ಉಡುಪಿ: ಪರ್ಕಳದ ಕೆರೆ ಅಭಿವೃದ್ಧಿ ವೇಳೆ ಪುರಾತನ ದೇವಾಲಯದ ಅವಶೇಷಗಳು ಪತ್ತೆ

|

Updated on: Mar 21, 2024 | 12:16 PM

ಉಡುಪಿ ಜಿಲ್ಲೆಯ ಪರ್ಕಳದ ದುರ್ಗಾ ನಗರದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಜೆಸಿಬಿ ಮೂಲಕ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿದ್ದಾಗ ಪುರಾತನ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ಪ್ರಾಣಪೀಠದಲ್ಲಿ ತೀರ್ಥ ಹರಿಯುವ ಕಲ್ಲಿನ ಕುಂಡ ಹಾಗೂ ಎಲ್ ಆಕಾರದ ವಿಗ್ರಹ ಪತ್ತೆಯಾಗಿವೆ.

ಉಡುಪಿ: ಪರ್ಕಳದ ಕೆರೆ ಅಭಿವೃದ್ಧಿ ವೇಳೆ ಪುರಾತನ ದೇವಾಲಯದ ಅವಶೇಷಗಳು ಪತ್ತೆ
ಉಡುಪಿಯ ಪರ್ಕಳದ ಕೆರೆ ಅಭಿವೃದ್ಧಿ ವೇಳೆ ಪುರಾತನ ದೇವಾಲಯದ ಅವಶೇಷಗಳು ಪತ್ತೆ
Follow us on

ಉಡುಪಿ, ಮಾರ್ಚ್ 20: ಜಿಲ್ಲೆಯ (Udupi) ಪರ್ಕಳದ ದುರ್ಗಾ ನಗರದಲ್ಲಿ ಉಷಾ ನಾಯಕ್ ಎಂಬುವವರ ಮನೆಯ ಬಳಿ ಇರುವ ಕೆರೆ ಅಭಿವೃದ್ಧಿ ಕಾಮಗಾರಿ ವೇಳೆ ಪುರಾತನ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ಪ್ರಾಣಪೀಠದಲ್ಲಿ ತೀರ್ಥ ಹರಿಯುವ ಕಲ್ಲಿನ ಕುಂಡ ಹಾಗೂ ಎಲ್ ಆಕಾರದ ವಿಗ್ರಹ ಪತ್ತೆಯಾಗಿವೆ.

ಕಳೆದ ಐದು ದಿನಗಳಿಂದ ಪರ್ಕಳ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮಣ್ಣು ಅಗೆಯುವ ಯಂತ್ರ ಬಳಸಿ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ. ಈ ವೇಳೆ, ಕಾಮಗಾರಿ ನಡೆಯುತ್ತಿರುವಾಗ ಪ್ರಾಣಪೀಠದಲ್ಲಿ ತೀರ್ಥ ಹರಿಯುವ ಕಲ್ಲಿನ ಕುಂಡ ಹಾಗೂ ಎಲ್ ಆಕಾರದ ವಿಗ್ರಹ ಪತ್ತೆಯಾಗಿವೆ.

ಇದನ್ನೂ ಓದಿ: ದೇವಸ್ಥಾನಕ್ಕೆ ‘ಆನೆ’ ಉಡುಗೊರೆ ಕೊಟ್ಟ ನಟಿ ಪ್ರಿಯಾಮಣಿ

ಈ ಹಿಂದೆ ಪರ್ಕಳ ಕೆಳಗಿನ ಪರ್ಕಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರದ ವೇಳೆ ಪರ್ಕಳ ನಗರ ಸಭಾ ಸದಸ್ಯ ರಾಮದಾಸ್ ನಾಯ್ಕ್ ಅವರು ಪ್ರಶ್ನೆ ಎತ್ತಿದಾಗ ಐಕೆರೆಯಲ್ಲಿ ಜೆಸಿಬಿ ಮೂಲಕ ಸುಮಾರು 15 ದಿನಗಳ ಕಾಲ ಮಣ್ಣು ತೆರವು ಮಾಡಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.

ಐಕೆರೆಯಲ್ಲಿ ಕೆರೆಯ ಅಭಿವೃದ್ಧಿಯನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಂಡ ನಂತರ ದೇವಾಲಯದ ಅವಶೇಷಗಳು ಪತ್ತೆಯಾಗಿರುವುದು ವಿಶೇಷ. ಸ್ಥಳೀಯ ನಿವಾಸಿ ಉಷಾ ನಾಯಕ್ ಅವರ ಮಾಹಿತಿ ಮೇರೆಗೆ ಸಮಾಜ ಸೇವಕ ಗಣೇಶ್ ರಾಜ್ ಸರಳಬೆಟ್ಟು ಅವರು ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೋಹನ್ ದಾಸ್ ನಾಯಕ್ ಪರ್ಕಳ, ಗಣೇಶ್ ಸಣ್ಣಕ್ಕಿ ಬೆಟ್ಟು ಮತ್ತಿತರರು ಇದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ