ಉಡುಪಿ: ಬಿಜೆಪಿ ಸರ್ಕಾರ ಬಂದರೂ ಗೋವುಗಳ ಹತ್ಯೆ ನಿಂತಿಲ್ಲ. ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳದ ಬಗ್ಗೆ ಬೇಸರವಿದೆ. ಸಚಿವನಾಗಿ ನನಗೆ ಈಗಲೂ ಅಸಮಾಧಾನ ಇದೆ. ಇದನ್ನೆಲ್ಲ ನೋಡುವಾಗ ನನಗೆ ಹೊಟ್ಟೆ ಉರಿಯುತ್ತದೆ. ಸಂಪೂರ್ಣ ಗೋಹತ್ಯೆ ನಿಲ್ಲಿಸಲು ಕ್ರಮ ತೆಗೆದುಕೊಳ್ತೇವೆ. ಗೃಹ ಸಚಿವರ ಜೊತೆ ಚರ್ಚಿಸಿ ಎಲ್ಲ ಕ್ರಮ ಕೈಗೊಳ್ಳುತ್ತೇವೆ ಎಂದು ಉಡುಪಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಇಂದು (ಡಿಸೆಂಬರ್ 1) ಹೇಳಿಕೆ ನೀಡಿದ್ದಾರೆ.
ಗೋ ಹಂತಕರಿಗೆ ಭಯ ಹುಟ್ಟಿಸಲು ಕಾನೂನು ಜಾರಿ ಮಾಡುತ್ತೇವೆ. ಕಾಯ್ದೆ ಗಟ್ಟಿ ಇಲ್ಲ ಎಂದಾದರೆ ಮತ್ತೆ ಬಿಗಿಗೊಳಿಸುತ್ತೇವೆ. ಗೋ ಹಂತಕರನ್ನು ತಡೆಯಲು ಪೊಲೀಸರಿಗೂ ಭಯ ಇದೆ. ಕುಟುಂಬ ಜತೆ ಜೀವ ಭಯದಿಂದ ಕೆಲಸ ಮಾಡಬೇಕಾಗುತ್ತೆ. ಪೊಲೀಸ್ ಇಲಾಖೆಗೆ ಧೈರ್ಯ ತುಂಬುವ ಕೆಲಸ ಮಾಡ್ತೇವೆ. ದಂಧೆ ಮುಂದುವರಿಸಿದವರನ್ನು ಬಲಿ ತೆಗೆದುಕೊಳ್ಳುತ್ತೇವೆ ಎಂದು ಅಕ್ರಮ ಜಾನುವಾರು ಸಾಗಾಟ ಬಗ್ಗೆ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ನಾನು ಸಿಎಂ ಆಗಲ್ಲ, ಸಂಘಟನೆ ನನ್ನನ್ನ ಡಿಸಿಎಂ ಮಾಡಿತ್ತು. ಸಂಘಟನೆ ನನ್ನನ್ನು ಏನು ಮಾಡುತ್ತೋ ಅದು ಆಗುತ್ತೇನೆ. ಬಾಗಲಕೋಟೆಯಲ್ಲಿ ನಿರಾಣಿ ಬಗ್ಗೆ ಮಾತನಾಡಿದ್ದು ನಿಜ. ಮುರುಗೇಶ್ ನಿರಾಣಿ ಸಣ್ಣ ಉದ್ದಿಮೆ ಆರಂಭಿಸಿ ದೊಡ್ಡ ಉದ್ಯಮಿ ಆದ್ರು. ಮುಂದೆ ಅವಕಾಶ ಸಿಕ್ಕರೆ ಸಿಎಂ ಆಗಬಹುದು ಎಂದಿದ್ದೆ. ಬಸವರಾಜ ಬೊಮ್ಮಾಯಿ ಬದಲಾಗುತ್ತಾರೆ ಎಂದು ನಾನು ಹೇಳಿಲ್ಲ ಎಂದು ಉಡುಪಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಟೀಲ್ರನ್ನು ಭಯೋತ್ಪಾದಕ ಎನ್ನುವ ಮೋಸಗಾರ ಸಿದ್ದರಾಮಯ್ಯ ಜಮೀರ್ ಅಹ್ಮದ್ನಂಥವರನ್ನು ಬೆಳೆಸುತ್ತಾರೆ: ಕೆ ಎಸ್ ಈಶ್ವರಪ್ಪ
ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಕುಡುಕ, ಕುಡಿಯದೇ ಇದ್ದಾಗ ಒಂದು ಕುಡಿದಾಗಲೇ ಮತ್ತೊಂದು ಮಾತಾಡ್ತಾರೆ; ಕೆಎಸ್ ಈಶ್ವರಪ್ಪ ಗರಂ