ಉಡುಪಿ: ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಮೀನೊಂದು ಕಾಣಿಸಿಕೊಂಡಿದೆ. ಭಾರೀ ಗಾತ್ರ, ಉದ್ದ ಬಾಲ, ಅಕ್ಕಪಕ್ಕ ಬೆನ್ನ ಮೇಲೆ ಅಗಲಗಲ ರೆಕ್ಕೆ ಇರುವ ಮೀನು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದೆ. ಉಡುಪಿಯಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮನ್ ಎಂಬವವರಿಗೆ ಸೇರಿದ ಮೀನುಗಾರಿಕಾ ಬೋಟ್ನಲ್ಲಿ ಬಲೆ ಬೀಸಲಾಗಿತ್ತು. ಬಂಗುಡೆ, ಅಂಜಲ್ ಮೀನಿನ ಜೊತೆಗೆ ಭಾರಿಗಾತ್ರದ ಈ ಮೀನು ಬಿದ್ದಿದೆ.
ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಎಂಬ ಹೆಸರಿದೆ. ಹೆಲಿಕಾಪ್ಟರ್ ಫಿಶ್ ಅಂತ ಅಡ್ಡ ಹೆಸರಿದೆ. ಭಾರೀ ಗಾತ್ರದ ಈ ಮೀನು 84 ಕಿಲೋ ತೂಕ ಹೊಂದಿದೆ. ಕರ್ನಾಟಕದ ಮಂದಿಗೆ ಹೆಲಿಕಾಪ್ಟರ್ ಫಿಶ್ನ ಮಾಂಸ ಇಷ್ಟ ಇಲ್ಲ. ಇದಕ್ಕೆ ಕಾರಣ ಇಲ್ಲಿನವರಿಗೆ ಇದರ ರುಚಿ ಅಷ್ಟು ಹಿಡಿಸುವುದಿಲ್ಲ. ಕೇರಳಿಗರು ಕೆಜಿಗೆ ಐವತ್ತು ರೂಪಾಯಿ ಕೊಟ್ಟು ನೆಮ್ಮೀನ್ನ ಮಾಂಸವನ್ನು ಖರೀದಿ ಮಾಡುತ್ತಾರೆ. ಹೀಗಾಗಿ ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ನೆಮ್ಮೀನ್ ಅನ್ನು ರವಾನೆ ಮಾಡಲಾಯಿತು.
ಇದನ್ನೂ ಓದಿ:
ಕಾರವಾರದ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೆಬರ ಪತ್ತೆ
Published On - 2:30 pm, Mon, 4 October 21