ಉಡುಪಿಯಲ್ಲಿ ಸಿಲಿಂಡರ್ ಸ್ಫೋಟ! ಇಬ್ಬರು ದುರ್ಮರಣ ಓರ್ವನಿಗೆ ಗಂಭೀರ ಗಾಯ

| Updated By: sandhya thejappa

Updated on: Mar 21, 2022 | 12:59 PM

ಪೊಲೀಸರಿಂದಲೇ ರಕ್ತಚಂದನ ತುಂಡು ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್​ಪೆಕ್ಟರ್​ ಮತ್ತು ಇಬ್ಬರು ಪಿಎಸ್ಐ ಗಳಿಗೆ ಸಂಕಷ್ಟ ಎದುರಾಗಿದೆ. ಆರೋಪಿಗಳು ಕಳೆದ ಅಕ್ಟೋಬರ್ನಲ್ಲಿ ಬೆಳ್ತಂಗಡಿ ಸಮೀಪ ವೆನೂರು ಅರಣ್ಯ ಬಳಿ ಸಾಗಿಸುತ್ತಿದ್ದರು.

ಉಡುಪಿಯಲ್ಲಿ ಸಿಲಿಂಡರ್ ಸ್ಫೋಟ! ಇಬ್ಬರು ದುರ್ಮರಣ ಓರ್ವನಿಗೆ ಗಂಭೀರ ಗಾಯ
ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ
Follow us on

ಉಡುಪಿ: ಸಿಲಿಂಡರ್ ಸ್ಫೋಟಗೊಂಡು ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಕಾಪು ತಾಲೂಕಿನ ಫಕೀರನಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ರಜಾಕ್ ಮಲ್ಲಾರ್, ರಜಬ್ ಚಂದ್ರನಗರ ಮೃತ ದುರ್ದೈವಿಗಳು. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದೆ. ಇನ್ನು ಸಿಲಿಂಡರ್ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ.

ಅರೋಪಿ ಪೊಲೀಸರಿಗೆ ಸಂಕಷ್ಟ:
ಪೊಲೀಸರಿಂದಲೇ ರಕ್ತಚಂದನ ತುಂಡು ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್​ಪೆಕ್ಟರ್​ ಮತ್ತು ಇಬ್ಬರು ಪಿಎಸ್ಐ ಗಳಿಗೆ ಸಂಕಷ್ಟ ಎದುರಾಗಿದೆ. ಆರೋಪಿಗಳು ಕಳೆದ ಅಕ್ಟೋಬರ್​​ನಲ್ಲಿ ಬೆಳ್ತಂಗಡಿ ಸಮೀಪ ವೆನೂರು ಅರಣ್ಯ ಬಳಿ ಸಾಗಿಸುತ್ತಿದ್ದರು. ರಾಮಮೂರ್ತಿ ನಗರ ಪೊಲೀಸರು ಹ್ಯಾಂಡ್ ಕಪ್ ಹಾಕಿದ್ದರು. ಪೋಲಿಸರು ಫೈರ್ ಮಾಡಿ ಎಸ್ಕೇಪ್ ಆಗಿದ್ದರು. ಐದು ತಿಂಗಳು ಕಳೆದರು ಜಪ್ತಿ ಪ್ರಕ್ರಿಯೆ ಕೈಗೊಳ್ಳದೇ ದುರ್ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ.

5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ:
ಬೆಂಗಳೂರಿನಲ್ಲಿ ಮನೆ ಕಿಟಕಿ ಮುರಿದು ಚಿನ್ನಾಭರಣವನ್ನು ಎಗರಿಸಿದ್ದಾರೆ. ಈ ಘಟನೆ ನಾಗರಬಾವಿ ಬಳಿಯ ಎನ್ಜಿಇಎಫ್ ಲೇಔಟ್​ನಲ್ಲಿ ಹನುಮೇಗೌಡ ಎಂಬುವವರ ಮನೆಯಲ್ಲಿ ನಡೆದಿದೆ. ಹನುಮೇಗೌಡ ಕುಟುಂಬ ಸಮೇತ ಹೊರಗೆ ಹೋಗಿದ್ದರು. ಮನೆಗೆ ವಾಪಸ್ ಬಂದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳಿಂದ ಕಿಟಕಿ ಗ್ರಿಲ್ ಮುರಿದು ಚಿನ್ನಾಭರಣ ಕಳವು ಮಾಡಿದ್ದಾರೆ. 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾದ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ

ಮದರಸಾಗಳಲ್ಲಿ ಇವತ್ತಿನ ಕಾಲದ ಶಿಕ್ಷಣ ಕೊಡುತ್ತಿಲ್ಲ, ಏಕರೂಪದ ಶಿಕ್ಷಣ ನೀಡುವ ಆಸೆ ನಮಗಿದೆ: ಬಿ.ಸಿ ನಾಗೇಶ್

ಈಗ ಜನರು ಯಾರಲ್ಲಿ ಪುನೀತ್​ ಅವರನ್ನು ಕಾಣ್ತಾರೆ? ಉತ್ತರ ನೀಡಿದ ಯುವ ರಾಜ್​ಕುಮಾರ್​