ಹರಿದ್ವರ್ಣ ಕಾಡುಗಳಲ್ಲಿ ಅಪರೂಪದ ಮಲಬಾರ್​​ ಕಪ್ಪೆಗಳ ವಟವಟ!

|

Updated on: May 25, 2020 | 1:39 PM

ಉಡುಪಿ: ಕುದುರೆ ಮುಖ ಪಶ್ಚಿಮಘಟ್ಟದ ತಪ್ಪಲು ಪ್ರದೇಶ ಭಾಗದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಅಪರೂಪದ ಮಲಬಾರ್​​ ಗ್ಲೈಡಿಂಗ್​​ ಕಪ್ಪೆಗಳ ಕಲರವ ಹೆಚ್ಚಾಗಿದೆ. ಮಲಬಾರ್ ಗ್ಲೈಡಿಂಗ್ ಕಪ್ಪೆಗಳು ಬೆಳಗ್ಗೆ ‌ಹೊತ್ತಿನಲ್ಲಿ ಮರದ ಎಲೆಗಳ‌ ಮಧ್ಯ ಭಾಗದಲ್ಲಿ ವಿಶ್ರಾಂತಿ ಪಡೆದು, ರಾತ್ರಿ ಕಳೆದಂತೆ ಧರೆಗೆ ಇಳಿದು ತಮ್ಮ ಚಟುವಟಿಕೆಯಲ್ಲಿ ನಿರತರಾಗುತ್ತವೆ. ಭಾರತದ ಪಶ್ಚಿಮಘಟ್ಟಗಳ ಬಹುತೇಕ ಪ್ರದೇಶಗಳಲ್ಲಿ ಕಂಡು ಬರುವ ರಾಕೊಫೋರಿಡೆ ಕುಟುಂಬದ ಒಂದು ಮರಗಪ್ಪೆಯ ಪ್ರಭೇದಗಳಲ್ಲಿ ಈ ಮಲಬಾರ್ ಗ್ಲೈಡಿಂಗ್ ಜಾತಿಯ ಕಪ್ಪೆ ಆತ್ಯಂತ ಪ್ರಸಿದ್ಧವಾಗಿದೆ. ಇವುಗಳು ಕುದುರೆ ಮುಖ […]

ಹರಿದ್ವರ್ಣ ಕಾಡುಗಳಲ್ಲಿ ಅಪರೂಪದ ಮಲಬಾರ್​​ ಕಪ್ಪೆಗಳ ವಟವಟ!
Follow us on

ಉಡುಪಿ: ಕುದುರೆ ಮುಖ ಪಶ್ಚಿಮಘಟ್ಟದ ತಪ್ಪಲು ಪ್ರದೇಶ ಭಾಗದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಅಪರೂಪದ ಮಲಬಾರ್​​ ಗ್ಲೈಡಿಂಗ್​​ ಕಪ್ಪೆಗಳ ಕಲರವ ಹೆಚ್ಚಾಗಿದೆ. ಮಲಬಾರ್ ಗ್ಲೈಡಿಂಗ್ ಕಪ್ಪೆಗಳು ಬೆಳಗ್ಗೆ ‌ಹೊತ್ತಿನಲ್ಲಿ ಮರದ ಎಲೆಗಳ‌ ಮಧ್ಯ ಭಾಗದಲ್ಲಿ ವಿಶ್ರಾಂತಿ ಪಡೆದು, ರಾತ್ರಿ ಕಳೆದಂತೆ ಧರೆಗೆ ಇಳಿದು ತಮ್ಮ ಚಟುವಟಿಕೆಯಲ್ಲಿ ನಿರತರಾಗುತ್ತವೆ.

ಭಾರತದ ಪಶ್ಚಿಮಘಟ್ಟಗಳ ಬಹುತೇಕ ಪ್ರದೇಶಗಳಲ್ಲಿ ಕಂಡು ಬರುವ ರಾಕೊಫೋರಿಡೆ ಕುಟುಂಬದ ಒಂದು ಮರಗಪ್ಪೆಯ ಪ್ರಭೇದಗಳಲ್ಲಿ ಈ ಮಲಬಾರ್ ಗ್ಲೈಡಿಂಗ್ ಜಾತಿಯ ಕಪ್ಪೆ ಆತ್ಯಂತ ಪ್ರಸಿದ್ಧವಾಗಿದೆ. ಇವುಗಳು ಕುದುರೆ ಮುಖ ಪಶ್ಚಿಮಘಟ್ಟ ತಪ್ಪಲು ಪ್ರದೇಶ ಭಾಗದ ನಿತ್ಯ ಹರಿದ್ವರ್ಣ, ಎಲೆ ಉದುರುವ ಕಾಡುಗಳಲ್ಲಿ ಮರಗಳ ಮೇಲ್ಭಾಗದಲ್ಲಿ, ಹೆಚ್ಚಾಗಿ ಕಾಣಬಹುದಾಗಿದೆ. ಪ್ರತಿಯೊಂದು ‌ಕಪ್ಪೆ ಪ್ರಭೇದಕ್ಕೂ ವಿಶಿಷ್ಟವಾದ ಬಣ್ಣ ಗುರುತುಗಳಿವೆ.

ತೇಲಿಕೊಂಡು ಚಲಿಸುವ ಕಪ್ಪೆಗಳು:
ವಟ ವಟ ಎಂದು ಸದ್ದು ಮಾಡುವ ಕಪ್ಪೆಗಳ ಪರಿಚಯ ಅದೆಷ್ಟೋ ಮಂದಿಗೆ ಇದೆಯೋ? ಗೊತ್ತಿಲ್ಲ. ಆದ್ರೆ ಗ್ರಾಮೀಣ ಪ್ರದೇಶ‌‌ ನಿವಾಸಿಗಳಿಗೆ ಕಪ್ಪೆಗಳ ಪರಿಚಯ ಅಂತು ಇದ್ದೇ‌‌ ಇರುತ್ತೆ.‌‌ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬಹುತೇಕ ಕಪ್ಪೆಗಳು ಜಿಗಿದುಕೊಂಡು ಸಂಚರಿಸಿದರೆ, ಈ ಅಪರೂಪದ ಮಲಬಾರ್ ಕಪ್ಪೆಗಳು ಮಾತ್ರ ತೇಲಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಮ್ಮ ಪ್ರಯಾಣವನ್ನು ಬೆಳೆಸುವುದು ವಿಶೇಷವಾಗಿದೆ.

ಇವುಗಳಿಗೆ ಉದ್ದವಾದ ಕಾಲುಗಳ ನಡುವೆ ಮತ್ತು ಉದ್ದಕ್ಕೂ ಚರ್ಮದ ಅಂಚುಗಳು, ಹಿಮ್ಮಡಿಯಲ್ಲಿ ತ್ರಿಕೋನಾಕಾರದಲ್ಲಿ ಚರ್ಮದ ವಿಸ್ತರಣೆಯಿಂದ ಕೂಡಿದ್ದು, ಬೆರಳುಗಳು ಮತ್ತು ಕಾಲ್ಬೆರಳುಗಳ ನಡುವಿನ ವೆಬ್‌ಬಿಂಗ್ (ಚರ್ಮದ ಜಾಲ) ರೂಪದ ಸಹಾಯದಿಂದ ಇವುಗಳು ಗಾಳಿಯಲ್ಲಿ ತೇಲಿಕೊಂಡು ಚಲಿಸುತ್ತವೆ. ಮಲಬಾರ್ ಗ್ಲೈಡಿಂಗ್ ಕಪ್ಪೆಗಳು ಬೆಳಗ್ಗೆ ‌ಹೊತ್ತಿನಲ್ಲಿ ಮರದ ಎಲೆಗಳ‌ ಮಧ್ಯ ಭಾಗದಲ್ಲಿ ವಿಶ್ರಾಂತಿ ಪಡೆದು, ರಾತ್ರಿ ಕಳೆದಂತೆ ಧರೆಗೆ ಇಳಿದು ತಮ್ಮ ಚಟುವಟಿಕೆಯಲ್ಲಿ ನಿರತರಾಗುತ್ತವೆ.

ಕುಳಿತುಕೊಂಡಾಗ ಯಾವುದೇ ಸದ್ದು ಮಾಡಲ್ಲ:
ಮರಗಳ ಮೇಲೆ ಕುಳಿತುಕೊಂಡ ಸಂದರ್ಭದಲ್ಲಿ ಯಾವುದೇ ಸದ್ದನ್ನು ಮಾಡದೇ ಸ್ತಬ್ಧವಾಗಿ ಕುಳಿತುಕೊಳ್ಳುತ್ತವೆ. ಇವುಗಳು‌‌‌ ದೇಹ ಗಾತ್ರವು ಸುಮಾರು 10 ಸೆ.ಮೀ.ಗಳವರೆಗೆ (4 ಇಂಚು) ಬೆಳೆಯುತ್ತದೆ. ಅದರ ದೇಹವು ಹಚ್ಚ ಹಸಿರು ಬಣ್ಣ ಹಾಗೂ ಕಪ್ಪು ಹಾಗೂ ಬಿಳಿ ಚುಕ್ಕೆಗಳಿಂದ ಕೂಡಿರುತ್ತದೆ. ಮಲಬಾರ್ ಗ್ಲೈಡಿಂಗ್ ಜಾತಿಯ ಕಪ್ಪೆ ಕೂಗುವ ವೇಳೆ ಕಟ್ ಕಟ್ ಕಟ್ ಕಟಾ ಕಟಾ ಕರ್ ಕರ್.. ಎಂದು ತಮ್ಮ ಉಪಸ್ಥಿತಿಯನ್ನು ತೋರ್ಪಡಿಸುತ್ತವೆ.

ಮಳೆಗಾಲದಲ್ಲಿ ಹೆಚ್ಚಾಗಿ ಕಾಣುತ್ತವೆ:
ಇವುಗಳಲ್ಲಿ ಗಂಡು ಕಪ್ಪೆಗಳು ಹೆಣ್ಣು ಕಪ್ಪೆಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ತಂಪು ವಾತಾವರಣ‌ಗಳಲ್ಲಿ ಇವುಗಳು ವಾಸಿಸುತ್ತಿದ್ದು, ಮಹಾರಾಷ್ಟ್ರದ ಅಂಬೋಲಿ, ಕುದುರೆ ಮುಖ, ಆಗುಂಬೆ, ಮಡಿಕೇರಿಯ ಕೂರ್ಗ್, ಮುನ್ನಾರ್ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಮಲಬಾರ್ ಗ್ಲೈಡಿಂಗ್ ಕಪ್ಪೆಗಳು ಅತ್ಯುತ್ತಮ ಆರೋಹಿಗಳು ಮತ್ತು 35 ಮೀ. (115 ಅಡಿ) ಎತ್ತರವಿರುವ ಮರಗಳ ಮೇಲೆ ಕುಳಿತುಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೇಲಿ ಕೊಂಡು ಪಯಣ ಬೆಳೆಸುತ್ತದೆ. ಇದು ಮಳೆಗಾಲದ‌ ಕೊನೆಯ ತಿಂಗಳಿನಲ್ಲಿ ‌ಇವುಗಳು ಹೆಚ್ಚಾಗಿ ಕಾಣಸಿಗುತ್ತದೆ.

Published On - 12:47 pm, Mon, 25 May 20