ಸಿದ್ದರಾಮಯ್ಯ ಒಬ್ಬ ಕುಡುಕ, ಕುಡಿಯದೇ ಇದ್ದಾಗ ಒಂದು ಕುಡಿದಾಗಲೇ ಮತ್ತೊಂದು ಮಾತಾಡ್ತಾರೆ; ಕೆಎಸ್ ಈಶ್ವರಪ್ಪ ಗರಂ
ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ. ಸಿದ್ದರಾಮಯ್ಯ ರಕ್ತದ ಕಣಕಣದಲ್ಲಿ ಮೋಸ ಇದೆ. ಮೊದಲು ಜೆಡಿಎಸ್ಗೆ ಮೋಸ ಮಾಡಿದ್ದಾರೆ. ಶ್ರೀನಿವಾಸ್ ಪ್ರಸಾದಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್ಗೂ ಮೋಸ ಮಾಡಲು ರೆಡಿ ಆಗಿದ್ದಾರೆ.
ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಒಬ್ಬ ಭಯೋತ್ಪಾದಕ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಗರಂ ಆಗಿದ್ದಾರೆ. ಕಲಬುರಗಿ ನಗರದಲ್ಲಿ ಹೇಳಿಕೆ ನೀಡಿರುವ ಈಶ್ವರಪ್ಪ, ಸಿದ್ದರಾಮಯ್ಯ ಒಬ್ಬ ಕುಡುಕ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ವೊ ಗೊತ್ತಿಲ್ಲ. ಅವರು ಹೆಂಡಾ ಕುಡಿದಾಗ ಒಂದು ಮಾತಾಡ್ತಾರೆ. ಹೆಂಡ ಕುಡಿದೇ ಇದ್ದಾಗ ಒಂದು ಮಾತಾಡ್ತಾರೆ ಅಂತ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ. ಸಿದ್ದರಾಮಯ್ಯ ರಕ್ತದ ಕಣಕಣದಲ್ಲಿ ಮೋಸ ಇದೆ. ಮೊದಲು ಜೆಡಿಎಸ್ಗೆ ಮೋಸ ಮಾಡಿದ್ದಾರೆ. ಶ್ರೀನಿವಾಸ್ ಪ್ರಸಾದಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್ಗೂ ಮೋಸ ಮಾಡಲು ರೆಡಿ ಆಗಿದ್ದಾರೆ. ನಳಿನ್ ಕುಮಾರ್ ಕಟೀಲ್ ಒಬ್ಬ ದೇಶಭಕ್ತ. ಇಂತಹ ಮೋಸಗಾರ ನಮ್ಮ ಅಧ್ಯಕ್ಷರ ಬಗ್ಗೆ ಏನು ಮಾತಾಡ್ತಾರೆ? ಎಂದು ಪ್ರಶ್ನಿಸಿದ ಈಶ್ವರಪ್ಪ, ಜಮೀರ್ ಅಹ್ಮದ್ ಅವರನ್ನು ಸಿದ್ದರಾಮಯ್ಯ ಹೊಗಳುತ್ತಾರೆ. ನಳಿನ್ ಕುಮಾರ್ ಕಟೀಲ್ರಂತಹ ದೇಶ ಭಕ್ತರನ್ನ ಭಯೋತ್ಪಾದಕ ಅಂತಾರೆ ಅಂತ ಗರಂ ಆಗಿದ್ದಾರೆ.
ದೇಗುಲಕ್ಕೆ ಈಶ್ವರಪ್ಪ ಭೇಟಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ಈಶ್ವರಪ್ಪ ಭೇಟಿ ನೀಡಿದ್ದಾರೆ. ದತ್ತಾತ್ರೇಯ ದೇವಸ್ಥಾನದಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಕಲಬುರಗಿಗೆ ಬಂದಾಗಲೆಲ್ಲ ಒಮ್ಮೆ ದತ್ತಾತ್ರೇಯ ದೇಗುಲಕ್ಕೆ ಸಚಿವರು ಭೇಟಿ ನೀಡುತ್ತಾರೆ.
ಇದನ್ನೂ ಓದಿ
ಪತ್ನಿ ನೇತ್ರಾಳಿಂದ ಹತ್ಯೆಗೊಳಗಾಗಿದ್ದ ಉದ್ಯಮಿ ಸ್ವಾಮಿರಾಜನ್ ಮನೆಯಲ್ಲಿ ಕಳವು; ಮಡದಿ ಜೈಲಿನಲ್ಲೇ ವಾಸ
Published On - 11:46 am, Tue, 30 November 21