‘ಇಂದಿನಿಂದ ನಾನು ಯಾವುದೇ ಸಮಾರಂಭದಲ್ಲಿ ಭಾಗಿಯಾಗಲ್ಲ; ಕೊರೊನಾ ತಡೆಗೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಿ’

| Updated By: ganapathi bhat

Updated on: Aug 07, 2021 | 11:21 PM

ಇನ್ನು ಯಾವುದೇ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲ್ಲ. ನನಗಾಗಿ ಯಾವುದೇ ಅಭಿನಂದನಾ ಸಭೆ ಏರ್ಪಡಿಸಬೇಡಿ. ಕೊರೊನಾ ತಡೆಗೆ ಸ್ವಯಂ ಅನುಶಾಸನ ಹಾಕಿಕೊಳ್ಳುತ್ತೇನೆ. ಎಲ್ಲರೂ ಇದೇ ನಿಯಮ ಅನುಸರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

‘ಇಂದಿನಿಂದ ನಾನು ಯಾವುದೇ ಸಮಾರಂಭದಲ್ಲಿ ಭಾಗಿಯಾಗಲ್ಲ; ಕೊರೊನಾ ತಡೆಗೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಿ’
ಸುನಿಲ್ ಕುಮಾರ್ (ಸಂಗ್ರಹ ಚಿತ್ರ)
Follow us on

ಉಡುಪಿ: ಕೊರೊನಾ ತಡೆಗೆ ಎಲ್ಲರೂ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಿ. ಇಂದಿನಿಂದ ನಾನು ಯಾವುದೇ ಸಮಾರಂಭದಲ್ಲಿ ಭಾಗಿಯಾಗಲ್ಲ ಎಂದು ಉಡುಪಿಯಲ್ಲಿ ಇಂದು (ಆಗಸ್ಟ್ 7) ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಇನ್ನು ಯಾವುದೇ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲ್ಲ. ನನಗಾಗಿ ಯಾವುದೇ ಅಭಿನಂದನಾ ಸಭೆ ಏರ್ಪಡಿಸಬೇಡಿ. ಕೊರೊನಾ ತಡೆಗೆ ಸ್ವಯಂ ಅನುಶಾಸನ ಹಾಕಿಕೊಳ್ಳುತ್ತೇನೆ. ಎಲ್ಲರೂ ಇದೇ ನಿಯಮ ಅನುಸರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಬಾಗಲಕೋಟೆ: ನಿರಾಣಿಗೆ ಸ್ವಾಗತ; ಕೊರೊನಾ ನಿಯಮ ಉಲ್ಲಂಘನೆ
ಕೊವಿಡ್ ನಿಯಮ ಉಲ್ಲಂಘಿಸಿ ನಿರಾಣಿಗೆ ಭರ್ಜರಿ ಸ್ವಾಗತ ನೀಡಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ನಡೆದಿದೆ. ಜನರು, ಅಭಿಮಾನಿಗಳು, ಬೆಂಬಲಿಗರು ಅಂತರ ಮರೆತು, ಮಾಸ್ಕ್​ ಧರಿಸದೆ ಮುರುಗೇಶ್ ನಿರಾಣಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಅಭಿಮಾನಿಗಳು, ಹೂವಿನ ಮಾಲೆ ಹಾಕಿ ಸ್ವಾಗತ ಕೋರಿದ್ದಾರೆ.

ಕರ್ನಾಟಕದ ಗಡಿ ಜಿಲ್ಲೆಗಳು ಮಾತ್ರವಲ್ಲದೆ, ರಾಜ್ಯದ ವಿವಿಧ ಕಡೆ ಕೊರೊನಾ ಮೂರನೆ ಅಲೆ ಭೀತಿ ಶುರುವಾಗಿದೆ. ಆದರೆ, ಈ ನಡುವೆ ರಾಜಕಾರಣಿಗಳೇ ಕೊರೊನಾ ನಿಯಮ ಮರೆತು ವರ್ತನೆ ತೋರುತ್ತಿದ್ದಾರೆ ಎಂಬುದು ಜನರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಬೃಹತ್‌ ಮತ್ತು ಮದ್ಯಮ ಕೈಗಾರಿಕೆ ಸಚಿವರಿಂದ ಕೊವಿಡ್ ನಿಯಮ ಉಲ್ಲಂಘನೆ ಆಗಿದೆ ಎಂದೂ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಾರಂಭದಲ್ಲಿ ಖುದ್ದು ಮುರುಗೇಶ್ ನಿರಾಣಿಯೇ ಮಾಸ್ಕ್ ಧರಿಸಿಲ್ಲ ಎಂಬುದು ಜನಬ ಇನ್ನಷ್ಟು ಸಿಟ್ಟಾಗುವಂತೆ ಮಾಡಿದೆ. ಜನರಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯವೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಜನರಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ?; ಎಚ್​ಡಿ ಕುಮಾರಸ್ವಾಮಿ ಸಮ್ಮುಖದಲ್ಲೇ ಕೊರೊನಾ ನಿಯಮ ಉಲ್ಲಂಘನೆ

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,610 ಕೊರೊನಾ ಕೇಸ್ ಪತ್ತೆ; 32 ಮಂದಿ ಸಾವು

(Minister Sunil Kumar on following Coronavirus Covid19 Guidelines at Public Places)

Published On - 11:20 pm, Sat, 7 August 21