ಉಡುಪಿ: ಮಧ್ಯರಾತ್ರಿ ನಿದ್ದೆಗಣ್ಣಲ್ಲಿ ಕೊರಗಜ್ಜನ ದೈವಸ್ಥಾನಕ್ಕೆ ಹೋಗಿ ಸೇಫ್ ಆಗಿ ಮನೆಗೆ ಬಂದ ಮಗು, ಕೊರಗಜ್ಜ ಪವಾಡ ಎಂದ ಭಕ್ತರು

ಕೊರಗಜ್ಜನಿಗೆ ಹೊತ್ತುಕೊಂಡಿದ್ದ ಹರಕೆ ಈಡೇರಿದ ಉದಾಹರಣೆಗಳು ಸಹ ಇವೆ, ಇದೀಗ ಉಡುಪಿಯಲ್ಲಿ ಮತ್ತೊಂದು ಕೊರಗಜ್ಜ ಪವಾಡ ನಡೆದಿದೆ.

ಉಡುಪಿ: ಮಧ್ಯರಾತ್ರಿ ನಿದ್ದೆಗಣ್ಣಲ್ಲಿ ಕೊರಗಜ್ಜನ ದೈವಸ್ಥಾನಕ್ಕೆ ಹೋಗಿ ಸೇಫ್ ಆಗಿ ಮನೆಗೆ ಬಂದ ಮಗು,  ಕೊರಗಜ್ಜ ಪವಾಡ ಎಂದ ಭಕ್ತರು
Edited By:

Updated on: Jul 20, 2023 | 2:40 PM

ಉಡುಪಿ, (ಜುಲೈ.20): ಕೊರಗಜ್ಜ (koragajja)ದಕ್ಷಿಣ ಕನ್ನಡ ಹಾಗೂ ಉಡುಪಿ (Udupi) ಜಿಲ್ಲೆಯ ಜನಪ್ರಿಯ ದೈವ. ಕೊರಗಜ್ಜ ಕರಾವಳಿ ಭಾಗದ ಆರಾಧ್ಯ ದೈವ. ಜನರು ಬೆಲೆ ಬಾಳುವ ವಸ್ತು ಕಳೆದು ಹೋದರೆ, ಆರೋಗ್ಯ ಸಮಸ್ಯೆ ಬಂದರೆ ಮೊದಲು ಹರಕೆ ಹೊತ್ತುಕೊಳ್ಳುವುದು ಕೊರಗಜ್ಜನಿಗೆ. ಹಲವೆಡೆ ಹರಕೆ ಈಡೇರಿದ ಉದಾಹರಣೆಗಳು ಸಹ ಇವೆ. ತನ್ನನ್ನು ಭಕ್ತಿಯಿಂದ ಪ್ರಾರ್ಥಿಸಿದವರಿಗೆ ಕ್ಷಿಪ್ರ ಫಲಿತಾಂಶ ಪರಿಹಾರವನ್ನು ಒದಗಿಸುವ ಮೂಲಕ ‌ಕಾರಣಿಕ ಶಕ್ತಿಯನ್ನು ‌ಮೆರೆಯುತ್ತಿರುವ ಕೊರಗಜ್ಜನ ಪವಾಡಕ್ಕೆ ಬೇಕಾದಷ್ಟು ನಿದರ್ಶನಗಳು ‌ಸಿಕ್ಕಿವೆ. ಇದರ ಬೆನ್ನಲ್ಲೇ ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜ ಪವಾಡ ನಡೆದಿದೆ. ರಾತ್ರಿ ನಿದ್ದೆ ಕಣ್ಣಿನಲ್ಲಿ ನಡೆಯುತ್ತಿದ್ದ ಮಗುವನ್ನು ತಡೆದು ನಿಲ್ಲಿಸಿದ ಕೊರಗಜ್ಜ ಪವಾಡ ಮೆರೆದಿದ್ದಾರೆ. ಉಡುಪಿಯ ಕುಂದಾಪುರ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ಇಂದು(ಜುಲೈ 29( ಮುಂಜಾನೆ 3 ಗಂಟೆಗೆ ಈ ಪವಾಡ ನಡೆದಿದೆ.

ಇದನ್ನೂ ಓದಿ: ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ; ಹಿಂದೂ ವಿರೋಧಿ ಕೃತ್ಯಗಳು ಮಾಯವಾಗುವಂತೆ ಅಜ್ಜನಲ್ಲಿ ಪ್ರಾರ್ಥನೆ

ಮಗು ನಿದ್ದೆಗಣ್ಣಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬಂದು ಉಡುಪಿ ಜಿಲ್ಲೆಯ ಕುಂದಾಪುರದ ಕೆದೂರಿನಲ್ಲಿ ಇರುವ ಕಾರಣಿಕದ ಕೊರಗಜ್ಜ ದೈವಸ್ಥಾನ ನಾಮಫಲಕದ ಮುಂದೆ ನಿಂತಿದೆ. ಮಧ್ಯರಾತ್ರಿ 3 ಗಂಟೆಗೆ ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವವರು ಮಗುವನ್ನು ನೋಡಿ ಕಾರು ನಿಲ್ಲಿಸಿದ್ದರು. ಬಳಿಕ ಮಗುವನ್ನು ಮಾತಾಡಿಸಿದಾಗ ನಿದ್ದೆಗಣ್ಣಲ್ಲಿ ನಡೆದುಕೊಂಡು ಬಂದಿರುವುದು ಬೆಳಕಿಗೆ ಬಂದಿದೆ.

ನಂತರ ವಿಶ್ವ, ಮಗುವನ್ನು ಮರಳಿ ಮನೆಗೆ ಹೋಗಿ ಬಿಟ್ಟು ಮಾನವೀಯತೆ ಮರೆದಿದ್ದು, ಕೊರಗಜ್ಜ ಪವಾಡದಿಂದಲೇ ಮಗು ಪಾರಾಗಿ ಬಂದಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

Published On - 2:01 pm, Thu, 20 July 23