ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದಲೂ ಶುಭಾಶಯ ಕೋರಿ ಪೋಸ್ಟರ್, ಫುಲ್ ವೈರಲ್

| Updated By: guruganesh bhat

Updated on: Aug 05, 2021 | 7:05 PM

ಸಾಮಾನ್ಯವಾಗಿ ಬಹುತೇಕ ಕಾರ್ಯಕರ್ತರು ಮಾತ್ರ ಕಚ್ಚಾಟದಲ್ಲೇ ನಿರತರಾಗಿರುತ್ತಾರೆ. ಆದರೆ ಸಚಿವ ಕೋಟ ಶ್ರೀನಿವಾಸರ ವಿಚಾರದಲ್ಲಿ ಮಾತ್ರ ಹಾಗಲ್ಲ, ಅನ್ಯಪಕ್ಷಗಳ ಕಾರ್ಯಕರ್ತರೂ ಬಹಿರಂಗವಾಗಿ ಅಭಿಮಾನ ತೋರಿಸುತ್ತಿರುವುದು ಎಲ್ಲರ ಗಮನಸೆಳೆದಿದೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದಲೂ ಶುಭಾಶಯ ಕೋರಿ ಪೋಸ್ಟರ್, ಫುಲ್ ವೈರಲ್
ಗಮನ ಸೆಳೆಯುತ್ತಿರುವ ಪೋಸ್ಟರ್
Follow us on

ಉಡುಪಿ: ಪ್ರಸಕ್ತ ರಾಜಕಾರಣದಲ್ಲಿ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ವಿದ್ಯಮಾನವೊಂದು ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೋಟ ಶ್ರೀನಿವಾಸ ಪೂಜಾರಿ ( Kota Shrinivas Poojary ) ಅವರಿಗೆ ಸ್ವಂತ ಪಕ್ಷ ಮಾತ್ರವಲ್ಲದೇ, ವಿರೋಧ ಪಕ್ಷಗಳಲ್ಲೂ ಅಭಿಮಾನಿಗಳಿದ್ದಾರೆ ಎಂಬ ಮಾತಿದೆ. ಈ ಮಾತಿಗೆ ಸಾದೃಶ ಉದಾಹರಣೆಯೊಂದು ದೊರೆತಿದೆ. ಜಿಲ್ಲೆಯ ಹೆಬ್ರಿ ತಾಲೂಕಿನ ಶೇಡಿಮನೆ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅರಸಮ್ಮಕಾನು ಎಂಬಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಶುಭಾಶಯ ತಿಳಿಸಿ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡದೊಂದು ಬ್ಯಾನರ್ ಅಳವಡಿಸಿದ್ದಾರೆ. ಈ ಬ್ಯಾನರ್​ನ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಎಷ್ಟೇ ಕಚ್ಚಾಡಿದರೂ ರಾಜಕೀಯ ನಾಯಕರೆಲ್ಲಾ ಮುಖಾಮುಖಿಯಾದರೆ ಉಭಯ ಕುಶಲೋಪರಿ ಮಾತನಾಡಿಕೊಂಡು ಖುಷಿ ಪಡುವುದನ್ನು ನೋಡಿದ್ದೇವೆ. ಆದರೆ ಸಾಮಾನ್ಯವಾಗಿ ಬಹುತೇಕ ಕಾರ್ಯಕರ್ತರು ಮಾತ್ರ ಕಚ್ಚಾಟದಲ್ಲೇ ನಿರತರಾಗಿರುತ್ತಾರೆ. ಆದರೆ ಸಚಿವ ಕೋಟ ಶ್ರೀನಿವಾಸರ ವಿಚಾರದಲ್ಲಿ ಮಾತ್ರ ಹಾಗಲ್ಲ, ಅನ್ಯಪಕ್ಷಗಳ ಕಾರ್ಯಕರ್ತರೂ ಬಹಿರಂಗವಾಗಿ ಅಭಿಮಾನ ತೋರಿಸುತ್ತಿರುವುದು ಎಲ್ಲರ ಗಮನಸೆಳೆದಿದೆ.

ಸಾಮಾನ್ಯವಾಗಿ ಪಕ್ಷ, ಸಿದ್ಧಾಂತ ಎಂದು ಪರಸ್ಪರ ಕಚ್ಛಾಟದಲ್ಲೇ ತೊಡಗುವ ಕಾರ್ಯಕರ್ತರಿಗಿಂತ ಈ ಭಾಗದ ಕಾಂಗ್ರೆಸ್ ಕಾರ್ಯಕರ್ತರ ನಡೆ ಪ್ರಶಂಸನೀಯವೆನಿಸಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಕುರಿತು ಶ್ಲಾಘನೆ ವ್ಯಕ್ತವಾಗುತ್ತಿದೆ.

ಮಾಹಿತಿ, ವರದಿ: ಹರೀಶ್, ಉಡುಪಿ

ಇದನ್ನೂ ಓದಿ: Karnataka cabinet ದೇವರು, ಗೋಮಾತೆ ಮತ್ತು ರೈತರ ಹೆಸರಲ್ಲಿ ನೂತನ ಸಚಿವರ ಪ್ರಮಾಣ ವಚನ

ಹಿಂದೂ ದೇಗುಲಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ ತಡೆಹಿಡಿಯಲು ಕೋಟ ಶ್ರೀನಿವಾಸ ಪೂಜಾರಿ ಆದೇಶ

(Minister Kota Shrinivas Poojary wishes by Congress activists poster banner in Hebri)

Published On - 6:21 pm, Thu, 5 August 21