ಉಡುಪಿ: ಕರ್ತವ್ಯ ನಿರ್ವಹಿಸುವ ಅಮಾಸೆಬೈಲು ಠಾಣೆಯ ಸಮೀಪವೇ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೆಎಸ್ಆರ್ಪಿ(IRB) ಸಿಬ್ಬಂದಿ ಮಲ್ಲಿಕಾರ್ಜುನ್ ಗುಬ್ಬಿ (56) ನೇಣಿಗೆ ಶರಣಾಗಿದ್ದಾರೆ.
ಪೊಲೀಸ್ ಠಾಣೆಯ ಬಳಿಯೇ ಮರಕ್ಕೆ ನೇಣು ಬಿಗಿದುಕೊಂಡು ಮಲ್ಲಿಕಾರ್ಜುನ್ ಗುಬ್ಬಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಅನಾರೋಗ್ಯದಿಂದ ಮನನೊಂದು ಆತ್ಮಹತ್ಯೆಗೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಕಲಬುರಗಿಯ ನೌರುಗಂಜ್ ನಿವಾಸಿ ಮಲ್ಲಿಕಾರ್ಜುನ್ ಗುಬ್ಬಿ, ಮೇ 16ರಂದು ನಕ್ಸಲ್ ಪೀಡಿತ ಅಮಾಸೆಬೈಲು ಪೊಲೀಸ್ ಠಾಣೆಗೆ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. 3 ತಿಂಗಳ ಹಿಂದೆ ಕೊಪ್ಪಳದ ಮುನಿರಾಬಾದ್ಗೆ ವರ್ಗಾವಣೆಗೊಂಡಿದ್ದರು. ಶನಿವಾರ ಮುನಿರಾಬಾದ್ಗೆ ಮಲ್ಲಿಕಾರ್ಜುನ್ ತೆರಳಬೇಕಿತ್ತು.
Published On - 11:22 am, Fri, 29 May 20