ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಯತ್ನಿಸಿದವರ ಹೆಡೆಮುರಿ ಕಟ್ಟಿದ ಪೊಲೀಸರು

ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ವಿಡಿಯೋ ಶೇರ್​ ಮಾಡಿದ ಆರೋಪ ಹಿನ್ನೆಲೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಮುದಾಯಗಳ ನಡುವೆ ದ್ವೇಷ ಹರಡುವ ಆರೋಪದ ಮೇಲೆ ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನ ವಿಧಿಸಿದೆ.

ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಯತ್ನಿಸಿದವರ ಹೆಡೆಮುರಿ ಕಟ್ಟಿದ ಪೊಲೀಸರು
ಬಂಧಿತರು
Image Credit source: tv9 kannada
Edited By:

Updated on: Jan 30, 2026 | 4:52 PM

ಉಡುಪಿ, ಜನವರಿ 30: ಸೋಶಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಬಂದದನ್ನು ಪೋಸ್ಟ್ ಮಾಡುವವರು ಅಥವಾ ಬೇರೆಯವರಿಗೆ ಶೇರ್​ ಮಾಡುವವರು ಈ ಸ್ಟೋರಿಯನ್ನ ಒಮ್ಮೆ ಓದಿ. ಸಾಮಾಜಿಕ ಜಾಲತಾಣದ ಮೂಲಕ ದ್ವೇಷ ಹರಡಿದ ಆರೋಪ ಹಿನ್ನೆಲೆ ಉಡುಪಿ (Udupi) ಜಿಲ್ಲೆಯ ಬ್ರಹ್ಮಾವರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶಿಕ್ಷಕರ ಸಹಕಾರ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಕುಮಾರಶೆಟ್ಟಿ ಮತ್ತು ಉದ್ಯಮಿ ಕೆ.ನಾಗರಾಜ್ ಬಂಧಿತರು (Arrested). ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಟ್ಸಾಪ್ ಗ್ರೂಪ್​ನಲ್ಲಿ ವಿಡಿಯೋ ಶೇರ್​​

ಬಂಧಿತರು ವಾಟ್ಸಾಪ್ ಗ್ರೂಪ್​ನಲ್ಲಿ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ವಿಡಿಯೋ ಶೇರ್​​ ಮಾಡಿದ್ದರು. ಹಾಗಾಗಿ ಇಬ್ಬರನ್ನು ಬಂಧಿಸಿದ್ದ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದರು. ಸದ್ಯ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕಳ್ಳರ ಕರಾಮತ್ತು

ಕಾಪು ಪಡುಬಿದ್ರಿ ಪರಿಸರದಲ್ಲಿ ನಿರಂತರ ಕಳ್ಳತನ ನಡೆಯುತ್ತಿದ್ದು, ಕಳ್ಳರು ಇಂದು ಮತ್ತೊಂದು ಮನೆ ದೋಚಿದ್ದಾರೆ. ಹಿರಿಯ ಸಹಕಾರಿ ಧುರೀಣ, ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬುಧವಾರದಂದು ಪಡುಬಿದ್ರಿಯ ಮನೆ ಒಂದರಿಂದ ಚಿನ್ನ ದೋಚಿದ್ದ ಕಳ್ಳರು, ಕಾಪು ದಿವಾಕರ ಶೆಟ್ಟಿ ಮನೆಗೆ ಕನ್ನ ಹಾಕಿದ್ದಾರೆ.

ಇದನ್ನೂ ಓದಿ: ಉಡುಪಿ ಡಿಸಿ, ಉಸ್ತುವಾರಿ ಸಚಿವರಿಂದಲೇ ಜಿಲ್ಲಾಡಳಿತದ ಸೂಚನೆ ಉಲ್ಲಂಘನೆ? ಆಗಿದ್ದೇನು?

ಮನೆ ಮಾಲಕರು ಮುಂಬೈಗೆ ಹೋಗಿದ್ದ ವೇಳೆ ಕೃತ್ಯವೆಸಗಲಾಗಿದೆ. ಧಾರ್ಮಿಕ ಕಾರ್ಯ ಪೂರೈಸಿ ಬಂದಿದ್ದ ಕಾವಲುಗಾರ ಗಾಡ ನಿದ್ರೆಗೆ ಜಾರಿದ್ದ. ಆತನ ಅರಿವಿಗೆ ಬಾರದಂತೆ ಆತ ಮಲಗಿದ್ದಾಗಲೇ ಎದುರು ಬಾಗಿಲು ಒಡೆದು ಮನೆಗೆ ನುಗ್ಗಿದ್ದರು. ಜೊತೆಗೆ ಕಾವಲು ಕಾಯುತ್ತಿದ್ದ ವ್ಯಕ್ತಿಯ ಮೊಬೈಲ್ ದೋಚಿದ ಕಳ್ಳರು, ಕದ್ದ ಮೊಬೈಲ್​ನ್ನು ದೂರದ ಮಸೀದಿ ಬಳಿ ಎಸೆದು ಹೋಗಿದ್ದರು. ಇನ್ನು ಸಿಸಿಟಿವಿಯನ್ನ ಬೇರೆಡೆಗೆ ತಿರುಗಿಸಿ ಡಿವಿಆರ್ ಕದಿದ್ದಾರೆ.

ಇದನ್ನೂ ಓದಿ: ಉಡುಪಿ: ಅವಮಾನವಾದ ನಿವೃತ್ತ ಯೋಧನಿಗೆ ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ, ಕೃತಜ್ಞತೆ ವ್ಯಕ್ತಪಡಿಸಿ ಯೋಧ

ಸ್ಥಳಕ್ಕೆ ಕಾಪು ಪೊಲೀಸರ ಆಗಮಿಸಿ ಶ್ವಾನದಳದ ಮೂಲಕ ಪರಿಶೀಲನೆ ಮಾಡಿದ್ದಾರೆ. ಸದ್ಯ ಮುಂಬೈನಿಂದ ಮನೆಮಾಲಕರು ವಾಪಸ್ ಆಗುವುದನ್ನು ಕಾಯುತ್ತಿರುವ ಪೊಲೀಸರು, ಅವರು ಬಂದ ಮೇಲೆ ಕಳ್ಳತನದ ಪ್ರಮಾಣ ತಿಳಿಯಲಿದ್ದಾರೆ. ವರ್ಷದ ಹಿಂದೆ ಉದ್ಯಾವರದಲ್ಲೂ ಕೋಟ್ಯಂತರ ರೂ ಮೌಲ್ಯದ ಸ್ವತ್ತು ಕಳ್ಳತನವಾಗಿತ್ತು. ಎರಡು ದಿನದ ಹಿಂದಷ್ಟೇ ಪಡುಬಿದ್ರಿಯಲ್ಲಿ ಕೋಟ್ಯಂತರ ರೂ ಮೌಲ್ಯದ ಚಿನ್ನಕಳ್ಳತನವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:49 pm, Fri, 30 January 26