ಜನರಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ?; ಎಚ್​ಡಿ ಕುಮಾರಸ್ವಾಮಿ ಸಮ್ಮುಖದಲ್ಲೇ ಕೊರೊನಾ ನಿಯಮ ಉಲ್ಲಂಘನೆ

ಮಂಡ್ಯ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಭೇಟಿ ನೀಡಿದ್ದರು. ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ವೇಳೆ ಬೆಂಬಲಿಗರು ಮುಗಿಬಿದ್ದಿದ್ದಾರೆ.

ಜನರಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ?; ಎಚ್​ಡಿ ಕುಮಾರಸ್ವಾಮಿ ಸಮ್ಮುಖದಲ್ಲೇ ಕೊರೊನಾ ನಿಯಮ ಉಲ್ಲಂಘನೆ
ಕುಮಾರಸ್ವಾಮಿ ಸಮ್ಮುಖದಲ್ಲೇ ಕೊರೊನಾ ನಿಯಮ ಬ್ರೇಕ್!
Follow us
TV9 Web
| Updated By: ganapathi bhat

Updated on:Aug 07, 2021 | 3:56 PM

ಮಂಡ್ಯ: ಕೊರೊನಾ ನಿಯಮಗಳು ಸಾಮಾನ್ಯ ಜನರಿಗೊಂದು ನ್ಯಾಯ ರಾಜಕಾರಣಿಗಳಿಗೊಂದು‌ ನ್ಯಾಯ ಎಂಬಂತಾಗಿದೆ ಎಂಬ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಜನಸಾಮಾನ್ಯರ ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಕೊರೋನಾ ನಿಯಮ ಉಲ್ಲಂಘಿಸಿದ್ದಾರೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಭೇಟಿ ನೀಡಿದ್ದರು. ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ವೇಳೆ ಬೆಂಬಲಿಗರು ಮುಗಿಬಿದ್ದಿದ್ದಾರೆ. ಸದ್ಯ ಮಂಡ್ಯದಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಆದರೆ, ಇಲ್ಲಿ ಬೆಂಬಲಿಗರು ಮಾಸ್ಕ್, ಸಾಮಾಜಿಕ ಅಂತರ ಮರೆತು ಗುಂಪುಗುಂಪಾಗಿ ಸೇರಿದ್ದಾರೆ.

ಹೆಚ್ಚು ಜನ ಸೇರಿದಂತೆ ಆದೇಶ ಇದ್ದರೂ ಜನರು ಡೋಂಟ್ ಕೇರ್ ಎಂದಿದ್ದಾರೆ. ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ನೂರಾರು ಜನ ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಬಿ. ಶ್ರೀನಿವಾಸ್​ಗೆ ಅಭಿನಂದನಾ ಕಾರ್ಯಕ್ರಮ ನಡೆಸಲಾಗಿದೆ. ಜಿಲ್ಲೆಯ ಶಾಸಕರು ಸೇರಿದಂತೆ ನಗರಸಭೆ ಅಧ್ಯಕ್ಷ, ಹಾಗೂ ಸಂಘಟನೆ ಮುಖಂಡರಿಂದ ಕೊರೊನಾ ರೂಲ್ಸ್ ಬ್ರೇಕ್ ಮಾಡಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲೇ ಕೊರೊನಾ ನಿಯಮ ಉಲ್ಲಂಘನೆ ಆಗಿದೆ ಎಂದು ಅಸಮಾಧಾನ ಕೇಳಿಬಂದಿದೆ.

Mandya HDK Corona Guidelines Break

ವೇದಿಕೆಯಲ್ಲಿ ಕೊರೊನಾ ನಿಯಮ ಅನ್ವಯ ಆಗುವುದಿಲ್ಲವೇ?

ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ (ಆಗಸ್ಟ್ 6) ಕರ್ನಾಟಕ ಸರ್ಕಾರ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಆದೇಶ ಹೊರಡಿಸಿದ್ದರು. ಬಳಿಕ, ರಾತ್ರಿ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಗೈಡ್‌ಲೈನ್ಸ್‌ ಪ್ರಕಟವಾಗಿತ್ತು. ಅದರಂತೆ, ಆಗಸ್ಟ್ 16ರವರೆಗೂ ಹೊಸ ಮಾರ್ಗಸೂಚಿ ಅನ್ವಯ ಆಗಲಿದೆ. ರಾತ್ರಿ 9 ಗಂಟೆಯಿಂದ ಮುಂಜಾನೆ 5ರವರೆಗೆ ನೈಟ್ ಕರ್ಫ್ಯೂ ಇರಲಿದೆ. ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ರಾಜ್ಯಾದ್ಯಂತ ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿ ಆಗಲಿದೆ.

ಕೇರಳ ಗಡಿ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ರಾಜ್ಯದಲ್ಲಿ ರಾತ್ರಿ 9ರಿಂದ ಮುಂಜಾನೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಜಾರಿ ಆಗಲಿದೆ. ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು.

ಒಂದೆಡೆ ಹೀಗೆ ಮುಂಜಾಗ್ರತಾ ಕ್ರಮಗಳ ಘೋಷಣೆ ಜೋರಾಗುತ್ತಿದ್ದರೆ ಮತ್ತೊಂದೆಡೆ ವಿವಿಧ ರಾಜಕೀಯ ನಾಯಕರು ಈ ರೀತಿ ಕೊರೊನಾ ನಿಯಮ ಉಲ್ಲಂಘಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಸಮ್ಮುಖದಲ್ಲೇ ಕೊವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದರೂ ಸುಮ್ಮನೆ ಉಳಿಯುತ್ತಿದ್ದಾರೆ. ಇದು ಜನಸಾಮಾನ್ಯರಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.

ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಜಾನ್ಸನ್ ಆ್ಯಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಅನುಮತಿ

ದೇಶದಲ್ಲಿ ಇಂದು 40 ಸಾವಿರಕ್ಕಿಂತಲೂ ಕಡಿಮೆ ಕೊರೊನಾ ಕೇಸ್​ಗಳು ಪತ್ತೆ; ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

(Coronavirus Covid19 Rules Break in front of HD Kumaraswamy at Mandya)

Published On - 3:45 pm, Sat, 7 August 21