70 ಗಂಟೆ ಕೆಲಸ ಮಾಡಬೇಕೆಂದು ಹೇಳುವ ನಾರಾಯಣಮೂರ್ತಿ ನಿಜಜೀವನದಲ್ಲಿ ಹೇಗೆ? ಪತ್ನಿ ಸುಧಾಮೂರ್ತಿ ಹೇಳಿದ್ದಿದು
Sudha Murthy Speaks On Husband NR Narayana Murthy: ಮುಂಬೈನಲ್ಲಿ ಭಾನುವಾರ (ಅ. 29) ನಡೆದ 14ನೇ ಟಾಟಾ ಲಿಟರೇಚರ್ ಫೆಸ್ಟಿವಲ್ ಹಿನ್ನೆಲೆಯಲ್ಲಿ ಭಾನುವಾರ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸುಧಾಮೂರ್ತಿ, ತಮ್ಮ ಪತಿಯ ಕಾಯಕ ಪ್ರವೃತ್ತಿಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದ್ದಾರೆ. ತಮ್ಮ ಪತಿ ವಾರಕ್ಕೆ 80ರಿಂದ 90 ಗಂಟೆಗಳಷ್ಟು ಕೆಲಸ ಮಾಡುತ್ತಾರೆ. ಅದಕ್ಕಿಂತ ಕೆಲಸ ಮಾಡಿ ಗೊತ್ತೇ ಇಲ್ಲ ಅವರಿಗೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಮುಂಬೈ, ಅಕ್ಟೋಬರ್ 30: ದೇಶದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಅವರು ಕಳೆದ ವಾರ ಹೇಳಿದ್ದು ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ (Sudha Murthy) ಮಾತನಾಡಿ ಕೆಲವೊಂದಿಷ್ಟು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಪತಿ ವಾರಕ್ಕೆ 80ರಿಂದ 90 ಗಂಟೆಗಳಷ್ಟು ಕೆಲಸ ಮಾಡುತ್ತಾರೆ. ಅದಕ್ಕಿಂತ ಕಡಿಮೆ ಕೆಲಸ ಮಾಡಿ ಗೊತ್ತೇ ಇಲ್ಲ ಅವರಿಗೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ 14ನೇ ಟಾಟಾ ಲಿಟರೇಚರ್ ಫೆಸ್ಟಿವಲ್ (Tata Lit Fest 2023) ಹಿನ್ನೆಲೆಯಲ್ಲಿ ಭಾನುವಾರ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸುಧಾಮೂರ್ತಿ, ತಮ್ಮ ಪತಿಯ ಕಾಯಕ ಪ್ರವೃತ್ತಿಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದ್ದಾರೆ.
‘ಅವರು ಒಂದು ವಾರದಲ್ಲಿ 80-90 ಗಂಟೆ ಕೆಲಸ ಮಾಡುತ್ತಾರೆ. ಅದಕ್ಕಿಂತ ಕಡಿಮೆ ಅವಧಿ ಕೆಲಸ ಮಾಡುವುದೆಂದರೆ ಗೊತ್ತಿಲ್ಲ. ನಿಜವಾದ ಪರಿಶ್ರಮದಲ್ಲಿ (hard work) ಅವರಿಗೆ ನಂಬಿಕೆ ಇದೆ. ಅದರಂತೆಯೇ ಅವರು ಬದುಕಿದವರು. ತಮಗೆ ಅನಿಸಿದ್ದನ್ನು ಅವರು ಹೇಳಿದ್ದಾರೆ’ ಎಂದು ಸುಧಾಮೂರ್ತಿ ತಮ್ಮೊಂದಿಗಿನ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದರೆಂದು ನ್ಯೂಸ್18 ವರದಿ ಮಾಡಿದೆ.
ಇದನ್ನೂ ಓದಿ: ಮೋದಿ ಪ್ರತಿದಿನ 16 ಗಂಟೆ ಕೆಲಸ ಮಾಡುತ್ತಾರೆ, ನಾರಾಯಣ ಮೂರ್ತಿ ಹೇಳಿಕೆ ಬೆಂಬಲಸಿದ ಸಜ್ಜನ್ ಜಿಂದಾಲ್
‘ಜನರು ಹೇಳುವ ರೀತಿ ಭಿನ್ನವಾಗಿರುತ್ತದೆ. ಅವರು ಏನು ಹೇಳಿದ್ದಾರೋ ಅದೇ ರೀತಿ ಬದುಕಿ ತೋರಿಸಿದ್ದಾರೆ. ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ,’ ಎಂದು ಸುಧಾ ಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಪತಿಯಿಂದ ಸುಧಾಮೂರ್ತಿ ಕಲಿತ ವಿಚಾರಗಳೇನು?
ಇನ್ಫೋಸಿಸ್ ಸಂಸ್ಥೆ ಸ್ಥಾಪನೆಯಲ್ಲಿ ಸುಧಾಮೂರ್ತಿ ಪಾತ್ರವೂ ಮಹತ್ವದ್ದಾಗಿದೆ. ಕಂಪನಿ ಸ್ಥಾಪಿಸುವಾಗ ನಾರಾಯಣಮೂರ್ತಿ ಅವರಿಗೆ ಹಣದ ನೆರವು ನೀಡಿದ್ದು ಸುಧಾ ಅವರೆಯೇ. ಅವರಿಬ್ಬರ ದಾಂಪತ್ಯಕ್ಕೆ ಬಹುತೇಕ 45 ವರ್ಷಗಳಾಗಿವೆ. ಅಪ್ಪಟ ಕಾಯಕಪ್ರೇಮಿಯಾದ ಎನ್ ಆರ್ ನಾರಾಯಣಮೂರ್ತಿ ಅವರಿಂದ ತಾನು ಕಲಿತ ಸಂಗತಿಗಳೇನು ಎಂಬುದನ್ನು ಪತ್ನಿಯಾದ ಸುಧಾಮೂರ್ತಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಿ ಎಂಬ ನಾರಾಯಣ ಮೂರ್ತಿ ಹೇಳಿಕೆಗೆ ಹೃದ್ರೋಗ ತಜ್ಞನ ವಿರೋಧ
ಪತಿಯಿಂದ ಸುಧಾಮೂರ್ತಿ ಕಲಿತ 3 ಗುಣಗಳು
- ಗುರಿ ಹೊಂದಿದ್ದು ಅದನ್ನು ಈಡೇರಿಸಲು ಶ್ರಮ ಹಾಕಬೇಕು. ಗುರಿಯಿಂದ ಸ್ವಲ್ಪ ಆಚೆ ಈಚೆ ಗಮನ ವಿಮುಖಗೊಳ್ಳಬಾರದು
- ನೀವು ಕೆಲಸ ಮಾಡುವಾಗ ಪರಿಪೂರ್ಣತೆ ಇರಲಿ. ಯಾವುದನ್ನೂ ಉಳಿಸಬೇಡಿ.
- ನಿಮಗೆ ಕೆಲಸದಲ್ಲಿ ಉತ್ಕಟತೆ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಸುಮ್ಮನೆ ಕಷ್ಟಪಟ್ಟರೆ ಯಶಸ್ಸು ಸಿಗುವುದಿಲ್ಲ. ಬುದ್ಧಿವಂತಿಕೆ ಮತ್ತು ಪರಿಶ್ರಮ ಎರಡೂ ಇರಬೇಕು. ಆಗ ಯಶಸ್ಸು ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Mon, 30 October 23