ಭಕ್ತರ ಸೋಗಿನಲ್ಲಿ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ: ತಮಿಳುನಾಡು ಮೂಲದ ಇಬ್ಬರು ಸರಗಳ್ಳಿಯರು ಸೆರೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2022 | 8:45 PM

ಭಕ್ತರ ಸೋಗಿನಲ್ಲಿ ದೇವಾಲಯಕ್ಕೆ ಬಂದಿದ್ದ ಸರಗಳ್ಳಿಯರು, ಭಕ್ತರೋಬ್ಬರ ಕೊರಳಿನಲ್ಲಿದ್ದ ಚಿನ್ನ ಸರಕ್ಕೆ ಕೈ ಹಾಕಿದ್ದರು. ಸರಗಳ್ಳಿಯರ ಕೈಚಳಕ ಗಮನಿಸಿ ಸ್ಥಳೀಯರು ಸೆರೆ ಹಿಡಿದಿದ್ದಾರೆ.

ಭಕ್ತರ ಸೋಗಿನಲ್ಲಿ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ: ತಮಿಳುನಾಡು ಮೂಲದ ಇಬ್ಬರು ಸರಗಳ್ಳಿಯರು ಸೆರೆ
ಪೊಲೀಸ್ ವಶದಲ್ಲಿರುವ ಸರಗಳ್ಳಿಯರು.
Follow us on

ಉಡುಪಿ: ದೇವಸ್ಥಾನದಲ್ಲಿ ಸರಗಳ್ಳತನ ಮಾಡಿದ್ದ (Chain snatcher) ಕೋಟದಲ್ಲಿ ತಮಿಳುನಾಡು ಮೂಲದ ಸರಗಳ್ಳಿಯರ ಸೆರೆ ಹಿಡಿಯಲಾಗಿದೆ. ಗಾಯತ್ರಿ(40) ಕಾಳಿ(35) ಪೊಲೀಸ್ ವಶದಲ್ಲಿರುವ ಸರಗಳ್ಳಿಯರು. ಕೋಟ ಅಮೃತೇಶ್ವರಿ ದೇವಳದ ಆವರಣದಲ್ಲಿ ಘಟನೆ ನಡೆದಿದೆ. ಭಕ್ತರ ಸೋಗಿನಲ್ಲಿ ದೇವಾಲಯಕ್ಕೆ ಬಂದಿದ್ದ ಸರಗಳ್ಳಿಯರು, ಭಕ್ತರೋಬ್ಬರ ಕೊರಳಿನಲ್ಲಿದ್ದ ಚಿನ್ನ ಸರಕ್ಕೆ ಕೈ ಹಾಕಿದ್ದರು. ಸರಗಳ್ಳಿಯರ ಕೈಚಳಕ ಗಮನಿಸಿ ಸ್ಥಳೀಯರು ಸೆರೆ ಹಿಡಿದಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ. ಬೆಳಗಾವಿ ನಗರದ ಉಜ್ವಲ್ ನಗರದಲ್ಲಿ ಗಾಳಿಪಟ ಹಾರಿಸುವಾಗ ಟೆಸರ್​ ಮೇಲಿಂದ ಬಿದ್ದು 11 ವರ್ಷದ ಅರ್ಮಾನ್ ದಫೇದಾರ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾತ್ರಿ ಮಲಗಿದ್ದ ವೇಳೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

ರಾಯಚೂರು: ನಗರದಲ್ಲಿ ಮತ್ತೊಂದು ಕೊಲೆ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ರಾತ್ರಿ ಮಲಗಿದ್ದ ವೇಳೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಬಸವರಾಜ ಹೊನ್ನಪ್ಪ(37) ಕೊಲೆಯಾದ ವ್ಯಕ್ತಿ. ಹಂತಕರು ಚಾಕುವಿನಿಂದ ಹೊಟ್ಟೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ

ಕಲಬುರಗಿ: ಬಸಂತನಗರದಲ್ಲಿ ಹಣದ ವಿಚಾರಕ್ಕೆ ಸಂಬಂಧಿಗಳಿಂದಲೇ ಲಕ್ಷ್ಮೀಪುತ್ರ(45) ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ. ಹಣದ ವಿಚಾರಕ್ಕೆ ಲಕ್ಷ್ಮೀಪುತ್ರ ಪತ್ನಿಯ ಸಹೋದರ ಶಿವಕಾಂತ್ ಮತ್ತು ಪ್ರಶಾಂತ್ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಲಕ್ಷ್ಮೀಪುತ್ರ ತನ್ನ ಪತ್ನಿಯ ಸಹೋದರರಿಗೆ 8 ಲಕ್ಷ ಹಣ ನೀಡಿದ್ದರು. ಕೊಟ್ಟ ಹಣವನ್ನು ವಾಪಾಸ್ ಕೇಳಿದಕ್ಕೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದವರು ಅರೆಸ್ಟ್

ಬೆಂಗಳೂರು: ಶಿವಮೊಗ್ಗದಿಂದ ಬಂದು ಗಂಧದ ಮರದ ತುಂಡುಗಳನ್ನ ಕದ್ದು ಸಾಗಿಸುತ್ತಿದ್ದ ಗ್ಯಾಂಗನ್ನು ಬೆಂಗಳೂರು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಮೂವರು ಶ್ರೀಗಂಧ ಕಳ್ಳರನ್ನ ಬಂಧಿಸಿ 150 ಕೆಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ನಂದಿನಿಲೇಔಟ್, ಆರ್.ಎಂ.ಸಿ ಯಾರ್ಡ್​ನಲ್ಲಿ ಶ್ರೀಗಂಧ ಮರ ಕಡಿದು ಮಾರುತಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ.

ನಿನ್ನೆ ಹೆಂಡತಿ ಇಂದು ಗಂಡ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಧನಮಿಟ್ಟೇನಹಳ್ಳಿಯಲ್ಲಿ ನಿನ್ನೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಪತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿನ್ನೆ ಮನೆಯಲ್ಲಿ ವಿಷ ಸೇವಿಸಿ ಪತ್ನಿ ಸುನಿತಾ(25) ಆತ್ಮಹತ್ಯೆ ಹಿನ್ನೆಲೆ ಪತಿ ಮೋಹನ್ ಕುಮಾರ್​ನನ್ನು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಕಳಿಸಿದ್ದರು. ಇಂದು ಮನೆಗೆ ಬಂದು ಮೋಹನ್​ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ವಿರುದ್ಧ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:44 pm, Thu, 6 October 22