ಸಂಕ್ರಮಣ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧಾರ: ದೇವಸ್ಥಾನ ವ್ಯವಸ್ಥಾಪನಾ ಸಮಿತಿ

| Updated By: ವಿವೇಕ ಬಿರಾದಾರ

Updated on: Nov 30, 2022 | 3:59 PM

ಜನವರಿ 14 ಮಕರ ಸಂಕ್ರಮಣ ನಂತರ ಬ್ರಹ್ಮಕಲಶೋತ್ಸವ ನಡೆಸಬೇಕೆಂಬ ನಿರ್ಧಾರ ಮಾಡಿದ್ದೇವೆ ಎಂದು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.

ಸಂಕ್ರಮಣ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧಾರ: ದೇವಸ್ಥಾನ ವ್ಯವಸ್ಥಾಪನಾ ಸಮಿತಿ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
Follow us on

ಉಡುಪಿ: ಕೊಲ್ಲೂರು ಮೂಕಾಂಬಿಕಾ (kollur mookambika) ವ್ಯವಸ್ಥಾಪನಾ ಧಾರ್ಮಿಕ ವಿಧಿ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಪಟ್ಟಂತೆ 5 ಮೀಟಿಂಗ್​ಗಳು ನಡೆದಿವೆ. ಜನವರಿ 14 ಮಕರ ಸಂಕ್ರಮಣ ನಂತರ ಬ್ರಹ್ಮಕಲಶೋತ್ಸವ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ ಎಂದು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಅನೇಕ ಚರ್ಚೆ ನಡೆದಿತ್ತು. ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಸಿ ಮಾರ್ಚ್​ನಲ್ಲಿ ವಾರ್ಷಿಕ ಉತ್ಸವ ಮಾಡಲು ಅರ್ಚಕರಿಂದ ವಿರೋಧ ವ್ಯಕ್ತವಾಗಿತ್ತು. ಅಷ್ಟಬಂಧ ಲೇಪನ ಮಾಡಿ 48 ದಿನ ಕೊಲ್ಲೂರಿನ ಉತ್ಸವ ಮಾಡುವಂತಿಲ್ಲ ಎಂದು ಅರ್ಚಕರು ಪಟ್ಟು ಹಿಡದಿದ್ದರು. ಈ ಸಂಬಂಧ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮಾತನಾಡಿ ಫೆಬ್ರವರಿ 7 ರಿಂದ 17 ರವರೆಗೆ ಮೂಲ ನಕ್ಷತ್ರದಲ್ಲಿ ವಾರ್ಷಿಕೋತ್ಸವ ಮಾಡಬೇಕೆಂಬ ಸಂಪ್ರದಾಯ ಇದೆ. ಫೆಬ್ರವರಿಯಲ್ಲಿ ದಿನಾಂಕ ನಿಗದಿ ಮಾಡಿದ್ದೇವೆ ಇದು ಅಂತಿಮ ಅಲ್ಲ ಎಂದು ತಿಳಿಸಿದರು.

ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ಈ ಬಗ್ಗೆ ಚರ್ಚೆಗಳು ಆಗಿವೆ. ಬ್ರಹ್ಮಕಲಶೋತ್ಸವ ನಡೆದು 48 ದಿವಸದ ನಂತರ ಉತ್ಸವ ಆಗಬೇಕು ಎಂದು ಸಭೆಯಲ್ಲಿ ಯಾರು ನಮ್ಮ ಗಮನಕ್ಕೆ ತಂದಿಲ್ಲ. ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಏನೇ ಕಾರ್ಯಕ್ರಮ ಮಾಡಿದರು ಅದು ಲೋಕದ ಉದ್ದಾರಕ್ಕಾಗಿ. ನಾವು ಯಾವುದೇ ಶಿಷ್ಟಾಚಾರದ ವಿರುದ್ಧವಾಗಿ ಬ್ರಹ್ಮಕಲಶೋತ್ಸವವನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರ ಬರೆದ ನಂತರ ಮುಜರಾಯಿ ಇಲಾಖೆ ಶೈವಾಗಮ ಪಂಡಿತರನ್ನು ಕಳುಹಿಸಿಕೊಟ್ಟಿದೆ. ಅರ್ಚಕರು ವ್ಯವಸ್ಥಾಪರ ಸಮಿತಿ ಮತ್ತು ಶೈವಾಗಮ ಪಂಡಿತರ ಒಗ್ಗೂಡುವಿಕೆಯಲ್ಲಿ ಚರ್ಚೆಗಳು ಆಗಿವೆ. ಆಡಳಿತಾತ್ಮಕ ವಿಚಾರಗಳು ಮತ್ತು ಶಿಷ್ಟಾಚಾರಗಳ ಬಗ್ಗೆ ಚರ್ಚೆಗಳು ನಡೆಯಿತು. ಬ್ರಹ್ಮಕಲಶ ನಂತರ ದಡ ಸಂಪ್ರೋಕ್ಷಣೆ ಎಂಬುದನ್ನು ಮಾಡುತ್ತೇವೆ. ಚರ್ಚೆಯಲ್ಲಿ ಆದ ವಿಚಾರಗಳನ್ನು ಮುಜರಾಯಿ ಇಲಾಖೆಗೆ ಶೈವಾಗಮ ಪಂಡಿತರು ಸಲ್ಲಿಕೆ ಮಾಡುತ್ತಾರೆ. ಮುಜುರಾಯಿ ಇಲಾಖೆ ಸೂಚನೆ ಕೊಟ್ಟ ಪ್ರಕಾರ ನಾವು ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಅಷ್ಟ ಬಂದ ಬ್ರಹ್ಮಕಲಕೋತ್ಸವ ಮಾಡಲು ಅರ್ಚಕರು ವ್ಯವಸ್ಥಾಪನ ಸಮಿತಿ ಊರಿನ ಗ್ರಾಮಸ್ಥರು, ಭಕ್ತರು ಉತ್ತುಕರಾಗಿದ್ದೇವೆ. ಅರ್ಚಕರಿಗೂ ವ್ಯವಸ್ಥಾಪನ ಸಮಿತಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ದೇವಸ್ಥಾನದ ಗರ್ಭಗುಡಿಯಲ್ಲಿ ಅಷ್ಟಬಂಧ ಹಾಕಿದ ನಂತರ 48 ದಿವಸ ಅದು ಗಟ್ಟಿಯಾಗಲು ಬಿಡಬೇಕು ಎಂದು ಎಲ್ಲ ಲಿಖಿತ ರೂಪದಲ್ಲಿಲ್ಲ. ಅರ್ಧ ಮಂಡಲ ಅಥವಾ ಕಾಲು ಮಂಡಲ ಬಿಟ್ಟು ದಡ ಸಂಪ್ರೋಕ್ಷಣೆ ಮಾಡಬಹುದು ಎಂಬ ಅಭಿಪ್ರಾಯ ಇದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ್ ಕ್ಲಿಕ್​ ಮಾಡಿ

Published On - 3:57 pm, Wed, 30 November 22