Sign In

By signing in or creating an account, you agree with Associated Broadcasting Company's Terms & Conditions and Privacy Policy.

Udupi: ವರುಣ ಆರ್ಭಟಕ್ಕೆ ತತ್ತರಿಸಿದ ಉಡುಪಿ ಜನರಿಗೆ ಆಪದ್ಬಾಂಧವ ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು

ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು (44) ಅವರು ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯ ಗ್ರಾಮಗಳಲ್ಲಿ ಭಾರಿ ಮಳೆಯಿಂದ ನಿಟ್ಟೂರು ಮತ್ತು ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸುಮಾರು 70 ಜನರನ್ನು ರಕ್ಷಿಸಿದ್ದಾರೆ.

Udupi: ವರುಣ ಆರ್ಭಟಕ್ಕೆ ತತ್ತರಿಸಿದ ಉಡುಪಿ ಜನರಿಗೆ ಆಪದ್ಬಾಂಧವ ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು
ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು
Follow us
ಅಕ್ಷಯ್​ ಪಲ್ಲಮಜಲು​​
|

Updated on: Jul 10, 2023 | 11:45 AM

ಉಡುಪಿ: ದೇಶದಲ್ಲಿ ಎಡೆಬಿಡದೆ ಭಾರಿ ಮಳೆ ಸುರಿಯುತ್ತಿದೆ. ಎಲ್ಲ ಕಡೆಯು ಜಲಾವೃತಗೊಂಡಿರುವ ದೃಶ್ಯಗಳೇ ಕಾಣುತ್ತಿದೆ, ಇನ್ನೂ ಕರ್ನಾಟಕದ ಭಾಗದಲ್ಲಿ ವರುಣ ಆರ್ಭಟ ಜೋರಾಗಿದೆ, ಅನೇಕ ಸಾವು – ನೋವುಗಳು ಕೂಡ ಸಂಭವಿಸಿದೆ. ಉಡುಪಿಯಲ್ಲಿ ಹೆಚ್ಚು ಮಳೆಯಾಗಿದ್ದು ಮನೆಗಳಿಗೆ ನೀರು ನುಗ್ಗಿದ್ದು 6 ಜನ ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ಉಡುಪಿಗೆ ಆಪದ್ಬಾಂಧವನಾಗಿ ಬಂದವರು ಕಯಾಕಿಂಗ್ ಸಾಹಸಿ ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು, ಹೌದು, ಕಯಾಕಿಂಗ್ ಸಾಹಸಿ ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು ಕಳೆದ ಕೆಲವು ವರ್ಷಗಳಿಂದ 250ಕ್ಕೂ ಹೆಚ್ಚು ಪ್ರವಾಹ ಪೀಡಿತ ಜನರನ್ನು ರಕ್ಷಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‌ಕೆಡಿಆರ್‌ಡಿಪಿ) ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾಗಿ ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು (44) ಅವರು ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯ ಗ್ರಾಮಗಳಲ್ಲಿ ಭಾರಿ ಮಳೆಯಿಂದ ನಿಟ್ಟೂರು ಮತ್ತು ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸುಮಾರು 70 ಜನರನ್ನು ರಕ್ಷಿಸಿದ್ದಾರೆ.

ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು ತಮ್ಮ ಈ ಸೇವೆಯಲ್ಲಿ ರೋಗಿಗಳು, ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಟೈಮ್​​ ಆಫ್ ಇಂಡಿಯಾ ವರದಿ ಮಾಡಿದೆ. ಜುಲೈ 6ರಂದು ಬೆಳಗ್ಗೆ 7 ಗಂಟೆಗೆ ಕೊಡಂಕೂರಿನ ವಾರ್ಡ್ ಸದಸ್ಯರಿಂದ ನನ್ನ ಸಹಾಯ ಕೋರಿ ದೂರವಾಣಿ ಕರೆ ಬಂದಿದ್ದು, ಈ ಸಮಯದಲ್ಲಿ ನಾನು ತಕ್ಷಣ ಪ್ರತಿಕ್ರಿಯೆ ನೀಡಿ, ನಿಟ್ಟೂರಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ, ಅಲ್ಲಿ ಮನೆಯೊಂದು ನೀರಿನಿಂದ ಮುಳುಗಿದ್ದು, ಅವರನ್ನು ಕಾಪಾಡಲು ಅಗ್ನಿಶಾಮಕ ಮತ್ತು ತುರ್ತು ಚಿಕಿತ್ಸಾ ವಿಭಾಗದ ರಕ್ಷಣಾ ಬೋಟ್ ಕೂಡ ಬಂದಿತ್ತು, ಆದರೆ ಅಗ್ನಿಶಾಮಕ ಬೋಟ್​​ನ್ನು ಅಲ್ಲಿಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ, ಈಗ ಅವರನ್ನು ಕಾಪಾಡಲೇಬೇಕು ಎಂದು ಧೈರ್ಯದಿಂದ ನನ್ನ ಕಾಯಕಿಂಗ್​​ನ್ನು ಬಳಸಿಕೊಂಡು, ಆ ಮನೆಯನ್ನು ತಲುಪಿದೆ, ಅಲ್ಲಿದ್ದ ಇಬ್ಬರು ವೃದ್ಧರನ್ನು ರಕ್ಷಿಸಿದೆ, ಕೊಡಂಕೂರು, ತರಕಟ್ಟೆ, ಕೆಮ್ಮಣ್ಣು , ಕೊಡವೂರು, ಕೆಮ್ಮಣ್ಣು ಮತ್ತು ನಿಟ್ಟೂರುಗಳಲ್ಲಿ ಸಿಲುಕಿಕೊಂಡಿದ್ದ ಹಲವರಿಗೆ ಕಾಯಕಿಂಗ್ ಮೂಲಕವೇ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು ಹೇಳಿದ್ದಾರೆ.

ಇದನ್ನೂ ಓದಿ: Udupi: ಸುರಿಯುವ ಮಳೆಯಲ್ಲಿ ತೊಂದರೆಪೀಡಿತ ಮೀನುಗಾರರಲ್ಲಿಗೆ ಹೋಗಿ ಪರಿಹಾರ ಒದಗಿಸುವ ಭರವಸೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

ಅವರ ಸಾಧನೆಗೆ ಈ ಹಿಂದಿನ ರಕ್ಷಣಾ ಕಾರ್ಯಾಚರಣೆಗಳನ್ನು ಪರಿಗಣಿಸಿ ಉಡುಪಿ ಜಿಲ್ಲಾಡಳಿತವು ಇಮ್ತಿಯಾಝ್ ಅವರಿಗೆ 2020ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರ ಸೇವೆಗೆ ಅನೇಕ ಪ್ರಶಸ್ತಿಗಳು ಲಭಿಸಿದೆ, ತಮ್ಮ ಸೇವೆಗೆ ಯಾವತ್ತೂ ಫಲ ಬಯಸಿದೆ ಕೆಲಸ ಮಾಡಿದ್ದಾರೆ, ಯಾರೆ ಅಪತ್ತಿನಲ್ಲಿದ್ದರು, ತಕ್ಷಣ ಧಾವಿಸುವವರು ಇಮ್ತಿಯಾಝ್, ನನಗೆ ಯಾವುದೇ ಹೊತ್ತಿಗೂ ಬೇಕಾದರೂ ಫೋನ್​ ಮಾಡಿ ನಾನು ನಿಮ್ಮ ಸಹಾಯಕ್ಕೆ ಬರುವೇ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!