ಉಡುಪಿ, ಜ.14: ಲೀಸ್ಗೆ ಕೊಟ್ಟ ಹೋಟೆಲ್ನಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಹೋಟೆಲ್ (hotel) ಲೀಸ್ ವಾಪಸ್ ಪಡೆಯಲು ಹೋದ ಮಾಲೀಕಿ ಮೇಲೆಯೇ ದೌರ್ಜನ್ಯ (Assault) ಎಸಗಿರುವ ಘಟನೆ ನಡೆದಿದೆ. ಉಡುಪಿ (Udupi) ನಗರದ KSRTC ಬಸ್ ನಿಲ್ದಾಣ ಬಳಿ ಇರುವ ಶಾಂಭವಿ ಫಾರ್ಚೂನ್ ಹೊಟೇಲ್ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಮಾಹಿತಿ ತಿಳಿಯುತ್ತಿದ್ದಂತೆ ಮಾಲೀಕಿ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದು ಮಾಲೀಕಿ ಮೇಲೆಯೇ ದೌಜನ್ಯ ಎಸಗಲಾಗಿದೆ.
2021ರಲ್ಲಿ ದಿನೇಶ್ ಶೆಟ್ಟಿ ಎಂಬುವರಿಗೆ ಮಮತಾ ಶೆಟ್ಟಿ ಅವರು 10 ವರ್ಷಕ್ಕೆ ಹೋಟೆಲ್ ಲೀಸ್ಗೆ ನೀಡಿದ್ದರು. ಅಗ್ರಿಮೆಂಟ್ ಕೂಡ ಮಾಡಲಾಗಿತ್ತು. ಆದರೆ ದಿನೇಶ್ ಶೆಟ್ಟಿ ಹೋಟೆಲ್ ಕಟ್ಟಡವನ್ನು ದುರುಪಯೋಗ ಪಡಿಸಿಕೊಂಡಿದ್ದ. ಹೋಟೆಲ್ ರೂಂಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ಕಳೆದ ವರ್ಷ ವೇಶ್ಯಾವಾಟಿಕೆ ಹಿನ್ನೆಲೆ ಪೊಲೀಸ್ ದಾಳಿ ನಡೆದಿತ್ತು. ಹೀಗಾಗಿ ಡಿಸೆಂಬರ್ 22 ರಂದು ಮಮತಾ ಶೆಟ್ಟಿ ಅವರು ಹೋಟೆಲ್ಗೆ ಹೋಗಿ ಲೀಸ್ ಅಗ್ರಿಮೆಂಟ್ ಕ್ಯಾನ್ಸಲ್ ಮಾಡಿ ಹೋಟೆಲ್ ವಾಪಸ್ ನೀಡುವಂತೆ ದಿನೇಶ್ ಶೆಟ್ಟಿಗೆ ಸೂಚಿಸಿದ್ದರು. ಇದರಿಂದ ಕೋಪಗೊಂಡ ದಿನೇಶ್ ಶೆಟ್ಟಿ ಹೋಟಲ್ನಲ್ಲೇ ಹಲ್ಲೆ ಮಾಡಿದ್ದಾನೆ.
ಮಗನೊಂದಿಗೆ ತೆರಳಿದ್ದ ಮಮತಾ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾನೆ. ಹೋಟೆಲ್ನಲ್ಲಿರುವ ಸಿಸಿಟಿವಿಯಲ್ಲಿಯೂ ಹಲ್ಲೆ ದೃಶ್ಯ ಸೆರೆಯಾಗಿದೆ. ದಿನೇಶ್ ಶೆಟ್ಟಿ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್ ವಾಪಸ್ ಕೊಡಿಸುವಂತೆ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಎಫ್ಐಆರ್ ಆದ್ರೂ ಸೂಕ್ತ ತನಿಖೆ ನಡೆದಿಲ್ಲ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಪಾರ್ಕಿಂಗ್ ವಿಚಾರಕ್ಕೆ ಸಣ್ಣಪುಟ್ಟ ಗಲಾಟೆಗಳಾಗೋದು ಸಹಜ. ಆದ್ರೆ, ಈ ಗ್ರಾಮದಲ್ಲಿ ದೊಡ್ಡ ಮಾರಾಮಾರಿಯೇ ನಡೆದು ಹೋಗಿದೆ. 40 ರಿಂದ 50 ಜನರ ಗುಂಪುಗಳ ಮಧ್ಯೆ ಈ ಗಲಾಟೆಯಾಗಿದೆ. ಟ್ರ್ಯಾಕ್ಟರ್ ನಿಲ್ಲಿಸೋ ವಿಚಾರಕ್ಕೆ ಮೊದಲು ಇಬ್ಬರ ಮಧ್ಯೆ ಗಲಾಟೆಯಾಗಿದೆ. ನಂತ್ರ ಎರಡು ಕಡೆಯವರು ಕಟ್ಟಿಗೆ ಹಿಡಿದು ಹೊಡೆದಾಡಿದ್ದಾರೆ. ಈ ಘಟನೆ ನಡೆದಿರೋದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದಲ್ಲಿ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾರಾಮಾರಿಯಲ್ಲಿ ನಾಲ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:47 pm, Sun, 14 January 24