ಉಡುಪಿಯ ಯುವಕನಿಗೆ ಬಂತು ಪಾಕಿಸ್ತಾನದಿಂದ ವಾಟ್ಸಪ್​ ಮೆಸೇಜ್

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ಕಾರ್ಕಳದ ಯುವಕನೊಬ್ಬ ಪಾಕಿಸ್ತಾನದ ಸಂಖ್ಯೆಯಿಂದ ಅನುಮಾನಾಸ್ಪದ ವಾಟ್ಸಪ್ ಸಂದೇಶವನ್ನು ಸ್ವೀಕರಿಸಿದ್ದಾನೆ. ಸಿವಿಲ್ ಡಿಫೆನ್ಸ್ ಅಧಿಕಾರಿಗಳು ಸೈಬರ್ ಅಪರಾಧಿಗಳು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ. ಯಾವುದೇ ಅನುಮಾನಾಸ್ಪದ ಸಂದೇಶ ಅಥವಾ ಲಿಂಕ್‌ಗಳಿಗೆ ಪ್ರತಿಕ್ರಿಯಿಸದಂತೆ ಮತ್ತು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ.

ಉಡುಪಿಯ ಯುವಕನಿಗೆ ಬಂತು ಪಾಕಿಸ್ತಾನದಿಂದ ವಾಟ್ಸಪ್​ ಮೆಸೇಜ್
ವಾಟ್ಸಪ್​ ಸಂದೇಶ
Edited By:

Updated on: May 10, 2025 | 4:31 PM

ಉಡುಪಿ, ಮೇ 10: ಭಾರತ ಮತ್ತು ಪಾಕಿಸ್ತಾನ ಯುದ್ಧದ ಉದ್ವಿಗ್ನತೆ ನಿರ್ಮಾಣವಾಗಿದೆ. ಈ ನಡುವೆ ಕಾರ್ಕಳದ (Karkala) ಯುವಕನಿಗೆ ಪಾಕಿಸ್ತಾನ ನಂಬರ್​ನಿಂದ ವಾಟ್ಸಪ್ (Whatsapp) ಮೂಲಕ ಸಂದೇಶ ಬಂದಿದೆ. ಕಾರ್ಕಳದ ಬಜಗೋಳಿಯ ಸುಶಾಂತ್ ಎಂಬವರಿಗೆ ಶನಿವಾರ ಬೆಳಗ್ಗೆ 10:24 ಕ್ಕೆ ಹೌ ಆರ್ ಯು ಎಂದು ಅನಾಮಿಕ ವ್ಯಕ್ತಿಯಿಂದ ಸಂದೇಶ ಬಂದಿದೆ. ಗಡಿಯಲ್ಲಿ ಯುದ್ಧದ (War) ವಾತಾವರಣ ಇರುವಾಗಲೇ ಸಂದೇಶ ಬಂದಿದ್ದರಿಂದ ಆತಂಕಗೊಂಡ ಸುಶಾಂತ್ ಕೂಡಲೆ ನಂಬರ್ ಬ್ಲಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂತಹ ಯಾವುದೇ ಸಂದೇಶಗಳಿಗೆ ರಿಯಾಕ್ಟ್ ಮಾಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಸಿವಿಲ್ ಡಿಫೆನ್ಸ್ ಅಧಿಕಾರಿಗಳಿಂದ ಎಚ್ಚರಿಕೆ

ಭಾರತ ಮತ್ತು ಪಾಕಿಸ್ತಾನ ನಡುವ ಉದ್ವಿಗ್ನತೆ ಸಂದರ್ಭದಲ್ಲಿ ಸೈಬರ್ ಕಳ್ಳರ ಹಾವಳಿ ನಡೆಯುವ ಆತಂಕ ಎದುರಾಗಿದೆ. ಹೀಗಾಗಿ ಯಾವುದೇ ಸೈಬರ್ ಕಳ್ಳತನಕ್ಕೆ ಒಳಪಡದಂತೆ ಸಿವಿಲ್ ಡಿಫೆನ್ಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ನಿಮ್ಮ ಏರಿಯಾ ಸೇಫ್ ಇಲ್ಲ, ಅಪಾರ್ಟ್ಮೆಂಟ್ ಡೇಂಜರ್ ನಲ್ಲಿದೆ, ಬಂಕರ್ ಗಳ‌ ಮಾಹಿತಿ ಕೊಡಲಾಗುತ್ತದೆ, ಸ್ಥಳಾಂತರದ ಸುದ್ದಿ ನೀಡಲಾಗುತ್ತೆ ಈ ಅಪ್ಲಿಕೇಶನ್ ಓಪನ್ ಮಾಡಿ ಎಂಬಿತ್ಯಾದಿ ಮೇಸೆಜ್, ಮೈಲ್​ಗಳು ಬರುವ ಸಾಧ್ಯತೆ ಇದೆ. ಇಂತಹ ಸುಳ್ಳು ಸುದ್ದಿಗೆ ಕಿವಿಗೊಡದಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಮಂಗಳೂರು: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಅಲರ್ಟ್: ಬೇಗ ಬರಲು ಪ್ರಯಾಣಿಕರಿಗೆ ಸೂಚನೆ
ಸುಳ್ಳು ಸುದ್ದಿಗಳನ್ನ ಹರಡುವವರ ವಿರುದ್ಧ ಕ್ರಮ: ದಯಾನಂದ್ ಎಚ್ಚರಿಕೆ

ಲಿಂಕ್ ಕಳುಹಿಸಲ್ಲ, ಕಂಟ್ರೋಲ್ ರೂಂನಿಂದ ಯಾರಿಗೂ ಕಾಲ್ ಅಥವಾ ಮೆಸೇಜ್ ಬರಲ್ಲ. ಸೇನೆ ಮತ್ತು ಸರ್ಕಾರದ ಯಾವುದೇ ಮಾಹಿತಿ ಇದ್ದರೂ ಮಾಧ್ಯಮ ಅಥವಾ ರೇಡಿಯೋ ಮೂಲಕ ಕೊಡಲಾಗುತ್ತದೆ. ಸೈಬರ್ ಕ್ರಿಮಿನಲ್ಸ್ ಯುದ್ಧದ ಸಮಯದ ಅವಕಾಶ ಉಪಯೋಗಿಸಿಕೊಂಡು ಯಾಮಾರಿಸುವ ಸಾಧ್ಯತೆ ಹೆಚ್ಚಿರುತ್ತದೆ.‌ ಹೀಗಾಗಿ ಯಾವುದೇ ಒಟಿಪಿ, ನಿಮ್ಮ ವೈಯಕ್ತಿಕ ಮಾಹಿತಿ ಶೇರ್ ಮಾಡಬೇಡಿ ಎಂದು ಮನವಿ ಮಾಡಲಾಗಿದೆ.

ಪ್ರಧಾನಿ ಮೋದಿ ವಿರುದ್ಧ ಅವಹೇಳನ ಪೋಸ್ಟ್

ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಜಾವೀದ್ ಎಂಬ ಯುವಕ, “ಪ್ರಧಾನಿ ಮೋದಿಯವರು ಇಮ್ರಾನ್ ಖಾನ್ ಕಾಲು ಹಿಡಿಯುತ್ತಿರುವ ಮತ್ತು ಶೂ ಬಿಚ್ಚುವ ರೀತಿ” ಎಐ ತಂತ್ರಜ್ಞಾನ ಮೂಲಕ ಎಡಿಟ್​ ಮಾಡಿ ಫೋಟೋ ಕ್ರಿಯೇಟ್ ಮಾಡಿದ್ದನು. ಬಳಿಕ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು.

ಇದನ್ನೂ ಓದಿ: ಪೆಹಲ್ಗಾಮ್​​ ಕೇಂದ್ರದ ಪೂರ್ವ ನಿಯೋಜಿತ ಕೃತ್ಯ ಎಂದ ಕೋಲಾರದ ಮುನಿರ್​​ ವಿರುದ್ಧ ಕೇಸ್

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಜಾವಿದ್ ವಿರುದ್ಧ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಿರುಗಾವಲು ಠಾಣೆ ಪೊಲೀಸರು ಜಾವಿದ್​ನನ್ನು ಬಂಧಿಸಿದ್ದರು. ಜಾವಿದ್​ ವಿರುದ್ಧ ಬಿಎನ್‌ಎಸ್ 152, 192, 340 ಅಡಿ ಎಫ್ಐಆರ್ ದಾಖಲಾಗಿತ್ತು. ಈ ಬಗ್ಗೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ