ಶತಮಾನಗಳಿಂದಲೂ ಧಾರ್ಮಿಕ ಕ್ಷೇತ್ರವಾಗಿರುವ ದೇವನಾಡು ಉಡುಪಿ ರಾಷ್ಟ್ರದ ಅಗ್ರಗಣ್ಯ ಜಿಲ್ಲೆಯಾಗಲಿ -ರಾಜ್ಯಪಾಲ ಗೆಹ್ಲೋಟ್ ಆಶಯ

| Updated By: ಸಾಧು ಶ್ರೀನಾಥ್​

Updated on: Aug 25, 2022 | 9:15 PM

Udupi district: ಉಡುಪಿ ದೇವತೆಗಳ ಭೂಮಿ, ಶತಮಾನಗಳಿಂದಲೂ ಧಾರ್ಮಿಕ ಕ್ಷೇತ್ರವಾಗಿ ಮಹತ್ವ ಪಡೆದಿದೆ. ಕಳೆದ 25 ವರ್ಷಗಳಲ್ಲಿ ಜಿಲ್ಲೆಯು ಅಭಿವೃದ್ದಿಯಲ್ಲಿ ವೇಗ ಪಡೆದುಕೊಂಡಿದೆ. ಉಡುಪಿ ಭವಿಷ್ಯದಲ್ಲಿ ರಾಷ್ಟ್ರದ ಅಗ್ರಗಣ್ಯ ಜಿಲ್ಲೆಯಾಗಲಿ -ರಾಜ್ಯಪಾಲ ಗೆಹ್ಲೋಟ್ ಆಶಯ

ಶತಮಾನಗಳಿಂದಲೂ ಧಾರ್ಮಿಕ ಕ್ಷೇತ್ರವಾಗಿರುವ ದೇವನಾಡು ಉಡುಪಿ ರಾಷ್ಟ್ರದ ಅಗ್ರಗಣ್ಯ ಜಿಲ್ಲೆಯಾಗಲಿ -ರಾಜ್ಯಪಾಲ ಗೆಹ್ಲೋಟ್ ಆಶಯ
ಜಿಲ್ಲೆಯಾಗಿ ಉಡುಪಿಗೆ 25 ವರ್ಷ: ಶತಮಾನಗಳಿಂದಲೂ ಧಾರ್ಮಿಕ ಕ್ಷೇತ್ರವಾಗಿರುವ ದೇವನಾಡು ರಾಷ್ಟ್ರದ ಅಗ್ರಗಣ್ಯ ಜಿಲ್ಲೆಯಾಗಲಿ -ರಾಜ್ಯಪಾಲ ಗೆಹ್ಲೋಟ್ ಆಶಯ
Follow us on

ಉಡುಪಿ: ಜಿಲ್ಲೆಯಾಗಿ 25 ವರ್ಷ ಸಂದಿದೆ ಉಡುಪಿಗೆ (Udupi district). ಇಂದು ನಡೆದ ರಜತ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಭಾಗಿಯಾಗಿದ್ದರು. ಉಡುಪಿ ದೇವತೆಗಳ ಭೂಮಿ, ಶತಮಾನಗಳಿಂದಲೂ ಧಾರ್ಮಿಕ ಕ್ಷೇತ್ರವಾಗಿ ಮಹತ್ವ ಪಡೆದಿದೆ. ಕಳೆದ 25 ವರ್ಷಗಳಲ್ಲಿ ಜಿಲ್ಲೆಯು ಅಭಿವೃದ್ದಿಯಲ್ಲಿ ವೇಗ ಪಡೆದುಕೊಂಡಿದೆ. ಕರ್ನಾಟಕ ಕರಾವಳಿ ಐತಿಹಾಸಿಕ, ಧಾರ್ಮಿಕ, ಕಲೆಗಳಿಂದ ಪ್ರಸಿದ್ದಿ ಪಡೆದಿದೆ. ಉಡುಪಿ ಭವಿಷ್ಯದಲ್ಲಿ ರಾಷ್ಟ್ರದ ಅಗ್ರಗಣ್ಯ ಜಿಲ್ಲೆಯಾಗಲಿ ಎಂದು ರಾಜ್ಯಪಾಲ ಗೆಹ್ಲೋಟ್ (Karnataka Governor Thawar Chand Gehlot) ಆಶಯ ವ್ಯಕ್ತಪಡಿಸಿದರು.

ಕಾರ್ಕಳದ ಕಲಾವಿದರು ಕಲ್ಲಿಗೆ ಜೀವ ತುಂಬುವರು. ಆಚಾರ್ಯ ಮಧ್ವರು ಧಾರ್ಮಿಕ ಮಾರ್ಗ ತೋರಿದವರು. ನಾಗಾರಾಧನೆ, ಸಿರಿ, ಭೂತಕೋಲ, ಆಟಿ ಕಳಂಜದಂತಹಾ ಅದ್ಬುತ ಜನಪದದ ಬೀಡು ಇದು. ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ವು. ದೇಶದ ಯಾವುದೇ ಜಿಲ್ಲೆಯಲ್ಲಿ ಈ‌ ಪ್ರಮಾಣದ ಮಹಿಳೆಯರಿಲ್ಲ. ಮೀನುಗಾರಿಕೆಯನ್ನು ನಂಬಿ ಎರಡು ಲಕ್ಷ ಜನರಿದ್ದು ದೊಡ್ಡ ಆರ್ಥಿಕ‌ ಕೊಡುಗೆ ನೀಡುತ್ತಿದ್ದಾರೆ. ಕರಾವಳಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ. ಅಭಿವೃದ್ದಿಗೆ ಅಗತ್ಯಕ್ರಮ ಕೈಗೊಳ್ಳಲು ರಾಜ್ಯ, ಕೇಂದ್ರದ ಜೊತೆ ನಾನು ಸಂಪರ್ಕವಾಗಿ ಸಹಕರಿಸುತ್ತೇನೆ ಎಂದು ಕರಾವಳಿ ಜನರಿಗೆ ರಾಜ್ಯಪಾಲರು ಭರವಸೆ ನೀಡಿದರು.