AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಚಾರಿತ್ರ್ಯ ರೂಪಿಸುವ ಶಿಕ್ಷಕರ ಮನಸ್ಸಲ್ಲಿ ತಾರತಮ್ಯ, ದ್ವಂದ್ವ ಇರಬಾರದು: ಸುಧಾಮೂರ್ತಿ, ಶಿಕ್ಷಣ ತಜ್ಞೆ

ಮಕ್ಕಳ ಚಾರಿತ್ರ್ಯ ರೂಪಿಸುವ ಶಿಕ್ಷಕರ ಮನಸ್ಸಲ್ಲಿ ತಾರತಮ್ಯ, ದ್ವಂದ್ವ ಇರಬಾರದು: ಸುಧಾಮೂರ್ತಿ, ಶಿಕ್ಷಣ ತಜ್ಞೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 13, 2024 | 1:03 PM

Share

ಐಶ್ವರ್ಯ ಡಿಕೆ ಅವರನ್ನು ಚೆನ್ನಾಗಿ ಬಲ್ಲೆ ಎಂದು ಹೇಳಿದ ಸುಧಾಮೂರ್ತಿ, ಅಕೆಯೊಬ್ಬ ಡೈನಮಿಕ್ ಯುವ ಉದ್ಯಮಿಯಾಗಿದ್ದಾರೆ ಮತ್ತು ಶಿಕ್ಷಣದ ಬಗ್ಗೆ ಅವರಿಗಿರುವ ತುಡಿತ ಅಸಾಧಾರಣವಾದದ್ದು ಎಂದರು. ಅವರ ಹೊಸ ಹೊಸ ಐಡಿಯಾಗಳನ್ನು ತಾನು ತುಂಬುಹೃದಯದಿಂದ ಶ್ಲಾಘಿಸುವುದಾಗಿ ಸುಧಾಮೂರ್ತಿ ಹೇಳಿದರು.

ಬೆಂಗಳೂರು: ಮಕ್ಕಳ ಮನಸ್ಸು ಒಂದು ಒದ್ದೆ ಗೋಡೆಯ ಹಾಗಿರುತ್ತದೆ, ಶಿಕ್ಷಕರು ಹೇಳುವ ಮಾತುಗಳು ಅಲ್ಲಿ ನೆಟ್ಟುಬಿಡುತ್ತವೆ, ಸ್ವಲ್ಪ ಸಮಯದ ಬಳಿಕ ಗೋಡೆ ಒಣಗಿಬಿಡುತ್ತದೆ ಆದರೆ ಮನದಲ್ಲಿ ನಾಟಿದ ಸಂಗತಿಗಳು ಹಾಗೆಯೇ ಉಳಿದುಬಿಡುತ್ತವೆ ಎಂದು ಶಿಕ್ಷಣ ತಜ್ಞೆ, ಲೇಖಕಿ, ಇನ್ಫೋಸಿಸ್ ಪ್ರತಿಷ್ಠಾನದ (Infosys Foundation) ಅಧ್ಯಕ್ಷೆ ಮತ್ತು ಖ್ಯಾತ ಉದ್ಯಮಿ ನಾರಾಯಣ ಮೂರ್ತಿಯವರ ಪತ್ನಿ ಸುಧಾಮೂರ್ತಿ (Sudha Murthy) ಹೇಳಿದರು. ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಗಳು ಐಶ್ವರ್ಯ ಡಿಕೆ (Aishwarya DK) ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಲಾಗಿರುವ ಬ್ರ್ಯಾಂಡ್ ಬೆಂಗಳೂರು ಯುವ ನಾಯಕತ್ವ ಸಮ್ಮೇಳನದಲ್ಲಿ ಭಾಗವಹಿಸಿ ಮಾತಾಡಿದ ಅವರು, ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಬಾರದು, ಅವರ ಮನಸ್ಸು ಒಂದು ಖಾಲಿ ಹಾಳೆಯಂತಿರುತ್ತದೆ ಎಂದು ಹೇಳಿ, ಕೋರಾ ಕಾಗಜ್ ಥಾ ಏ ಮನ್ ಮೇರಾ ಎಂಬ ಹಳೆಯ ಹಿಂದಿ ಹಾಡಿನ ಮೊದಲು ಸಾಲನ್ನು ಹೇಳುತ್ತಾ ದ್ವಂದ್ವ ಮತ್ತು ತಾರತಮ್ಯವಿಲ್ಲದ ಮನಸ್ಸಿನಲ್ಲಿ ಉಜ್ಬಲ ಅಲೋಚನೆಗಳು ಹುಟ್ಟುತ್ತವೆ, ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಯ ಚಾರಿತ್ರ್ಯವನ್ನು ರೂಪಿಸುತ್ತಿರುವ ಶಿಕ್ಷಕರ ಮನಸ್ಸು ಪೂರ್ವಾಗ್ರಹ ಪೀಡಿತವಾಗಿರಬಾರದು ಎಂದರು. ಖ್ಯಾತ ನಟ ರಮೇಶ್ ಅರವಿಂದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ