Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟೀಷರ ಕಾಲದ ಶ್ರೀರಾಮನ ಚಿತ್ರವುಳ್ಳ ಕಾಯಿನ್ ಗಳು ಉಡುಪಿಯಲ್ಲಿ ಇದೀಗ ಗಮನ ಸೆಳೆಯುತ್ತಿದೆ!

ಬ್ರಿಟೀಷರ ಕಾಲದ ಶ್ರೀರಾಮನ ಚಿತ್ರವುಳ್ಳ ಕಾಯಿನ್ ಗಳು ಉಡುಪಿಯಲ್ಲಿ ಇದೀಗ ಗಮನ ಸೆಳೆಯುತ್ತಿದೆ!

ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on: Jan 13, 2024 | 1:24 PM

ರಾಮನ ಚಿತ್ರವುಳ್ಳ ಕಾಯಿನ್ ಗಳು ಇದೀಗ ಗಮನ ಸೆಳೆಯುತ್ತಿವೆ. ಜನರು ತಮ್ಮ ಸಂಗ್ರಹದಲ್ಲಿರುವ ರಾಮನ ಚಿತ್ರದ ಕಾಯಿನ್ ಗಳನ್ನು ಕಂಡು ರೋಮಾಂಚನಗೊಳ್ಳುತ್ತಿದ್ದಾರೆ. ಕ್ರಿಸ್ತ ಶಕ 1818 ಬ್ರಿಟೀಷ್ ಸರಕಾರ ನಮ್ಮ ಭಾರತ ದೇಶದಲ್ಲಿ ಆಡಳಿತ ನಡೆಸಿದ ಅವಧಿಯಲ್ಲಿ ಯು.ಕೆ.ಎಲ್ - ಒನ್ ಆಣೆ - ಈಸ್ಟ್ ಇಂಡಿಯಾ ಕಂಪನಿ ಎಂಬಂತೆ ಇಂಗ್ಲೀಷ್ ಅಕ್ಷರದಲ್ಲಿ ನಮೂದಿಸಲಾಗಿದೆ.

ರಾಮನ ಚಿತ್ರವುಳ್ಳ ಕಾಯಿನ್ ಗಳು ಇದೀಗ ಗಮನ ಸೆಳೆಯುತ್ತಿವೆ. ಜನರು ತಮ್ಮ ಸಂಗ್ರಹದಲ್ಲಿರುವ ರಾಮನ ಚಿತ್ರದ ಕಾಯಿನ್ ಗಳನ್ನು ಕಂಡು ರೋಮಾಂಚನಗೊಳ್ಳುತ್ತಿದ್ದಾರೆ. ಕ್ರಿಸ್ತ ಶಕ 1818 ಬ್ರಿಟೀಷ್ ಸರಕಾರ ನಮ್ಮ ಭಾರತ ದೇಶದಲ್ಲಿ ಆಡಳಿತ ನಡೆಸಿದ ಅವಧಿಯಲ್ಲಿ ಯು.ಕೆ.ಎಲ್ – ಒನ್ ಆಣೆ – ಈಸ್ಟ್ ಇಂಡಿಯಾ ಕಂಪನಿ ಎಂಬಂತೆ ಇಂಗ್ಲೀಷ್ ಅಕ್ಷರದಲ್ಲಿ ನಮೂದಿಸಲಾಗಿದೆ. ಮತ್ತು ಎರಡು ಬದಿ ಜೋಳದ ತೆನೆ ಇರುವ ಸುಮಾರು ಏಳು ನಾಣ್ಯಗಳು ಉಡುಪಿಯ ವ್ಯಕ್ತಿಯೊಬ್ಬರ ಸಂಗ್ರಹದಲ್ಲಿದೆ. ಸಮಾಜ ಸೇವಕ ಕಿನ್ನಿಮೂಲ್ಕಿಯ ಕೃಷ್ಣಮೂರ್ತಿ ಆಚಾರ್ಯರು ಸಂಗ್ರಹಿಸಿದ ಈ ನಾಣ್ಯಗಳು ವಿಶೇಷ ಮಹತ್ವ ಪಡೆದು ಕೊಂಡಿವೆ‌.

ಈ ನಾಣ್ಯದ ಇನ್ನೊಂದು ಮಗ್ಗುಲ್ಲಲ್ಲಿ ಪ್ರಭು ಶ್ರೀರಾಮಚಂದ್ರ, ಸೀತೆ, ಲಕ್ಷ್ಮಣ ಮತ್ತು ರಾಮ ಭಕ್ತ ಹನುಮನ ಚಿತ್ರವಿದೆ. ಎಲ್ಲಾ ಕುಳಿತುಕೊಂಡಿರುವ ಭಂಗಿಯಲ್ಲಿದ್ದು ಮೇಲ್ಗಡೆ ಮಂಟಪದ ಉಬ್ಬು ಚಿತ್ರಗಳು ಈ ನಾಣ್ಯದಲ್ಲಿ ಕಂಡುಬರುತ್ತವೆ. ಇವರ ಬಳಿ ಸುಮಾರು 55 ದೇಶದ 5000 ಸಾವಿರ ನಾಣ್ಯಗಳು ಸಂಗ್ರಹದಲ್ಲಿದೆ. ಭರತಖಂಡವನ್ನು ಆಳಿದ ಹಳೆಯ ಕಾಲದ ರಾಜ ವಂಶಸ್ಥರ ಆಡಳಿತ ಅವಧಿಯಲ್ಲಿ ಚಲಾವಣೆಯಲ್ಲಿದ್ದ 500ಕ್ಕೂ ಹೆಚ್ಚು ನಾಣ್ಯಗಳು ಇವರ ಬಳಿ ಇವೆ. ರಾಮಟಂಕಾ ನಾಣ್ಯಗಳು ಬಹುಬೇಡಿಕೆಯ ನಾಣ್ಯಗಳಾಗಿದ್ದು, ಈ ನಾಣ್ಯಗಳಲ್ಲಿ ಅಯಸ್ಕಾಂತದ ಗುಣಗಳಿವೆ. ಅದಲ್ಲದೆ ಇವರ ಸಂಗ್ರಹದಲ್ಲಿ ಹಳೆಯ ಶಂಖ, ಗ್ರಾಮಾ ಫೋನ್, ಹಳೆಯ ರೇಡಿಯೋಗಳು ಹಳೆಯ ಟೆಲಿಫೋನ್ ಗಳು ಇವೆ. ಇತರ ದೇಶಗಳ ಚಲಾವಣೆಯಲ್ಲಿಇರದ ಹಳೆಯ ಕಾಲದ ನೋಟುಗಳು ಸಹ ಇವರ ಬಳಿ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ