Viral Video: ಹುಲಿವೇಷದವರ ಜೊತೆ ಸೇರಿ ಡ್ಯಾನ್ಸ್ ಮಾಡಿದ ಉಡುಪಿಯ ಬಾಲಕಿ; ಈ ಮುದ್ದಾದ ವಿಡಿಯೋ ಮಿಸ್ ಮಾಡಬೇಡಿ
Udupi News: ಮೊದಲು ಹುಲಿವೇಷ ಕುಣಿಯುವವನೊಂದಿಗೆ ನಿಲ್ಲಲು ಹಿಂದೇಟು ಹಾಕುವ ಆ ಬಾಲಕಿ ಕೆಲವು ಸೆಕೆಂಡುಗಳ ನಂತರ ತಾನು ಕೂಡ ಹೆಜ್ಜೆ ಹಾಕುತ್ತಾ ಡ್ಯಾನ್ಸ್ ಮಾಡುತ್ತಾಳೆ.
ಉಡುಪಿ: ಮಕ್ಕಳು ದೇವರಂತೆ ಎಂಬ ಮಾತಿದೆ. ಮಕ್ಕಳ ಮನಸಿನಲ್ಲಿ ಯಾವ ಕಲ್ಮಶವೂ ಇರುವುದಿಲ್ಲ. ಎದುರಲ್ಲಿ ಯಾರೇ ಇದ್ದರೂ ಮಕ್ಕಳು ಒಂಚೂರೂ ಹಿಂಜರಿಯದೆ ತಮಗೆ ಸರಿ ಎನಿಸಿದ್ದನ್ನು ಮಾಡುತ್ತಾರೆ. ಆ ರೀತಿ ಮಕ್ಕಳು ಏನು ಮಾಡಿದರೂ ಅದನ್ನು ನೋಡಲು ಬಹಳ ಚಂದ. ಉಡುಪಿಯಲ್ಲಿ (Udupi) ಪುಟ್ಟ ಹುಡುಗಿಯೊಬ್ಬಳು ಹುಲಿವೇಷದವರ ಜೊತೆ ಸೇರಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿರುವ ಮುದ್ದಾದ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲೇ ಸರ್ಕಲ್ ಹಾಕಿಕೊಂಡು ಹುಲಿವೇಷದವರು (Huli Vesha) ಕುಣಿಯುತ್ತಿದ್ದಾಗ ಅವರ ಮಧ್ಯೆ ಹೋಗುವ ಪುಟ್ಟ ಬಾಲಕಿ ತನ್ನ ಪುಟಾಣಿ ಕಾಲುಗಳನ್ನು ಎತ್ತಿ ಹಾಕುತ್ತಾ ಹುಲಿವೇಷದ ನೃತ್ಯದ ತಾಳಕ್ಕೆ ಹೆಜ್ಜೆ ಹಾಕಿದ್ದಾಳೆ.
ಹುಲಿವೇಷ ಎಂದರೆ ಹೇಗಿರುತ್ತದೆ ಎಂಬುದು ಬಹಳಷ್ಟು ಜನಕ್ಕೆ ಗೊತ್ತಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಈ ಹುಲಿವೇಷವೆಂಬ ಜನಪದ ನೃತ್ಯ ಬಹಳ ಪ್ರಸಿದ್ಧಿ ಪಡೆದಿದೆ. ಈ ಹುಲಿವೇಷದ ನೃತ್ಯವನ್ನು ಎಲ್ಲರಿಗೂ ಸಿನಿಮಾ ಮೂಲಕ ತಲುಪಿಸಿದ್ದು ನಟ ರಕ್ಷಿತ್ ಶೆಟ್ಟಿ. ಉಳಿದವರು ಕಂಡಂತೆ ಸಿನಿಮಾದಲ್ಲಿ ಹುಲಿವೇಷದ ನೃತ್ಯ ಮಾಡುವ ರಕ್ಷಿತ್ ಶೆಟ್ಟಿಯ ಸ್ಟೈಲ್ಗೆ ಫಿದಾ ಆಗದವರೇ ಇಲ್ಲ. ಈ ಹುಲಿವೇಷದ ಆಚರಣೆ ಇಂದಿಗೂ ಕರಾವಳಿಯಲ್ಲಿದೆ.
OMG ! this is super cute ?? pic.twitter.com/rFfink1s39
— Visit Udupi ?? (@VisitUdupi) August 13, 2022
ಉಡುಪಿಯ ರಸ್ತೆ ಬೀದಿಯಲ್ಲಿ ಹುಲಿವೇಷದ ತಂಡದವರು ಹುಲಿವೇಷ ಪ್ರದರ್ಶನ ನೀಡುತ್ತಿದ್ದಾಗ ಮಹಿಳೆಯೊಬ್ಬರು ಹೋಗಿ ಹುಲಿವೇಷ ಕುಣಿಯುವವನಿಗೆ ಹಾರ ಹಾಕುತ್ತಾರೆ. ಆಗ ಅಲ್ಲಿಗೆ ಬರುವ ಚಿಕ್ಕ ಹುಡುಗಿಯ ಕೈ ಹಿಡಿಯುವ ಹುಲಿವೇಷದವರು ಆಕೆಯನ್ನು ಮಧ್ಯೆ ನಿಲ್ಲಿಸಿ ನೃತ್ಯ ಮಾಡಲು ಶುರು ಮಾಡುತ್ತಾರೆ. ಆಗ ಅಚ್ಚರಿಯೆಂಬಂತೆ ಆ ಬೀಟ್ಗೆ ತಾನೂ ಹೆಜ್ಜೆ ಹಾಕುವ ಆ ಬಾಲಕಿ ಹುಲಿವೇಷದ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.
ಮೊದಲು ಹುಲಿವೇಷ ಕುಣಿಯುವವನೊಂದಿಗೆ ನಿಲ್ಲಲು ಹಿಂದೇಟು ಹಾಕುವ ಆ ಬಾಲಕಿ ಕೆಲವು ಸೆಕೆಂಡುಗಳ ನಂತರ ತಾನು ಕೂಡ ಹೆಜ್ಜೆ ಹಾಕುತ್ತಾ ಡ್ಯಾನ್ಸ್ ಮಾಡುತ್ತಾಳೆ. ಅಲ್ಲಿದ್ದ ಹುಲಿವೇಷ ಹಾಕಿದ ಕಲಾವಿದರು ಆಕೆಗೆ ಪ್ರೋತ್ಸಾಹ ನೀಡುತ್ತಾ ಚಪ್ಪಾಳೆ ತಟ್ಟುವುದನ್ನು ವಿಡಿಯೋದಲ್ಲಿ ನೋಡಬಹುದು.
Pili Vesha in “Tiger Masque” is a folk dance unique in coastal Karnataka.
Here young boys and men paint their body with yellow and brown stripes, wear a tiger mask on their face and dance to the beats of the drums. Pili vesha is performed during Dasara and Krishna Janmastami.
— Visit Udupi ?? (@VisitUdupi) August 13, 2022
ಈ ವಿಡಿಯೋ ನೋಡಿದ ನೆಟ್ಟಿಗರು ಆ ಬಾಲಕಿಯನ್ನು ಸೂಪರ್ಸ್ಟಾರ್ ಎಂದು ಕರೆದು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಕರಾವಳಿ ಕರ್ನಾಟಕದ ವಿಶಿಷ್ಟವಾದ ಜಾನಪದ ನೃತ್ಯವಾಗಿರುವ ಹುಲಿವೇಷವನ್ನು ಇಂದಿಗೂ ಆಚರಿಸಲಾಗುತ್ತದೆ. ಯುವಕರು ಮತ್ತು ಪುರುಷರು ತಮ್ಮ ದೇಹದ ಮೇಲೆ ಹುಲಿಯಂತೆ ಹಳದಿ ಮತ್ತು ಕಂದು ಬಣ್ಣದ ಪಟ್ಟೆಗಳನ್ನು ಬಳಿದುಕೊಂಡು, ಮನೆ-ಮನೆಗೆ ಹೋಗಿ ಹುಲಿವೇಷದ ನೃತ್ಯ ಮಾಡುತ್ತಾರೆ. ದಸರಾ ಮತ್ತು ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಹುಲಿ ವೇಷವನ್ನು ಹಾಕಲಾಗುತ್ತದೆ.