ಆಂಬ್ಯುಲೆನ್ಸ್ ಬಾಡಿಗೆ ಡಬಲ್‌! ಟೂರಿಸ್ಟ್‌ ಕಾರಿನಲ್ಲಿ ಮೃತದೇಹ ಸಾಗಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 11, 2024 | 3:30 PM

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಿಸುತ್ತಿದ್ದ ವೇಳೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್‌ ಗೇಟ್‌ ಬಳಿ ಆಂಬ್ಯುಲೆನ್ಸ್  ಚಾಲಕ(Ambulance Driver)ತಡೆದು ನಿಲ್ಲಿಸಿ, ಚಾಲಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋವನ್ನ ಆಧರಿಸಿ ಬೈಂದೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

ಆಂಬ್ಯುಲೆನ್ಸ್ ಬಾಡಿಗೆ ಡಬಲ್‌! ಟೂರಿಸ್ಟ್‌ ಕಾರಿನಲ್ಲಿ ಮೃತದೇಹ ಸಾಗಾಟ
ಟೂರಿಸ್ಟ್‌ ಕಾರಿನಲ್ಲಿ ಮೃತದೇಹ ಸಾಗಾಟ
Follow us on

ಉಡುಪಿ, ಮೇ.11: ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಿಸುತ್ತಿದ್ದ ವೇಳೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್‌ ಗೇಟ್‌ ಬಳಿ ಆಂಬ್ಯುಲೆನ್ಸ್  ಚಾಲಕ(Ambulance Driver)ತಡೆದು ನಿಲ್ಲಿಸಿ, ಚಾಲಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಘಟನೆ ನಿನ್ನೆ(ಮೇ.10) ನಡೆದಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಮೃತರ ಕಡೆಯವರು ಮಾತನಾಡಿ, ‘ ಉಡುಪಿಯಿಂದ ಉತ್ತರ ಕನ್ನಡಕ್ಕೆ ಹೋಗಲು ಆಂಬ್ಯುಲೆನ್ಸ್  ಮಾಲೀಕ 15 ಸಾವಿರ ರೂಪಾಯಿ ಹಣ ಕೇಳಿದರು. ಹೆಚ್ಚಿನ ದುಡ್ಡು ಕೇಳಿದ್ದರಿಂದ ಟೂರಿಸ್ಟ್‌ ಕಾರು ಗೊತ್ತುಪಡಿಸಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

ಶಿರೂರಿನಲ್ಲಿ ತಡೆದಿದ್ದ ಇತರೆ ಆಂಬ್ಯುಲೆನ್ಸ್  ಚಾಲಕರು

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಬೈಂದೂರಿನ ಶಿರೂರಿನಲ್ಲಿ ಇತರೆ ಆಂಬುಲೆನ್ಸ್‌ ಚಾಲಕರು ತಡೆದಿದ್ದರು. ಕಾರು ಚಾಲಕ ಹಾಗೂ ಮೃತದೇಹದ ವಾರೀಸುದಾರರನ್ನು ಬೈಂದೂರು ಪೊಲೀಸರು ಠಾಣೆ ಕರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋವನ್ನ ಆಧರಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ಮಾತನಾಡಿ, ‘ಈಗಾಗಲೆ ಟೂರಿಸ್ಟ್‌ ಕಾರಿನಲ್ಲಿ ಮೃತದೇಹವನ್ನ ಕೊಂಡೊಯ್ದಿದ್ದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಉತ್ತರ ಕನ್ನಡದ ಕುಟುಂಬವೊಂದು ಟೂರಿಸ್ಟ್‌ ಕಾರಿನ ಡಿಕ್ಕಿಯಲ್ಲಿರಿಸಿ ಮೃತದೇಹವನ್ನ ಕೊಂಡೊಯ್ದಿತ್ತು. ಬಳಿಕ ಆಂಬ್ಯುಲೆನ್ಸ್ ಚಾಲಕರು, ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದರು.

ಇದನ್ನೂ ಓದಿ:ಆಂಬ್ಯುಲೆನ್ಸ್ ಡ್ರೈವರ್ ಅವಾಂತರ; ಮೂರು ಕಾರು, ಒಂದು ಬೈಕ್ ನಡುವೆ ಸರಣಿ ಅಪಘಾತ

ಮಸೀದಿ ಕಮಿಟಿ ರಚನೆ ವಿಚಾರವಾಗಿ 2 ಗುಂಪುಗಳ ನಡುವೆ ಗಲಾಟೆ

ಕೊಪ್ಪಳ: ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣೆಯ ಆವರಣದಲ್ಲಿ ಮಸೀದಿ ಕಮಿಟಿ ರಚನೆ ವಿಚಾರವಾಗಿ 2 ಗುಂಪುಗಳ ನಡುವೆ ಗಲಾಟೆಯಾಗಿದೆ. ಕಿಲ್ಲಾ ಏರಿಯಾದ ಮರ್ಕಾಸ್ ಮಸೀದಿ ಕಮಿಟಿ ರಚನೆ ವಿಚಾರವಾಗಿ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸ್ ಠಾಣೆ ಆವರಣದಲ್ಲಿ ಗಲಾಟೆ ಕಂಡು ಜನರು ಆತಂಕಗೊಂಡಿದ್ದಾರೆ. ಇದೀಗ ಗಲಾಟೆ ಮಾಡಿಕೊಂಡವರನ್ನು ಗಂಗಾವತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Sat, 11 May 24