Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ನಾಯಕರು ಸ್ವಾಮಿ ವಿವೇಕಾನಂದರ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ನಾವು ಸದ್ಬಳಕೆ ಮಾಡಿಕೊಂಡಿದ್ದೇವೆ: ಮಧು ಬಂಗಾರಪ್ಪ

ಬಿಜೆಪಿ ನಾಯಕರು ಸ್ವಾಮಿ ವಿವೇಕಾನಂದರ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ನಾವು ಸದ್ಬಳಕೆ ಮಾಡಿಕೊಂಡಿದ್ದೇವೆ: ಮಧು ಬಂಗಾರಪ್ಪ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 13, 2024 | 2:04 PM

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಒಂದೇಸಮನೆ ರಾಜ್ಯ ಬಿಜೆಪಿ ನಾಯಕರು ಟೀಕಿಸುತ್ತಿರುವಂತೆಯೇ ಎಲ್ಲ 5 ಗ್ಯಾರಂಟಿಗಳನ್ನು ತಮ್ಮ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದ ಸಚಿವ ಮಧು ಬಂಗಾರಪ್ಪ ಇಂಥ ಒಂದೇ ಒಂದು ಯೋಜನೆ ರೂಪಿಸಿ ಜಾರಿಗೊಳಿಸುವ ಯೋಗ್ಯತೆ ಆ ಪಕ್ಷಕ್ಕೆ ಅಧಿಕಾರದಲ್ಲಿದ್ದಾಗ ಇರಲಿಲ್ಲ ಎಂದು ಹೇಳಿದರು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸದಲ್ಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ಧತೆಗಳನ್ನು ಶುರುಮಾಡಿಕೊಂಡಿದ್ದು, ಅದರ ಭಾಗವಾಗೇ ಗುರುವಾರದಂದು ರಾಜ್ಯದ ಎಲ್ಲ ಸಚಿವರನ್ನು ಎಐಸಿಸಿ ಸಭೆಗೆ (AICC meeting) ಕರೆದಿದ್ದು ಎಂದು ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಎಲ್ಲ್ಲ ಸಚಿವರಿಗೆ ಜವಾಬ್ದಾರಿಗಳನ್ನು ವಹಿಸಿಕೊಡಲಾಗಿದೆ ಮತ್ತು ತನಗೆ ಕರಾವಳಿ ಪ್ರದೇಶದಲ್ಲಿ ಕೆಲಸ ಮಾಡಲು ಹೇಳಿದ್ದಾರೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸುವ ಸಮರ್ಥ ಮತ್ತು ಯೋಗ್ಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ನೀಡಿರವುದಾಗಿ ಹೇಳಿದ ಸಚಿವ ನಿನ್ನೆ ಶಿವಮೊಗ್ಗದಲ್ಲಿ ಅದ್ದೂರಿಯಾಗಿ ನಡೆದ ಯವನಿಧಿ ಗ್ಯಾರಂಟಿ ಯೋಜನೆ (Yuva Nidhi Guarantee scheme) ಕಾರ್ಯಕ್ರಮದ ಬಗ್ಗೆಯೂ ಮಾತಾಡಿದರು.

ಸ್ವಾಮಿ ವಿವೇಕಾನಂದರ ಜನ್ಮ ವಾರ್ಷಿಕೋತ್ಸವ ಅಂಗವಾಗಿ ರಾಷ್ಟ್ರೀಯ ಯುವದಿನವನ್ನು ರಾಷ್ಟ್ರದೆಲ್ಲೆಡೆ ಆಚರಿಸಲಾಗುತ್ತದೆ, ನಾಡಿನ ಯುವಕರ ಬಗ್ಗೆ ಕಾಳಜಿಯಿರುವ ತಮ್ಮ ಸರ್ಕಾರ ಈ ಮಹತ್ವದ ದಿನದಂದು ಯುವನಿಧಿ ಸ್ಕೀಮ್ ಜಾರಿಗೆ ತಂದಿದೆ. ನಾವು ಜನರಿಗೆ ಭರವಸೆ ನೀಡಿದ್ದ ಎಲ್ಲ ಗ್ಯಾರಂಟಿಗಳು ಈಗ ಜಾರಿಗೊಂಡಂತಾಗಿದ್ದು ಎಲ್ಲ ಯಶಸ್ವೀಯಾಗಿ ನಡೆಯುತ್ತಿವೆ ಎಂದು ಮಧು ಬಂಗಾರಪ್ಪ ಹೇಳಿದರು. ಬಿಜೆಪಿ ನಾಯಕರು ಸ್ವಾಮಿ ವಿವೇಕಾನಂದರ ಹೆಸರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಮಾಡಿದರೆ ನಾವು ಸದ್ಬಳಕೆ ಮಾಡಿಕೊಂಡಿದ್ದೇವೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ