ಶೆಟ್ಟರ್ ಕಾಂಗ್ರೆಸ್ ಬಿಟ್ಟಿರುವುದು ದಿಗ್ಭ್ರಮೆ ತಂದಿದೆ, ಶೆಟ್ಟರ್ ಸೋತರೂ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಿತ್ತು -ಲಕ್ಷ್ಮಿ ಹೆಬ್ಬಾಳ್ಕರ್

| Updated By: ಆಯೇಷಾ ಬಾನು

Updated on: Jan 26, 2024 | 1:11 PM

ಬಿಜೆಪಿಯಲ್ಲಿ ಅವಮಾನ ಆಯ್ತು ಅಂತ ಶೆಟ್ಟರ್ ಕಾಂಗ್ರೆಸ್ ಗೆ ಬಂದ್ರು. ಅವರಾಗಿಯೇ ಬಂದರೂ ನಾವು ಅವರನ್ನು ಸ್ವಾಗತ ಮಾಡಿದೆವು. ಶೆಟ್ಟರ್ ಕಾಂಗ್ರೆಸ್ ಗೆ ಬಂದದ್ದು ಯಾಕೆ? ಹೋದದ್ದು ಯಾಕೆ? ರಾಜಕೀಯದಲ್ಲಿ ಈ ರೀತಿ ಆಗಬಾರದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಶೆಟ್ಟರ್ ಕಾಂಗ್ರೆಸ್ ಬಿಟ್ಟಿರುವುದು ದಿಗ್ಭ್ರಮೆ ತಂದಿದೆ, ಶೆಟ್ಟರ್ ಸೋತರೂ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಿತ್ತು -ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್
Follow us on

ಉಡುಪಿ, ಜ.26: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರು ಕಾಂಗ್ರೆಸ್ ಪಕ್ಷ ತೊರೆದು ಮತ್ತೆ ಬಿಜೆಪಿಗೆ ಮರಳಿದ್ದಾರೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ( Lakshmi Hebbalkar) ಪ್ರತಿಕ್ರಿಯೆ ನೀಡಿದ್ದು ಶೆಟ್ಟರ್ ಕಾಂಗ್ರೆಸ್ ಬಿಟ್ಟಿರುವುದು ನನಗೆ ದಿಗ್ಭ್ರಮೆ ತಂದಿದೆ. ಶೆಟ್ಟರ್ ಕಾಂಗ್ರೆಸ್ ಗೆ ಬಂದದ್ದು ಯಾಕೆ? ಹೋದದ್ದು ಯಾಕೆ? ರಾಜಕೀಯದಲ್ಲಿ ಈ ರೀತಿ ಆಗಬಾರದು ಎಂದು ಹೇಳಿದರು.

ಬಿಜೆಪಿಯಲ್ಲಿ ಅವಮಾನ ಆಯ್ತು ಅಂತ ಶೆಟ್ಟರ್ ಕಾಂಗ್ರೆಸ್ ಗೆ ಬಂದ್ರು. ಅವರಾಗಿಯೇ ಬಂದರೂ ನಾವು ಅವರನ್ನು ಸ್ವಾಗತ ಮಾಡಿದೆವು. ಟಿಕೆಟ್ ಕೊಟ್ಟೆವು ಚುನಾವಣೆಯಲ್ಲಿ ಸೋತರು. ನಮ್ಮ ಕಾರ್ಯಕರ್ತರು ತ್ಯಾಗ ಮಾಡಿ ರಾತ್ರಿ ಹಗಲು ದುಡಿದಿದ್ದರು. ಸೋತ ಮೇಲೂ ಅನುಕೂಲ ಸಿಗಬೇಕು, ತೊಂದರೆ ಆಗಬಾರದು ಎಂದು ಎಂಎಲ್ಸಿ ಮಾಡಿದೆವು. ಕಾಂಗ್ರೆಸ್​ನಲ್ಲಿ ಯಾವುದೇ ರೀತಿಯ ತೊಂದರೆಗಳು ಇರಲಿಲ್ಲ ಯಾಕೆ ವಾಪಸ್ ಹೋಗಿದ್ದಾರೆ ಎಂದು ಗೊತ್ತಿಲ್ಲ. ಶೆಟ್ಟರ್ ಕಾಂಗ್ರೆಸ್ ಬಿಟ್ಟಿರುವುದು ನನಗೆ ದಿಗ್ಭ್ರಮೆ ತಂದಿದೆ. ಶೆಟ್ಟರ್ ಕಾಂಗ್ರೆಸ್ ಗೆ ಬಂದದ್ದು ಯಾಕೆ? ಹೋದದ್ದು ಯಾಕೆ? ಸಚಿವ ಸ್ಥಾನ ಕೇಳಿದ್ದರೋ ನನಗೆ ಗೊತ್ತಿಲ್ಲ. ಏನು ಬೇಡಿಕೆ ಇಟ್ಟಿದ್ದರು ಎಂದು ಅವರನ್ನೇ ಕೇಳಿದರೆ ಸೂಕ್ತ. ರಾಜಕೀಯದಲ್ಲಿ ಈ ರೀತಿ ಆಗಬಾರದು. ನೀತಿ, ನಿಯಮ, ತತ್ವ ಸಿದ್ಧಾಂತದ ಜೊತೆಗೆ ತೆಗೆದುಕೊಂಡು ಹೋಗಬೇಕು. ಬಂದ ಪುಟ್ಟ ಹೋದ ಪುಟ್ಟ ಎಂದರೆ ಅದಕ್ಕೆ ಅರ್ಥ ಇಲ್ಲ ಎಂದು ಉಡುಪಿಯಲ್ಲಿ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅಸಮಾಧಾನ ಹೊರ ಹಾಕಿದರು.

ಬೆಳಗಾವಿ ಟಿಕೆಟ್ ಕೇಳಿದ್ರಾ ಜಗದೀಶ್ ಶೆಟ್ಟರ್ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಆರ್ ಹೆಬ್ಬಾಳ್ಕರ್, ಬೆಳಗಾವಿಯಲ್ಲಿ ನಾನು ಮಂತ್ರಿ ಆಗಿದ್ದೇನೆ. ಬೆಳಗಾವಿ ಟಿಕೆಟ್ ಕೇಳಿ ಯಾವ ಮುಖಂಡರ ಬಳಿಯೂ ಮಾತನಾಡಿಲ್ಲ. ಕಾಂಗ್ರೆಸ್ ಡಿಎನ್​ಎ ಬಿಜೆಪಿ ಡಿಎನ್ಎ ಬಗ್ಗೆ ಮಾತನಾಡಬಾರದು. 75 ವರ್ಷ ಗಣರಾಜ್ಯ ಪೂರೈಸಿದ್ದೇವೆ ನಮ್ಮದೆಲ್ಲರದ್ದು ಭಾರತದ ಡಿಎನ್ಎ ಎಂದರು. ಅಂತೆ ಕಂತೆಗಳನ್ನು ರೂಢಿಸಿಕೊಂಡು ಅವರು ಪಕ್ಷ ಬಿಟ್ಟಿರಬೇಕು. ಲಕ್ಷ್ಮಣ್ ಸವಾದಿ ನಮ್ಮ ಜೊತೆಗಿದ್ದಾರೆ. ಖಂಡಿತವಾಗಿ ಬಿಜೆಪಿಗೆ ಹೋಗುವುದಿಲ್ಲ ನಮಗೆ ವಿಶ್ವಾಸ ಇದೆ. ಮರ್ಯಾದೆ ಹೋಯಿತು ಸ್ವಾಭಿಮಾನಕ್ಕೆ ಪೆಟ್ಟಾಯಿತು ಎಂದು ಅವರು ಕಾಂಗ್ರೆಸ್ಸಿಗೆ ಬಂದವರು ಎಂದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಹೋಗಿದ್ದೇ ಒಳ್ಳೆಯದು ಎನ್ನುತ್ತಿದ್ದಾರೆ ಕಾರ್ಯಕರ್ತರು: ಡಿಕೆ ಶಿವಕುಮಾರ್ ವಾಗ್ದಾಳಿ

ರಾಜ್ಯದಲ್ಲಿ ನೂರು ಕೋಟಿ ಮಹಿಳೆಯರ ಉಚಿತ ಬಸ್ ಪ್ರಯಾಣ ವಿಚಾರ ಸಂಬಂಧ ಉಡುಪಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಉಚಿತ ಎಂದು ಸುಮ್ ಸುಮ್ನೆ ಓಡಾಡುವುದಕ್ಕೆ ಆಗುತ್ತಾ? ರಾಜ್ಯದಲ್ಲಿ ಮೂರೂವರೆ ಕೋಟಿ ಮಹಿಳೆಯರ ಜನಸಂಖ್ಯೆ ಇದೆ. ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಧಾರ್ಮಿಕ ಸ್ಥಳಗಳಿಗೆ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಬಹಳ ಜನ ಓಡಾಡುತ್ತಿದ್ದಾರೆ. 100 ಕೋಟಿ ಮಹಿಳೆಯರು ಈ ಯೋಜನೆಯನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಐದು ಗ್ಯಾರಂಟಿ ಜಾರಿಯಲ್ಲಿ ಇರುವುದರಿಂದ ಬರಗಾಲದ ಹಾಹಾಕಾರ ಇಲ್ಲ. ರಾಜ್ಯದಲ್ಲಿ ಜನ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಗ್ಯಾರೆಂಟಿಯಿಂದ ಆರ್ಥಿಕತೆಯಲ್ಲಿ ಏನು ಸುಧಾರಣೆ ಆಗಿದೆ ಎಂದು ಅಧ್ಯಯನ ಮಾಡುತ್ತೇವೆ. ಕೆಲಸಕ್ಕೆ ಬಾರದೆ ಇರುವ ಮಹಿಳೆಯರು ಈ ರಾಜ್ಯದಲ್ಲಿ ಯಾರೂ ಓಡಾಟ ಮಾಡುತ್ತಿಲ್ಲ. ಮೂರು ತಿಂಗಳಿಗೆ ಒಂದು ಬಾರಿ ರಿವ್ಯೂ ಮೀಟಿಂಗ್ ಮಾಡ್ಬೇಕು. ನನ್ನಷ್ಟು ಬಾರಿ ಯಾರಾದರೂ ಸಚಿವರು ಜಿಲ್ಲೆಗೆ ಭೇಟಿ ಕೊಟ್ಟಿದ್ದಾರಾ? ನನ್ನ ಜವಾಬ್ದಾರಿಯನ್ನು ನಾನು ಚಾಚು ತಪ್ಪದೇ ನಿರ್ವಹಿಸುತ್ತಿದ್ದೇನೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ