ಉಡುಪಿ: ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ (Veer Savarkar) ಬ್ಯಾನರ್ ಹಾಕಿರುವ ವಿಚಾರವಾಗಿ, ಪಿಎಫ್ಐ ಸಂಘಟನೆ ದೇಶದ ಅನಾಗರಿಕ ಸಂಘಟನೆಯಾಗಿದ್ದು, ಯಾರು ದೇಶಪ್ರೇಮಿ ಎಂದು PFI ಮತ್ತು ಎಸ್ಡಿಪಿಐಗೆ ಗೊತ್ತಿಲ್ಲ. ಕಾಂಗ್ರೆಸ್ ಡೋಂಗಿ ದೇಶಭಕ್ತರನ್ನು ಇಟ್ಟುಕೊಂಡಿದೆ ಎಂದು ಬಿಜೆಪಿ (BJP) ಮುಖಂಡ ಯಶ್ ಪಾಲ್ ಸುವರ್ಣ (Yash Pal Suvarna) ವಾಗ್ದಾಳಿ ಮಾಡಿದ್ದಾರೆ. ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಬ್ಯಾನರ್ ಹಾಕಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೆ ಮಾತನಾಡಿದ ಅವರು ಬ್ರಹ್ಮಗಿರಿ ಸರ್ಕಲಲ್ಲಿ ಸಾವರ್ಕರ್ ಪುತ್ಥಳಿಯನ್ನು ಅನಾವರಣ ಮಾಡುತ್ತೇವೆ. ಕಾಂಗ್ರೆಸ್ ನಾಯಕರ ಅಂಗಳದಲ್ಲಿ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂದು ಎಂದರು.
ಅಂದು ಜಿನ್ನಾ ದೇಶ ವಿಭಜನೆ ಮಾಡಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಜಿನ್ನಾನ ಮತ್ತೊಂದು ರೂಪ. ಸಿದ್ದರಾಮಯ್ಯ ಮತ್ತೆ ದೇಶ ವಿಭಜನೆ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಅರಳು-ಮರಳಿನ ಹೇಳಿಕೆಯನ್ನ ಕೊಟ್ಟಿದ್ದಾರೆ. ಸಿದ್ದರಾಮಯ್ಯನ ಮನೆ ಅಂಗಳದಲ್ಲೂ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೀರ ಸಾವರ್ಕರ್ ದೇಶಭಕ್ತಿ ಏನು ಎಂಬುದು ಕಾಂಗ್ರೆಸ್ಗೆ ತೋರಿಸಿ ಕೊಡುತ್ತೇವೆ. ವೀರ ಸಾವರ್ಕರ್ ಅವರ ಹೋರಾಟ ಸಾಧನೆ ಏನು ಎಂದು ತಿಳಿದುಕೊಳ್ಳಿ. ಸಾವರ್ಕರ್ಗೆ ಎರಡು ಬಾರಿ ಜೀವಾವಧಿ ಶಿಕ್ಷೆಯನ್ನು ಬ್ರಿಟಿಷರು ಕೊಟ್ಟಿದ್ದರು ಎಂದು ಹೇಳಿದರು.
ಹಿಂದೂ ಮಹಾಸಭಾ ಮುಖಂಡ ಪ್ರಮೋದ್ ಉಚ್ಚಿಲ್ ಮಾತನಾಡಿ ಎಸ್ಡಿಪಿಐ ಪಿಎಫ್ಐ ನಾಯಕರು ಕಟೌಟ್ ತೆಗೆಯಲು ಕಂಪ್ಲೇಂಟ್ ಕೊಟ್ಟಿದ್ದಾರೆ. ಪಾಕಿಸ್ತಾನ ಮತ್ತು ಜಿಹಾದಿ ಮನಸ್ಥಿತಿಯವರಿಂದ ವಿರೋಧ ಬಂದಿದೆ. ವೀರ ಸಾವರ್ಕರ್ ಮತ್ತು ನೇತಾಜಿ ಬೋಸ್ ಬಗ್ಗೆ ಇವರಿಗೆ ಏನು ಗೊತ್ತಿದೆ ? ಎಂದು ಪ್ರಶ್ನಿಸಿದರು.
ನಿಜವಾಗಿ ದೇಶಕ್ಕೆ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದು ಸಾವರ್ಕರ್ ಮತ್ತು ನೇತಾಜಿ. ಇಂದಿರಾಗಾಂಧಿಯವರು ಸಾವರ್ಕರ್ಗೆ ಗೌರವ ಕೊಟ್ಟದ್ದು ಯಾಕೆ? ಕಾಂಗ್ರೆಸ್, ಎಸ್ಡಿಪಿಐಯವರಿಗೆ ಇತಿಹಾಸ ಗೊತ್ತಿಲ್ಲ. ಕಾಂಗ್ರೆಸ್ ರಾಜಕೀಯ ಬಿಟ್ಟು ಬುದ್ಧಿವಂತರಾಗಲಿ. ನೈಜ ಹೋರಾಟಗಾರರಿಗೆ ಕಾಂಗ್ರೆಸ್ ಬೆಲೆ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಬ್ಯಾನರ್ ವಿಚಾರವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮೂರನೇ ದಿನವೂ ಬಿಗಿ ಭದ್ರತೆ ಮಾಡಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ BJP ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಸಾವರ್ಕರ್ ಬ್ಯಾನರ್ಗೆ ವಿರೋಧಿಸಿದ್ದ ಹಿನ್ನೆಲೆ ಮುತ್ತಿಗೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬಿಜೆಪಿ ಕಾಯಕರ್ತರನ್ನು ತಡೆದು ವಾಪಸ್ ಕಳುಹಿಸಿದ್ದಾರೆ.