ನಿರ್ಮಲಾ ಸೀತಾರಾಮನ್ ಉಡುಪಿಯಲ್ಲಿ ಸ್ಥಾಪಿಸಿದ IIGJ ಸಂಸ್ಥೆಯಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯದ 30 ವಿದ್ಯಾರ್ಥಿಗಳಿಗೆ ತರಬೇತಿ
ದುವರೆಗೆ ಐಐಜಿಜೆಯಲ್ಲಿ 360 ಮಂದಿ ತರಭೇತಿ ಪಡೆದಿದ್ದಾರೆ. ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ನಿಧಿಯಡಿ, ಐಐಜಿಜೆ ಸಂಸ್ಥೆಯನ್ನು ಜೇಮ್ಸ್ ಆಂಡ್ ಜ್ಯುವೆಲ್ಲರಿ ರಫ್ತು ಪ್ರಮೋಷನ್ ಕೌನ್ಸಿಲ್ (ಜಿಜೆಇಪಿಸಿ) ಮತ್ತು ಅಹಮದಾಬಾದ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‍ಐಡಿ) ಬೆಂಬಲದೊಂದಿಗೆ 2017 ರಲ್ಲಿ ಉಡುಪಿಯಲ್ಲಿ ಇದರ ಸ್ಥಾಪನೆ ಮಾಡಲಾಗಿದೆ.
ಬೆಂಗಳೂರು,ನ.09: ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಸ್ಥಾಪಿಸಿದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂಡ್ ಜ್ಯುವೆಲ್ಲರಿ (IIGJ) ಸಂಸ್ಥೆಯಲ್ಲಿ ರಾಜ್ಯದ ಉಡುಪಿ(Udupi) ಜಿಲ್ಲೆಯ ಬನ್ನಂಜೆ ಮತ್ತು ದೊಡ್ಡಣಗುಡ್ಡೆಯ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಸೇರಿದ ಬರೊಬ್ಬರಿ 30 ವಿದ್ಯಾರ್ಥಿನಿಯರು ಈ ಒಂದು ವಿಶೇಷ ಕಾರ್ಯಕ್ರಮದಲ್ಲಿ ಆಭರಣ ತಯಾರಿಕೆ ಮತ್ತು ವಿನ್ಯಾಸ ತಾಂತ್ರಿಕತೆ ಸಂಬಂಧವಾಗಿ ಉಚಿತ ತರಬೇತಿ ಪಡೆಯುತ್ತಿದ್ದಾರೆ ಎಂದು ಅವರು ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಯಾಲಯ ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಹೌದು, ಈ 30 ವಿದ್ಯಾರ್ಥಿನಿಯರು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಬನ್ನಂಜೆ ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ITDP) ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ದೊಡ್ಡಣಗುಡ್ಡೆಯಲ್ಲಿ ಓದುತ್ತಿದ್ದಾರೆ.
ಇದನ್ನೂಓದಿ:ಕಲಬುರಗಿ: ಪ್ರತಿ ವರ್ಷ ಸುಮಾರು 2 ಸಾವಿರ ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ತರಭೇತಿ; ಸಿಎಂ ಸಿದ್ದರಾಮಯ್ಯ
ವಿಶೇಷ ಕಾರ್ಯಕ್ರಮದಡಿ ಆಭರಣ ತಯಾರಿಕೆ ಮತ್ತು ವಿನ್ಯಾಸ ತಾಂತ್ರಿಕತೆ
ಇನ್ನು ಐಐಜಿಜೆ ಸಂಸ್ಥೆಯು ತನ್ನ ವಿಶೇಷ ಕಾರ್ಯಕ್ರಮದಡಿ ಆಭರಣ ತಯಾರಿಕೆ ಮತ್ತು ವಿನ್ಯಾಸ ತಾಂತ್ರಿಕತೆಯನ್ನು ಬೋಧಿಸುತ್ತದೆ. ಚಿನ್ನದ ಆಭರಣ ತಯಾರಿಕೆಯಲ್ಲಿ ಈ ಮಹಿಳೆಯರಿಗೆ ಚಿನ್ನದ ತಂತಿ (ವೈರ್) ಸಿದ್ಧಪಡಿಸುವ ಕೆಲಸ, ಬೆಸುಗೆ ಹಾಕುವುದು, ಅಂತಿಮ ವಿನ್ಯಾಸ ಕೊಡುವ ‘ಫೈಲಿಂಗ್ ವರ್ಕ್’, ಪಾಲಿಶ್ ಮಾಡುವುದು ಮತ್ತು ಆಭರಣವಾಗಿ ಸಿದ್ಧಪಡಿಸುವ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತದೆ. ರತ್ನ ಮತ್ತು ಆಭರಣ ಉದ್ಯಮದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಅನುವು ಮಾಡಿಕೊಡಲು ಈ ಕೌಶಲ್ಯವು ಅತ್ಯಗತ್ಯವಾಗಿದೆ.
360 ಮಂದಿಗೆ ಐಐಜಿಜೆಯಲ್ಲಿ ತರಬೇತಿ
ಇದುವರೆಗೆ ಐಐಜಿಜೆಯಲ್ಲಿ 360 ಮಂದಿ ತರಭೇತಿ ಪಡೆದಿದ್ದಾರೆ. ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ನಿಧಿಯಡಿ, ಐಐಜಿಜೆ ಸಂಸ್ಥೆಯನ್ನು ಜೇಮ್ಸ್ ಆಂಡ್ ಜ್ಯುವೆಲ್ಲರಿ ರಫ್ತು ಪ್ರಮೋಷನ್ ಕೌನ್ಸಿಲ್ (ಜಿಜೆಇಪಿಸಿ) ಮತ್ತು ಅಹಮದಾಬಾದ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‍ಐಡಿ) ಬೆಂಬಲದೊಂದಿಗೆ 2017 ರಲ್ಲಿ ಉಡುಪಿಯಲ್ಲಿ ಇದರ ಸ್ಥಾಪನೆ ಮಾಡಲಾಗಿದೆ. ಕರ್ನಾಟಕ ರಾಜ್ಯ, ಅದರಲ್ಲೂ ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ ಯುವಜನರು ಮತ್ತು ಮಹಿಳೆಯರಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವ ಪ್ರಮುಖ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ ಎಂದು ಅಭಿಪ್ರಾಯ ಪಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Thu, 9 November 23