ದೇಶದಲ್ಲಿ ಇಂದು 40 ಸಾವಿರಕ್ಕಿಂತಲೂ ಕಡಿಮೆ ಕೊರೊನಾ ಕೇಸ್​ಗಳು ಪತ್ತೆ; ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ದೇಶದಲ್ಲಿ ಇಂದು 40 ಸಾವಿರಕ್ಕಿಂತಲೂ ಕಡಿಮೆ ಕೊರೊನಾ ಕೇಸ್​ಗಳು ಪತ್ತೆ; ಸಾವಿನ ಸಂಖ್ಯೆಯಲ್ಲಿ ಹೆಚ್ಚಳ
ಪ್ರಾತಿನಿಧಿಕ ಚಿತ್ರ

Covid 19 Updates: ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,18,95,385ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,27,371ಕ್ಕೆ ತಲುಪಿದೆ. 24ಗಂಟೆಯಲ್ಲಿ 40,017 ಮಂದಿ ಚೇತರಿಸಿಕೊಂಡಿದ್ದಾರೆ.

TV9kannada Web Team

| Edited By: Lakshmi Hegde

Aug 07, 2021 | 1:30 PM

ಕಳೆದ ಕೆಲವು ದಿನಗಳಿಂದಲೂ ಪ್ರತಿದಿನ 40 ಸಾವಿರಕ್ಕೂ ಹೆಚ್ಚು ದಾಖಲಾಗುತ್ತಿದ್ದ ಕೊವಿಡ್ 19 ಸೋಂಕಿತರ (Covid 19 Virus) ಸಂಖ್ಯೆಯಲ್ಲಿ ಇಂದು ತುಸು ಇಳಿಮುಖವಾಗಿದೆ. ನಿನ್ನೆ 44,643 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಇಂದು 38,628 ಕೊರೊನಾ ಕೇಸ್ (Corona Virus)​ಗಳು ದಾಖಲಾಗಿವೆ. ಇದು ನಿನ್ನೆಗಿಂತಲೂ ಶೇ.13ರಷ್ಟು ಕಡಿಮೆಯಾಗಿದೆ. ಆದರೆ ಸಾವಿನ ಸಂಖ್ಯೆ ಇಂದು ಹೆಚ್ಚಾಗಿದೆ. ನಿನ್ನೆ ಸೋಂಕಿನಿಂದ 464 ಜನರು ಮೃತಪಟ್ಟಿದ್ದರು. ಆದರೆ ಇಂದು ಒಂದೇ ದಿನದಲ್ಲಿ 617 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ (Union Health Ministry) ಮಾಹಿತಿ ನೀಡಿದೆ.

ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,18,95,385ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,27,371ಕ್ಕೆ ತಲುಪಿದೆ. 24ಗಂಟೆಯಲ್ಲಿ 40,017 ಮಂದಿ ಚೇತರಿಕೆ ಕಂಡಿದ್ದು, ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಒಟ್ಟು ಸಂಖ್ಯೆ 3,10,55,861ರಷ್ಟಾಗಿದೆ. ಇಂದು ದಾಖಲಾದ ಕೊರೊನಾ ಕೇಸ್​ಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆಯೇ ಹೆಚ್ಚಾಗಿರುವುದು ಸ್ವಲ್ಪ ಸಮಾಧಾನ ತಂದ ವಿಚಾರವಾಗಿದೆ.

ದೇಶದಲ್ಲೀಗ ವಾರದ ಲೆಕ್ಕದ ಪಾಸಿಟಿವಿಟಿ ರೇಟ್​ 2.39ರಷ್ಟಿದ್ದು, ದೈನಂದಿನ ಪಾಸಿಟಿವಿಟಿ ದರ 2.21ರಷ್ಟಿದೆ. ಇದುವರೆಗೆ 47.83 ಕೋಟಿ ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಲಸಿಕೆ ನೀಡುವ ವೇಗವೂ ಹೆಚ್ಚಾಗಿದ್ದು, ಇಲ್ಲಿಯತನಕ 50,10,09,609ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೊವಿಡ್​ 19 ವಿರುದ್ಧ ಭಾರತ ಪ್ರಬಲ ಹೋರಾಟ ನಡೆಸುತ್ತಿದೆ. ದೇಶದಲ್ಲಿ ಇಲ್ಲಿಯವರೆಗೆ 50 ಕೋಟಿಗೂ ಅಧಿಕ ಮಂದಿಗೆ ಕೊವಿಡ್ 19 ಲಸಿಕೆ ನೀಡಿ ಮುಗಿದಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಅಣ್ಣಾಮಲೈರನ್ನ ಮನವೊಲಿಸುತ್ತೇವೆ; ಸಂಸದ ಡಿ.ವಿ.ಸದಾನಂದ ಗೌಡ

ಬಿಗ್​ ಬಾಸ್​ ಫಿನಾಲೆಯಲ್ಲಿ ಶಮಂತ್ ಹಾಡು, ರಘು ಡ್ಯಾನ್ಸ್​, ಪ್ರಿಯಾಂಕಾ-ದಿವ್ಯಾ ವೈಯ್ಯಾರ, ಹಳೇ ಸ್ಪರ್ಧಿಗಳ ಧಮಾಕಾ

38,628 corona virus cases reported in india over 24 hours

Follow us on

Related Stories

Most Read Stories

Click on your DTH Provider to Add TV9 Kannada