ಉಡುಪಿ, ಅಕ್ಟೋಬರ್ 22: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮಲ್ಪೆ ಬೀಚ್ ಇದೀಗ ಪ್ರವಾಸಿಗರಿಗೆ ತೆರೆದುಕೊಂಡಿದೆ. ಸದ್ಯ ನವರಾತ್ರಿ (Navratri) ಹಿನ್ನಲೆಯಲ್ಲಿ ಸಾಲು ಸಾಲು ರಜೆ ಇರುವ ಕಾರಣ ರಾಜ್ಯದ ನಾನಾ ಭಾಗದಿಂದ ಪ್ರವಾಸಿಗರು ಉಡುಪಿಗೆ ಆಗಮಿಸಿ ಮಲ್ಪೆ ಬೀಚ್‌ನ ಮಜಾ ಅನುಭವಿಸುತ್ತಿದ್ದಾರೆ. ಮಳೆಗಾಲದ ನಂತರ ಮೊದಲ ಬಾರಿಗೆ ಸೈಯಿಂಟ್ ಮೇರಿಸ್ ಬೀಚ್ ಕೂಡ ಪ್ರವಾಸಿಗರ ಪ್ರವೇಶಕ್ಕೆ ತೆರವಾಗಿರುವುದು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.
ಹೌದು ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮಲ್ಪೆ ಬೀಚ್ ಕೂಡ ಒಂದು. ವರ್ಷವು ಇಲ್ಲಿ ಲಕ್ಷಾಂತರ ಜನ ಪ್ರವಾಸಿಗರು ಭೇಟಿ ನೀಡಿದ ಸಮುದ್ರದ ಮಜಾ ಅನುಭವಿಸುತ್ತಾರೆ. ಈ ಮೊದಲು ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯದಂತೆ ಬಲೆಯ ತಡೆಬೇಲೆ ಹಾಕಲಾಗಿತ್ತು, ಸದ್ಯ ವಿಳಂಬವಾದರು ಕೂಡ ಜಿಲ್ಲಾಡಳಿತ ತಡೆ ಬೇಲಿ ತೆರವುಗೊಳಿಸಿ ಪ್ರವಾಸಿಗರಿಗೆ ಮುಕ್ತವಾಗಿಸಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಡಲ ಅಬ್ಬರದ ಹಿನ್ನೆಲೆಯಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಪ್ರತಿವರ್ಷ ಮೇ 15ರಿಂದ ಸೆ. 15ರವರೆಗೆ ಬೀಚ್‌ನ ಉದ್ದಕ್ಕೂ ಫಿಶ್ ನೆಟ್ ತಡೆಬೇಲಿಯನ್ನು ಕಟ್ಟಿ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಈಗ ಬೀಚ್ ವಾಟರ್ ಸ್ಪೋರ್ಟ್ ಮತ್ತೆ ಆರಂಭಗೊಂಡಿದ್ದು, ಬೋಟಿಂಗ್, ಬನಾನಾ ರಾಪಿಂಗ್, ಬಂಪಿ ರೈಡ್, ಝರ್ಜಿಂಗ್, ಪವರ್ ಬೈಕ್, ಕ್ರಿಕೆಟ್ ಮೊದಲಾದವುಗಳು ಆರಂಭಗೊಂಡಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ.
ಇದನ್ನೂ ಓದಿ: ಕಾರ್ಕಳದ ಪರಶುರಾಮ ಪ್ರತಿಮೆ ವಿವಾದ; ಕಾಂಗ್ರೆಸ್, ಬಿಜೆಪಿ ವಿರುದ್ಧ ಪ್ರಕರಣ ದಾಖಲು
ನವರಾತ್ರಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಧಾರ್ಮಿಕ ಕ್ಷೇತ್ರ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಮಲ್ಪೆ ಬೀಚ್ಗೆ ಹೊರ ಜಿಲ್ಲೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವೀಕೆಂಡ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮನದಿಂದಾಗಿ ಬೀಚ್ನಲ್ಲಿ ಜನಸಂದಣಿ ಹೆಚ್ಚಾಗಿದೆ. ಸರಣಿ ರಜೆಯಿಂದಾಗಿ ಬೆಂಗಳೂರು, ಮೈಸೂರು ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ನೀರಿಗಿಳಿದು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ಪ್ರವಾಸಿಗರ ಸ್ವರ್ಗವೆಂದೇ ಖ್ಯಾತಿ ಪಡೆದ ಮಲ್ಪೆ ಸಮೀಪದ ನಡುಗುಡ್ಡೆ ಸೈಂಟ್ ಮೇರೀಸ್ ಐಲ್ಯಾಂಡ್ ಪ್ರವೇಶಕ್ಕೆ ಇದೀಗ ಅವಕಾಶ ನೀಡಲಾಗಿದೆ. ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು ರಾಜ್ಯದ ನಾನಾ ಭಾಗದಿಂದ ಪ್ರವಾಸಿಗರು ಮಲ್ಪೆ ಆಗಮಿಸಿ ರಜೆಯ ಮಜಾ ಅನುಭವಿಸುತ್ತಿದ್ದಾರೆ.
ಮಲ್ಪೆ ಬೀಚ್ ಮತ್ತು ಸೈಂಟ್ ಮೇರೀಸ್ ಐ ಲ್ಯಾಂಡ್ ಪ್ರವಾಸಿಗರಿಗೆ ತೆರವುವಾಗಿರುವುದು ಸಾಲು ಸಾಲು ರಜೆ ಬಂದಿರುವ ಹಿನ್ನಲೆಯಲ್ಲಿ ಉಡುಪಿಯಲ್ಲಿ ಜನ ಜಂಗುಳಿ ಕಂಡುಬಂದಿದೆ. ಹಬ್ಬದ ಜೊತೆಗೆ ರಜೆಯ ಇರುವ ಹಿನ್ನಲೆಯಲ್ಲಿ ಪ್ರವಾಸಿಗರು ರಜೆಯ ಮಜಾ ಅನುಭವಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.