ಉಡುಪಿ: ಕಿಡ್ನಾಪ್ ಆಗಿದೆ ಎಂದು ಪೋಷಕರನ್ನೇ ಯಾಮಾರಿಸಿದ್ದ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನ

ಆನೇಕಲ್ ತಾಲೂಕಿನ ಸರ್ಜಾಪುರ ವ್ಯಾಪ್ತಿಯ ದೊಮ್ಮಸಂದ್ರದಲ್ಲಿ ಕೊಟ್ಟ ಸಾಲ ವಾಪಸ್ ನೀಡದಿದ್ದಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವಂತಹ ಘಟನೆ ನಡೆದಿದೆ.

ಉಡುಪಿ: ಕಿಡ್ನಾಪ್ ಆಗಿದೆ ಎಂದು ಪೋಷಕರನ್ನೇ ಯಾಮಾರಿಸಿದ್ದ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನ
ವರುಣ್ ನಾಯಕ್
Edited By:

Updated on: Jun 29, 2022 | 11:32 AM

ಉಡುಪಿ: ಕಿಡ್ನಾಪ್ ಆಗಿದೆ ಎಂದು ಪೋಷಕರನ್ನೇ ಯಾಮಾರಿಸಿದ್ದ ಯುವಕ ಅಂದರ್ ಆಗಿರುವಂತಹ ಘಟನೆ ನಡೆದಿದೆ. ವರುಣ್ ನಾಯಕ್ ವಂಚಕ ಯುವಕ. ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಅಂಬಾಗಿಲು ನಿವಾಸಿ. ತನ್ನನ್ನು ಅಪಹರಿದ್ದಾರೆ ಐದು ಲಕ್ಷ ಕೊಡಿ ಎಂದು ಅಮ್ಮನಿಗೆ ಕರೆ ಮಾಡಿದ್ದ. ಗಾಬರಿಗೊಂಡ ಪೋಷಕರು ನಗರದ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಅಪಹರಣ ಕೇಸ್ ಪತ್ತೆಹಚ್ಚಲು ಪೊಲೀಸರ ತಂಡ ರಚನೆ ಮಾಡಿದ್ದು, ಲೊಕೇಶನ್ ಪತ್ತೆ ಹಚ್ಚಿದಾಗ ಯುವಕ ಗೋವಾದಲ್ಲಿ ಇರುವುದು ಬೆಳಕಿಗೆ ಬಂದಿದೆ. ಗೋವಾಗೆ ತೆರಳಿದ್ದ ಪೊಲೀಸರ ತಂಡಕ್ಕೆ ಶಾಕ್​ ಆಗಿದ್ದು, ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ  ಯುವಕ ನಿರತನಾಗಿದ್ದ. ಗೋವಾದ ಕ್ಯಾಸಿನೋದಲ್ಲಿ ಆಟವಾಡುತ್ತಿದ್ದ. ಪೋಷಕರಲ್ಲಿದ್ದ ಹಣ ದೋಚಲು ಸಂಚು ಮಾಡಿದ್ದಾಗಿ  ಯುವಕ ಒಪ್ಪಿಕೊಂಡಿದ್ದು, ಪೋಷಕರ ಹಣ ಎಗರಿಸುವ ಉದ್ದೇಶ ಹಾಗೂ ಪೊಲೀಸರ ಸಮಯ ವ್ಯರ್ಥ ಮಾಡಿದ್ದಕ್ಕೆ ಕೇಸ್ ಹಾಕಲಾಗಿದೆ. ವಂಚಕ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರೀತಿಸಿ ವಿವಾಹವಾಗಿದ್ದ ಯುವತಿ ಕಿಡ್ನ್ಯಾಪ್​ ಪ್ರಕರಣಕ್ಕೆ ಟ್ವಿಸ್ಟ್: ಐವರ ವಿರುದ್ಧ ವಾರಂಟ್​ ಜಾರಿ

ಹುಬ್ಬಳ್ಳಿ: ಪ್ರೀತಿಸಿ ವಿವಾಹವಾಗಿದ್ದ ಯುವತಿ ಕಿಡ್ನ್ಯಾಪ್​ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾರ್ಪೊರೇಟರ್ ಸೇರಿದಂತೆ ಐವರಿಗೆ ಕೋರ್ಟ್ ವಾರಂಟ್ ಜಾರಿ ಮಾಡಲಾಗಿದೆ. FIR ದಾಖಲಾದರೂ ಪೊಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲ. ಕಾರ್ಪೊರೇಟರ್​ನನ್ನು ವಶಕ್ಕೆ ಪಡೆದು ವಿಚಾರಣೆ ಸಹ ಮಾಡಿರಲಿಲ್ಲ. ಇದೇ ಕಾರಣಕ್ಕೆ ನ್ಯಾಯಕ್ಕಾಗಿ ನಿಖಿಲ್ ದಾಂಡೇಲಿ ಹಾಗೂ ಸಹನಾ ದಂಪತಿ ಕೋರ್ಟ್ ಮೆಟ್ಟಿಲೇರಿದ್ದರು. ಹು-ಧಾ ಮಹಾನನಗರ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ಯುವತಿ ತಂದೆ ಶಿವು ಹಿರೆಕೇರೂರ, ರಮೇಶ್ ಪಾವಡೆ, ಸುನಿಲ್, ರಮೇಶ್ ಹೋಬಳೆ ಎಂಬುವರಿಗೆ ಹುಬ್ಬಳ್ಳಿ ನ್ಯಾಯಾಲಯದಿಂದ ಐವರಿಗೂ ವಾರಂಟ್ ಜಾರಿ ಮಾಡಲಾಗಿದೆ.

ಈಜಲು ಹೋಗಿ ವ್ಯಕ್ತಿ ಸಾವು

ತುಮಕೂರು: ಈಜಲು ಹೋಗಿ ವ್ಯಕ್ತಿ ಸಾವನ್ನಪದಪಿರುವಂತಹ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದೆ. ಯೋಗಾನಂದ 45 ಮೃತ ದುರ್ದೈವಿ. ಇಂದು ಬೆಳಿಗ್ಗೆಯೇ ಈಜಲು ತೆರಳಿದ್ದ ಎನ್ನಲಾಗಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಸಾಲ ವಾಪಸ್ ನೀಡದ್ದಕ್ಕೆ ಮಹಿಳೆ ಮೇಲೆ ದೌರ್ಜನ್ಯ

ಬೆಂಗಳೂರು: ಆನೇಕಲ್ ತಾಲೂಕಿನ ಸರ್ಜಾಪುರ ವ್ಯಾಪ್ತಿಯ ದೊಮ್ಮಸಂದ್ರದಲ್ಲಿ ಕೊಟ್ಟ ಸಾಲ ವಾಪಸ್ ನೀಡದಿದ್ದಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವಂತಹ ಘಟನೆ ನಡೆದಿದೆ. ನೆರಿಗಾ ಗ್ರಾಮದ ಶಾಂತಿಪ್ರಿಯ ಹಾಗೂ ಭಾನುಪ್ರಿಯ ಎಂಬುವರ ಬಟ್ಟೆ ಬಿಚ್ಚಿ ರಾಮಕೃಷ್ಣ ರೆಡ್ಡಿ ಇಂದ್ರಮ್ಮ ಹಾಗೂ ಸುನೀಲ್ ಕುಮಾರ್ ಎಂಬುವವರಿಂದ ಹಲ್ಲೆ ಆರೋಪ ಮಾಡಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವರ್ಷದ ಹಿಂದೆ ಮಹಿಳೆಯರು 1 ಲಕ್ಷ ಸಾಲ ಪಡೆದಿದ್ದರು. ಸಕಾಲಕ್ಕೆ ಬಡ್ಡಿ ಕಟ್ಟುತ್ತಾ ಬಂದಿದ್ರು. ಇತ್ತೀಚೆಗೆ ಅಸಲು ನೀಡುವಂತೆ ಒತ್ತಡ ಹೇರಿ ಹಲ್ಲೆ ಆರೋಪ ಮಾಡಲಾಗಿದೆ. ಪ್ರಕರಣ ಕುರಿತು ಸರ್ಜಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Published On - 11:31 am, Wed, 29 June 22