರ ಸಭೆ ನಡೆಸಿ ನಿಯಮಗಳನ್ನ ರೂಪಿಸಿದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:51 am, Sat, 9 March 24