ದೇವಸ್ಥಾನಕ್ಕೆ ‘ಆನೆ’ ಉಡುಗೊರೆ ಕೊಟ್ಟ ನಟಿ ಪ್ರಿಯಾಮಣಿ

Priyamani: ಕರ್ನಾಟಕ ಮೂಲದ ನಟಿ ಪ್ರಿಯಾಮಣಿ, ಕೇರಳದ ದೇವಾಲಯ ಒಂದಕ್ಕೆ ಭಾರಿ ಗಾತ್ರದ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ಆನೆ’ ಉಡುಗೊರೆಯಾಗಿ ನೀಡಲು ಘನವಾದ ಕಾರಣ ಇದೆ.

ದೇವಸ್ಥಾನಕ್ಕೆ ‘ಆನೆ’ ಉಡುಗೊರೆ ಕೊಟ್ಟ ನಟಿ ಪ್ರಿಯಾಮಣಿ
Follow us
|

Updated on: Mar 19, 2024 | 11:00 AM

ಇತ್ತೀಚೆಗೆ ಬಾಲಿವುಡ್​ನಲ್ಲಿಯೂ (Bollywood) ಮಿಂಚುತ್ತಿರುವ ದಕ್ಷಿಣ ಭಾರತದ ಜನಪ್ರಿಯ ನಟಿ ಪ್ರಿಯಾಮಣಿ ಕೇರಳದ ದೇವಸ್ಥಾನವೊಂದಕ್ಕೆ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾಗೆಂದು ಇದು ನಿಜವಾದ ಆನೆಯಲ್ಲ, ಆದರೆ ನಿಜವಾದ ಆನೆಯ ಗಾತ್ರದಲ್ಲೇ ಇರುವ ಯಾಂತ್ರಿಕ ಆನೆ. ಪ್ರಿಯಾಮಣಿ ದೇವಸ್ಥಾನಕ್ಕೆ ಆನೆ ನೀಡಿರುವುದು ಯಾವುದೇ ಹರಕೆ ತೀರಿಸಲು ಅಥವಾ ಧಾರ್ಮಿಕ ಕಾರಣಕ್ಕೆ ಅಲ್ಲ, ಬದಲಿಗೆ ಒಂದು ಘನವಾದ ಕಾರಣಕ್ಕೆ ಈ ಯಂತ್ರದ ಆನೆಯನ್ನು ನಟಿ ಪ್ರಿಯಾಮಣಿ ದೇವಾಲಯಕ್ಕೆ ದಾನ ನೀಡಿದ್ದಾರೆ. ಪ್ರಿಯಾಮಣಿ ನೀಡಿರುವ ಯಾಂತ್ರಿಕ ಆನೆಯ ಹೆಸರು ಮಹದೇವನ್. ಕೇರಳದ ಕೊಚ್ಚಿಯಲ್ಲಿನ ತ್ರಿಕಾಯಿಲ್ ಮಹದೇವನ್ ದೇವಾಲಯಕ್ಕೆ ಈ ಆನೆಯನ್ನು ಪ್ರಿಯಾಮಣಿ ನೀಡಿದ್ದಾರೆ.

ಕೊಚ್ಚಿಯ ತ್ರಿಕಾಯಿಲ್ ಮಹದೇವನ್ ದೇವಾಲಯವು, ಇನ್ನು ಮುಂದೆ ನಾವು ಜೀವಂತ ಆನೆಯನ್ನು ದೇವಾಲಯದ ಯಾವುದೇ ಧಾರ್ಮಿಕ ಅಥವಾ ಇನ್ಯಾವುದೇ ಕಾರ್ಯಗಳಿಗೆ ಬಳಸುವುದಿಲ್ಲ. ಜೀವಂತ ಆನೆಯನ್ನು ಹಾಗೆ ಧಾರ್ಮಿಕ ಕಾರಣಕ್ಕೆ, ಪ್ರದರ್ಶನದ ಕಾರಣಕ್ಕೆ ಬಳಸುವುದು ಕ್ರೂರತೆ ಎಂದು ನಿರ್ಧರಿಸಿದೆ. ಪೇಟಾ ಸಹ ದೇವಾಲಯದ ಈ ಕಾರ್ಯವನ್ನು ಮೆಚ್ಚಿಕೊಂಡಿದೆ. ದೇವಾಲಯದ ಈ ನಿರ್ಣಯದಿಂದ ಖುಷಿಯಾಗಿರುವ ಪ್ರಿಯಾಮಣಿ, ದೇವಾಲಯಕ್ಕೆ ಕೃತಕ ಆನೆಯನ್ನು ಉಡುಗೊರೆಯನ್ನಾಗಿ ನೀಡಿ ತಮ್ಮ ಅಭಿನಂದನೆಯನ್ನು ತಿಳಿಸಿದ್ದಾರೆ. ಪ್ರಿಯಾಮಣಿ ನೀಡಿರುವ ಕೃತಕ ಆನೆ, ನಿಜವಾದ ಆನೆಯ ಗಾತ್ರವನ್ನೇ ಹೊಂದಿದೆ. ಪ್ರಿಯಾಮಣಿ ನೀಡಿರುವ ಈ ಬೃಹತ್ ಆದ ಕೃತಕ ಆನೆ ದೇವಾಲಯದ ಮುಂದೆ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ:ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಅಭಿಮಾನಿಗಳ ಕಣ್ಮಣಿ ಪ್ರಿಯಾಮಣಿ

ಪ್ರಿಯಾಮಣಿ ನೀಡಿರುವ ಯಂತ್ರ ಚಾಲಿತ ಆನೆಗೆ ಚಂಡೆ-ಮದ್ದಳೆಗಳ ಮೂಲಕ ದೇವಾಲಯ ಆಡಳಿತ ವರ್ಗ ಸ್ವಾಗತ ನೀಡಿದ್ದಾರೆ. ‘ಆಧುನಿಕ ತಂತ್ರಜ್ಞಾನ ಬಳಸಿ ಪ್ರಾಣಿಗಳಿಗೆ ಹಾನಿಯಾಗದಂತೆ, ಅದರ ಜೊತೆಗೆ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ರಕ್ಷಿಸಿಕೊಳ್ಳಬಹುದು’ ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ. ಕೃತಕ ಆನೆಯನ್ನು ಸ್ವೀಕರಿಸಿರುವ ದೇವಾಲಯದ ಆಡಳಿತ ಮಂಡಳಿ ಮುಖ್ಯಸ್ಥ ‘ಮಾನವರಂತೆಯೇ ತಮ್ಮ ಕುಟುಂಬಗಳೊಂದಿಗೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಬಯಸುವ ದೇವರು ಸೃಷ್ಟಿಸಿದ ಎಲ್ಲಾ ಪ್ರಾಣಿಗಳಿಗೆ ಗೌರವಾರ್ಥವಾಗಿ ನಾವು ಪ್ರಿಯಾಮಣಿ ನೀಡಿರುವ ಕೃತಕ ಆನೆಯನ್ನು ಸ್ವೀಕರಿಸಿದ್ದೇವೆ’ ಎಂದಿದ್ದಾರೆ.

ಕರ್ನಾಟಕ ಮೂಲದ ನಟಿ ಪ್ರಿಯಾಮಣಿ ಪ್ರಾಣಿ ಪ್ರೇಮಿ. ಕೆಲವು ಪ್ರಾಣಿ ದಯಾ ಸಂಘದ ಕಾರ್ಯಗಳಲ್ಲಿ ಪ್ರಿಯಾಮಣಿ ತೊಡಗಿಕೊಂಡಿದ್ದಾರೆ. ಇದೇ ಕಾರಣಕ್ಕೆ, ಜೀವಂತ ಆನೆಯನ್ನು ಬಳಸಿದಿರುವ ಕೇರಳದ ತ್ರಿಕಾಯಿಲ್ ಮಹದೇವನ್ ದೇವಾಲಯದ ನಿರ್ಣಯವನ್ನು ಪ್ರಿಯಾಮಣಿ ಸ್ವಾಗತಿಸಿದ್ದಾರೆ. ಕಳೆದ ವರ್ಷ ತ್ರಿಶೂರ್​ನ ಕೃಷ್ಣ ದೇವಾಲಯವು ತಾವು ಇನ್ನು ಮುಂದೆ ಆನೆ ಅಥವಾ ಯಾವುದೇ ಪ್ರಾಣಿಗಳನ್ನು ದೇವಾಲಯದ ಧಾರ್ಮಿಕ ಆಚರಣೆ, ಹಬ್ಬಗಳಲ್ಲಿ ಬಳಸದೇ ಇರುವ ನಿರ್ಣಯ ತಳೆದು, ಯಂತ್ರ ಚಾಲಿತ ಆನೆಯನ್ನು ಖರೀದಿಸಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ