ಉಡುಪಿ: 10 ಮಾರ್ಕ್ಸ್ ಕಡಿಮೆ ಬಂದಿದ್ದಕ್ಕೆ ಫೈನ್ ಹಾಕುವುದಾಗಿ ಗದರಿದ ಪ್ರಿನ್ಸಿಪಾಲ್, ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: Nov 29, 2022 | 2:52 PM

ಪರೀಕ್ಷೆಯಲ್ಲಿ 10 ಅಂಕ ಕಡಿಮೆ ಗಳಿಸಿದ್ದಕ್ಕೆ ಫೈನ್ ಹಾಕುವುದಾಗಿ ಪ್ರಿನ್ಸಿಪಾಲ್ ಗದರಿದ್ದಾರೆ. ಹೀಗಾಗಿ ದೀಪ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.

ಉಡುಪಿ: 10 ಮಾರ್ಕ್ಸ್ ಕಡಿಮೆ ಬಂದಿದ್ದಕ್ಕೆ ಫೈನ್ ಹಾಕುವುದಾಗಿ ಗದರಿದ ಪ್ರಿನ್ಸಿಪಾಲ್, ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
ದೀಪ್ತಿ ಮನೆ ಮುಂದೆ ಸೇರಿರುವ ಜನ
Follow us on

ಉಡುಪಿ: ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಬಂತು ಎಂದು ಪ್ರಿನ್ಸಿಪಾಲ್ ಬೈದದಕ್ಕೆ ಮನನೊಂದ ಪಿಯುಸಿ ವಿದ್ಯಾರ್ಥಿನಿ ದೀಪ್ತಿ ನೇಣಿಗೆ ಶರಣಾದ ಘಟನೆ ಉಡುಪಿ ಜಿಲ್ಲೆ ಪೆರ್ಡೂರಿನ ಮನೆಯೊಂದರಲ್ಲಿ ನಡೆದಿದೆ. ಹೆಬ್ರಿಯಲ್ಲಿರುವ ಎಸ್​ಆರ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪ್ತಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಉಚಿತ ಸೀಟ್ ಪಡೆದಿದ್ದಳು. ಆದ್ರೆ ಈ ಬಾರಿಯ ಪರೀಕ್ಷೆಯಲ್ಲಿ 10 ಅಂಕ ಕಡಿಮೆ ಗಳಿಸಿದ್ದಕ್ಕೆ ಫೈನ್ ಹಾಕುವುದಾಗಿ ಪ್ರಿನ್ಸಿಪಾಲ್ ಗದರಿದ್ದಾರೆ. ಹೀಗಾಗಿ ದೀಪ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.

ಇನ್ನು ಘಟನೆ ಸಂಬಂಧ ದೀಪ್ತಿ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ಮುಂದೆ ನನ್ನ ಮಗಳನ್ನು ನಿಂದಿಸಿದ್ದಾರೆ. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿದ್ದಾಳೆಂದು ತಂದೆ ಸುರೇಶ್ ಮೆಂಡನ್ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:  Tv9 Digital Live| ಮಕ್ಕಳ ಆತ್ಮಹತ್ಯೆಗೆ ಕಾರಣವೇನು? ಪರಿಹಾರಗಳು ಹೀಗಿವೆ..

ಪರೀಕ್ಷೆಗೆ ಕಾಪಿ ಚೀಟಿ ತಂದಿದ್ದಕ್ಕೆ ಶಿಕ್ಷಕಿಯಿಂದ ನಿಂದನೆ: ಡೆತ್​ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಪರೀಕ್ಷೆಗೆ ಕಾಪಿ ಚೀಟಿ ತಂದಿದ್ದಳು ಎಂದು ಶಿಕ್ಷಕಿ (teacher) ನಿಂದಿಸಿದಕ್ಕೆ ಮನನೊಂದು ವಿದ್ಯಾರ್ಥಿನಿ (Student) ಡೆತ್​ನೋಟ್​ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ನಗರದ ಒಎಂಬಿಆರ್​ ಲೇಔಟ್​ನ ದೊಡ್ಡ ಬಾಣಸವಾಡಿಯ ಮರಿಯಂ ನಿಲಯ ಇಂಗ್ಲಿಷ್​ ಸ್ಕೂಲ್​ನಲ್ಲಿ ನಡೆದಿದೆ. ಅಲ್ಲಿಗೆ ಬೆಂಗಳೂರಿನಲ್ಲಿ ಮತ್ತೊಂದು ವಿದ್ಯಾರ್ಥಿನಿಯ ಆತ್ಮಹತ್ಯೆಯಾದಂತಾಗಿದೆ. ಅಮೃತಾ ನೇಣಿಗೆ ಶರಣಾದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ. ನವೆಂಬರ್​ 2ರಂದು ಟೆಸ್ಟ್ ವೇಳೆ ಅಮೃತಾ ಕಾಪಿ ಚೀಟಿ ತಂದಿದ್ದಾಳೆ. ಇದೇ ವಿಷಯಕ್ಕೆ 4-5 ದಿನಗಳಿಂದ ಕ್ಲಾಸ್​ನಲ್ಲಿ ವಿದ್ಯಾರ್ಥಿಗಳ ಮುಂದೆ ಅಮೃತಾಳನ್ನು ಶಿಕ್ಷಕಿ ಶಾಲಿನಿ ನಿಂದಿಸಿದ್ದಾರೆ. ಶಾಲೆಯಲ್ಲಿ ತನಗಾಗುತ್ತಿದ್ದ ಅವಮಾನದ ಬಗ್ಗೆ ಅಮೃತಾ ಡೆತ್​ನೋಟ್​​ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಇದ್ದ ಒಬ್ಬಳೇ ಪುತ್ರಿಯನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕಿದ್ದಾರೆ. LKGಯಿಂದ ಇದೇ ಶಾಲೆಯಲ್ಲಿ ಅಮೃತಾ ಓದುತ್ತಿದ್ದಳು ಎನ್ನಲಾಗುತ್ತಿದೆ.

ನನ್ನ ಮಗಳ ಸಾವಿಗೆ ಶಿಕ್ಷಕಿ ಶಾಲಿನಿಯೇ ಕಾರಣ: ಅಮೃತಾ ತಾಯಿ ಆಶಾ ಆರೋಪ

ಇತ್ತ ಶಾಲಾ ಆವರಣದಲ್ಲಿ ಅಮೃತಾ ಮೃತದೇಹವಿಟ್ಟು ಪೋಷಕರು ಪ್ರತಿಭಟನೆ ಮಾಡಿದರು. ನನ್ನ ಮಗಳ ಸಾವಿಗೆ ಶಿಕ್ಷಕಿ ಶಾಲಿನಿಯೇ ಕಾರಣ ಎಂದು ತಾಯಿ ಆಶಾ ಆರೋಪ ಮಾಡಿದರು. ಕ್ಲಾಸ್ ಟೀಚರ್ ಶಾಲಿನಿ ಬರುವವರೆಗೂ ಇಲ್ಲಿಂದ ಮೃತ ದೇಹ ತೆಗೆದುಕೊಂಡು ಹೋಗಲ್ಲ ಎಂದು ಪಟ್ಟುಹಿಡಿದರು. ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಜಯಪ್ರಕಾಶ್​ ಭೇಟಿ ನೀಡಿ ಅಮೃತಾ ತಾಯಿ ಆಶಾ ಅವರನ್ನು ಸಾಂತ್ವನ ಮಾಡಿದರು. ಅಮೃತಾ ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.

Published On - 12:43 pm, Tue, 29 November 22