ಉಡುಪಿ, ಫೆ.15: ಮೋಸ್ಟ್ ವಾಂಟೆಡ್ ನಕ್ಸಲೈಟ್ ಶ್ರೀಮತಿ ಅಲಿಯಾಸ್ ಉನ್ನಿಮಾಯಳನ್ನು ಪೊಲೀಸರು ಕಾರ್ಕಳಕ್ಕೆ (Karkala) ಕರೆ ತಂದಿದ್ದಾರೆ. 2011 ಡಿಸೆಂಬರ್ 19 ರಂದು ಪೊಲೀಸ್ ಮಾಹಿತಿದಾರ ಮಲೆಕುಡಿಯ ಜನಾಂಗದ ಸದಾಶಿವ ಗೌಡನ ಅಪಹರಣ, ಹತ್ಯೆ ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡಲು ಶ್ರೀಮತಿಯನ್ನು ಪೊಲೀಸರು ಕಾರ್ಕಳಕ್ಕೆ ಕರೆತಂದಿದ್ದಾರೆ. 2023ರ ನವೆಂಬರ್ನಲ್ಲಿ ಶ್ರೀಮತಿಯನ್ನು ಕೇರಳದಲ್ಲಿ (Kerala) ಅರೆಸ್ಟ್ ಮಾಡಲಾಗಿತ್ತು. ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಶ್ರೀಮತಿ ಸೆರೆಯಾಗಿದ್ದಳು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡುಕೊಡಿಗೆ ನಿವಾಸಿಯಾಗಿರುವ ಶ್ರೀಮತಿ ಕೇರಳ-ಕರ್ನಾಟಕ ಗಡಿಭಾಗದಲ್ಲಿ ಆ್ಯಕ್ಟಿವ್ ಆಗಿದ್ದಳು. ಸದಾಶಿವ ಗೌಡ ಹತ್ಯೆ ನಡೆಸಿದ ಕಾರ್ಕಳ ವ್ಯಾಪ್ತಿಯ ಕಬ್ಬಿನಾಲೆಗೆ ಬಾಡಿ ವಾರೆಂಟ್ ಮೇಲೆ ಶ್ರೀಮತಿಯನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಶ್ರೀಮತಿ ಕರೆ ತಂದು ಘಟನಾ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಶ್ರೀಮತಿ ಮೇಲೆ ರಾಜ್ಯದ ಹಲವು ಠಾಣೆಗಳಲ್ಲಿ 9 ಪ್ರಕರಣಗಳಿವೆ.
ಇದನ್ನೂ ಓದಿ: ರೌಡೀಶೀಟರ್ ಜೈಲಿನಿಂದ ಯುವತಿಯ ನಗ್ನ ಫೋಟೋ ಕಳಿಸಿ ಹಣ ನೀಡುವಂತೆ ಬೆದರಿಕೆ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜಡಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ಜನರ ಶಂಕಿತ ನಕ್ಸಲರ ತಂಡ ಭೇಟಿ ವದಂತಿ ಕೆಲವು ದಿನಗಳ ಹಿಂದೆ ಹಬ್ಬಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸ್ಥಳೀಯ ವ್ಯಕ್ತಿಯೊಬ್ಬರು ನನ್ನ ಮನೆಯ ಪಕ್ಕದಲ್ಲಿ ನಕ್ಸಲರ ತಂಡ ಹಾದು ಹೋಗಿದ್ದರು, ನಾನು ಅದನ್ನು ಗಮನಿಸಿದ್ದೇನೆ ಎನ್ನುವ ಹೇಳಿಕೆ ನೀಡಿದ್ದರು. ಅಲ್ಲದೆ ನಕ್ಸಲರನ್ನು ನೋಡಿದ್ದೇನೆ ಎಂದು ಬೆಂಗಳೂರಿನಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಇದರ ಮಾಹಿತಿಯನ್ನು ಕೂಡ ರವಾನಿಸಿದ್ದರು. ಹೀಗಾಗಿ ತಕ್ಷಣಕ್ಕೆ ಆಕ್ಟಿವ್ ಆದ ನಕ್ಸಲ್ ನಿಗ್ರಹ ದಳ ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕೂಂಬಿಂಗ್ ಕೂಡ ನಡೆಸಿದೆ. ಅತಿ ಆಧುನಿಕ ಡ್ರೋನ್ ಬಳಸಿ ನಕ್ಸಲ್ ಪಡಿ ಅನ್ನು ಪತ್ತೆಹಚ್ಚುವ ಕೆಲಸವನ್ನ ಕೂಡ ಮಾಡಿರುವ ನಕ್ಸಲ್ ನಿಗ್ರಹ ಪಡೆಗೆ ಇದುವರೆಗೆ ಯಾವುದೇ ನಕ್ಸಲರು ಕೂಡ ಗೋಚರವಾಗಿಲ್ಲ. ಹೀಗಾಗಿ ಸದ್ಯ ಮುದುರು, ಉದಯನಗರ ವ್ಯಾಪ್ತಿಯಲ್ಲಿ ಸ್ಥಳೀಯರು ಮಾತ್ರ ನಕ್ಸಲರು ಬಂದಿರುವುದು ಹೌದು ಅಥವಾ ಇನ್ಯಾವುದೋ ದಂಧೆಗೋಸ್ಕರ ಹೆಸರನ್ನ ಬಳಸಿಕೊಳ್ಳಲಾಗುತ್ತಿದೆಯೋ ಎನ್ನುವ ಚರ್ಚೆ ಮಾಡುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:23 am, Thu, 15 February 24