Raghupati Bhat: ಗೆದ್ದು ಬಿಜೆಪಿಗೆ ಬರುವೆ ಎಂದಿದ್ದ ರಘುಪತಿ ಭಟ್ ಮುಂದಿನ ನಡೆ ಏನು?

| Updated By: Ganapathi Sharma

Updated on: Jun 07, 2024 | 2:53 PM

ಪರಿಷತ್ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ರಘುಪತಿ ಭಟ್ ಪದವೀಧರ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಸೋತಿದ್ದಾರೆ. ಗೆದ್ದು ಬಿಜೆಪಿಗೆ ಬರುವುದಾಗಿ ಎಂದು ಹೇಳಿದ್ದ ರಘುಪತಿ ಭಟ್ ರವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ರಾಜಕೀಯ ವಲದಲ್ಲಿ ಚರ್ಚೆಗೆ ಕಾರಣವಾಗಿದೆ.

Raghupati Bhat: ಗೆದ್ದು ಬಿಜೆಪಿಗೆ ಬರುವೆ ಎಂದಿದ್ದ ರಘುಪತಿ ಭಟ್ ಮುಂದಿನ ನಡೆ ಏನು?
ರಘುಪತಿ ಭಟ್
Follow us on

ಉಡುಪಿ, ಜೂನ್ 7: ಉಡುಪಿ ಜಿಲ್ಲೆಯಲ್ಲಿ ವಿಧಾನಸಭಾ, ಲೋಕಸಭಾ ಚುನಾವಣೆಯ ಬಳಿಕ ಅತ್ಯಂತ ಕುತೂಹಲ ಮೂಡಿಸಿದ್ದು ವಿಧಾನ ಪರಿಷತ್ (MLC Election) ಚುನಾವಣೆ. ಭಾರತೀಯ ಜನತಾ ಪಾರ್ಟಿಯ (BJP) ಉಡುಪಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ (Raghupati Bhat) ವಿಧಾನ ಪರಿಷತ್ ಚುನಾವಣೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ ಎಂದು ಬಂಡಾಯ ಸ್ಪರ್ಧೆ ಮಾಡಿ ಬಿಜೆಪಿ ವಿರುದ್ದ ತೊಡೆ ತಟ್ಟಿದ್ದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದು ಬಿಜೆಪಿಗೆ ಬರುವುದಾಗಿ ಶಪಥ ಮಾಡಿದ್ದರು. ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಫಲಿತಾಂಶ ಹೊರ ಬಿದ್ದಿದೆ. ಬಂಡಾಯ ಸ್ಪರ್ಧೆ ಮಾಡಿದ್ದ ರಘಪತಿ ಭಟ್ ಭಾರಿ ಅಂತರದಿಂದ ಸೋತಿದ್ದಾರೆ. ಗೆದ್ದು ಬಿಜೆಪಿಗೆ ಬರುವುದಾಗಿ ಹೇಳಿದ್ದ ರಘಪತಿ ಭಟ್ ಮುಂದಿನ ನಡೆಯ ಬಗ್ಗೆ ಭಾರಿ ಕುತೂಹಲ ಮೂಡಿದೆ.

2023 ರಲ್ಲೂ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದ ಭಟ್

2023 ವಿಧಾನಸಭಾ ಚುನಾವಣೆ ಸಮಯದಲ್ಲಿ ಉಡುಪಿ ವಿಧಾನಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಭಟ್​​ಗೆ ಕೊನೆಯ ಹಂತದಲ್ಲಿ ಟಿಕೆಟ್ ಕೈ ತಪ್ಪಿತ್ತು. ಟಿಕೆಟ್ ತಪ್ಪಿದ ಆರಂಭದಲ್ಲಿ ಪಕ್ಷದ ವಿರುದ್ದ ಅಸಮಾಧಾನ ಗೊಂಡಿದ್ದ ಭಟ್ ನಂತರ ಪಕ್ಷದ ನಿರ್ಧಾರವನ್ನು ಒಪ್ಪಿ ಮೌನಿಯಾಗಿದ್ದರು. ಪಕ್ಷದ ವಿರುದ್ಧ ಅಸಮಾಧಾನವಿದ್ದರೂ ಉಡುಪಿ ಕ್ಷೇತ್ರದ ಅಭ್ಯರ್ಥಿ ಆತ್ಮೀಯ ಯಶ್ಪಾಲ್ ಸುವರ್ಣ ಪರ ಪ್ರಚಾರ ನಡೆಸಿದ್ದರು. ಬಳಿಕ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಬೆಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಶೋಭ ಕರಂದ್ಲಾಜೆಗೆ ಟಿಕೆಟ್ ಘೋಷಣೆಯಾದ ಬಳಿಕ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ರಘಪತಿ ಭಟ್ ಅಭ್ಯರ್ಥಿಯಾಗಬೇಕು ಎಂಬ ಕೂಗು ಕೇಳಿತ್ತು. ಅ ಸಮಯದಲ್ಲಿ ಪಕ್ಷ ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಿತ್ತು. ಅಲ್ಲಿಯೂ ರಘುಪತಿ ಭಟ್ಟರಿಗೆ ಮತ್ತು ಭಟ್ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಅ ಬಳಿಕ ಭಟ್ ವಿಧಾನಪರಿಷತ್ ಚುನಾವಾಣೆ ಮೇಲೆ ಕಣ್ಣಿಟ್ಟಿದ್ದರು.

ವಿಧಾನ ಪರಿಷತ್​​ನಲ್ಲಿಯೂ ಕೈ ತಪ್ಪಿದ ಟಿಕೆಟ್

ವಿಧಾನಪರಿಷತ್​​ನಲ್ಲಿ ಬಿಜೆಪಿಯಿಂದ ನೈಋತ್ಯ ಪದವೀಧರ ಕ್ಷೇತ್ರದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ರಘಪತಿ ಭಟ್​​ಗೆ ನಿರಾಸೆಯಾಗಿತ್ತು. ಕೊನೆಯ ಹಂತದಲ್ಲಿ ರಘುಪತಿ ಭಟ್ ಬದಲಿಗೆ ಬಿಜೆಪಿಯಿಂದ ಡಾ. ಧನಂಜಯ ಸರ್ಜಿಯವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ಅಸಮಾಧಾನಗೊಂಡಿದ್ದ ಭಟ್ ಬಂಡಾಯ ಸ್ಪರ್ಧೆ ಮಾಡಿದ್ದರು. ಪಕ್ಷದಿಂದಲೂ 6 ವರ್ಷಗಳ ಕಾಲ ಉಚ್ಛಾಟನೆಗೆ ಒಳಗಾದರು. ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದಂತೆಯೇ ಗೆದ್ದು ಬಿಜೆಪಿಗೆ ಬರುವುದಾಗಿ ಹೇಳಿದ್ದರು. ಗೆಲುವಿನ ನಿರೀಕ್ಷೆಯಲ್ಲಿದ್ದ ಭಟ್ ಪದವೀಧರ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಸೋತಿದ್ದಾರೆ. ಗೆದ್ದು ಬಿಜೆಪಿಗೆ ಬರುವುದಾಗಿ ಎಂದು ಹೇಳಿದ್ದ ರಘುಪತಿ ಭಟ್ ರವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ರಾಜಕೀಯ ವಲದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ನಾನು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದರು: ರಘುಪತಿ ಭಟ್

ಮೂರು ಬಾರಿ ಉಡುಪಿ ವಿಧಾನಸಭಾ ಕ್ಷೇತ್ರ ಶಾಸಕರಾಗಿ ಪಕ್ಷ ಸಂಘಟನೆ ಮಾಡಿದ್ದ ಮಾಜಿ ಶಾಸಕರನ್ನು ರತ್ನಗಂಬಳಿ ಹಾಕಿ ಪಕ್ಷಕ್ಕೆ ಕರೆಯುತ್ತಾ? ರಘುಪತಿ ಭಟ್ಟರೇ ಪಕ್ಷಕ್ಕೆ ಹೋಗಿ ಸೇರುತ್ತಾರೆಯೇ ಎಂಬುವುದು ಸದ್ಯದ ಪ್ರಶ್ನೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ