Onion Price: ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 2 ಪಟ್ಟು ಹೆಚ್ಚಾದ ಈರುಳ್ಳಿ ಬೆಲೆ; ಮುಂದಿದೆ ಇನ್ನಷ್ಟು ಏರಿಕೆ ಅಪಾಯ
ಈರುಳ್ಳಿ ಬೆಲೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಿರೀಕ್ಷಿತ ರೀತಿಯಲ್ಲಿ ಮಳೆಯಾಗದ ಕಾರಣ ಈರುಳ್ಳಿ ಇಳುವರಿ ಕಡಿಮೆ ಆಗಿದೆ. ಮಳೆ ವಿಳಂಬವಾದ್ದರಿಂದ ಬಹಳ ಕಡೆ ಈರುಳ್ಳಿ ಬಿತ್ತನೆಯೂ ಕಡಿಮೆ ಆಗಿದ್ದು, ಫಸಲು ಕೂಡ ವಿಳಂಬವಾಗಿ ಬರುತ್ತಿದೆ. ಈ ಸೀಸನ್ಗೆ ಸಾಕಷ್ಟು ಈರುಳ್ಳಿ ಆವಕವಾಗಬೇಕಿತ್ತು. ಈಗ ವಿಳಂಬವಾಗಿ ಈರುಳ್ಳಿಯು ಮಾರುಕಟ್ಟೆಗೆ ಬರಲಿದೆ. ಹೀಗಾಗಿ, ಅಭಾವ ಸೃಷ್ಟಿಯಾಗಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ.
ಬೆಂಗಳೂರು, ಅಕ್ಟೋಬರ್ 30: ನಿರೀಕ್ಷೆಯಂತೆ ಈರುಳ್ಳಿ ಬೆಲೆ (onion price) ಗಗನಕ್ಕೆರುತ್ತಿದೆ. ಎರಡು ತಿಂಗಳ ಹಿಂದೆ ಟೊಮೆಟೋ ಕಂಡಿದ್ದ ರೀತಿಯಲ್ಲಿ ಈರುಳ್ಳಿಯೂ ದುಬಾರಿಯಾಗುತ್ತಿದೆ. ದಿನ ಕಳೆದಂತೆ ಈರುಳ್ಳಿ ಬೆಲೆ ತುಟ್ಟಿಯಾಗುತ್ತಿದೆ. ಒಂದೇ ವಾರದಲ್ಲಿ ಉಳ್ಳಾಗಡ್ಡಿ ಬೆಲೆ ಬಹುತೇಕ ಎರಡು ಪಟ್ಟು ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಲೆ 90 ರೂ ಮುಟ್ಟಿದೆ. ಬೆಂಗಳೂರಿನಲ್ಲಿ ಈಗಾಗಲೇ 70 ರೂ ಗಡಿ ದಾಟಿ ಹೋಗಿದೆ. ಈ ವಾರ ಈರುಳ್ಳಿ ಬೆಲೆ 100 ರೂ ಗಡಿ ದಾಟುವುದು ನಿಶ್ಚಿತ ಎನ್ನಲಾಗಿದೆ.
ಈರುಳ್ಳಿ ಬೆಲೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಿರೀಕ್ಷಿತ ರೀತಿಯಲ್ಲಿ ಮಳೆಯಾಗದ ಕಾರಣ ಈರುಳ್ಳಿ ಇಳುವರಿ ಕಡಿಮೆ ಆಗಿದೆ. ಮಳೆ ವಿಳಂಬವಾದ್ದರಿಂದ ಬಹಳ ಕಡೆ ಈರುಳ್ಳಿ ಬಿತ್ತನೆಯೂ ಕಡಿಮೆ ಆಗಿದ್ದು, ಫಸಲು ಕೂಡ ವಿಳಂಬವಾಗಿ ಬರುತ್ತಿದೆ. ಈ ಸೀಸನ್ಗೆ ಸಾಕಷ್ಟು ಈರುಳ್ಳಿ ಆವಕವಾಗಬೇಕಿತ್ತು. ಈಗ ವಿಳಂಬವಾಗಿ ಈರುಳ್ಳಿಯು ಮಾರುಕಟ್ಟೆಗೆ ಬರಲಿದೆ. ಹೀಗಾಗಿ, ಅಭಾವ ಸೃಷ್ಟಿಯಾಗಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಹೊಸ ಈರುಳ್ಳಿ ಆವಕ ಬರುವವರೆಗೂ ಬೆಲೆ ಏರಿಕೆ ನಿಯಂತ್ರಿಸುವುದು ಕಷ್ಟಸಾಧ್ಯ.
ಇದನ್ನೂ ಓದಿ: India Gold Reserves: ಭಾರತದ ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಸಂಗ್ರಹ 799 ಟನ್; ಬೇರೆ ದೇಶಗಳಲ್ಲಿ ಎಷ್ಟಿವೆ ಚಿನ್ನ?
ಯಶವಂತಪುರದ ಮಂಡಿಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 60ರಿಂದ 70 ರೂ ಇದೆ. ಕಳೆದ ವಾರ ಬೆಲೆ 50 ರೂ ಇತ್ತು. ರೀಟೇಲ್ ಮಳಿಗೆಗಳಲ್ಲಿ 77 ರೂ ಬೆಲೆ ಇದೆ. ಬೆಂಗಳೂರಿನಲ್ಲಿ ತಳ್ಳುಗಾಡಿಗಳಲ್ಲಿ ಈರುಳ್ಳಿಯನ್ನು 80 ರೂಗೆ ಮಾರುತ್ತಿರುವುದು ಕಂಡುಬಂದಿದೆ. ಬೆಂಗಳೂರು ಮಾತ್ರವಲ್ಲ, ರಾಜ್ಯದ ಬಹುತೇಕ ಕಡೆ ಈರುಳ್ಳಿ ಬೆಲೆ ಕನಿಷ್ಠ 50 ರೂಗಿಂತಲೂ ಮೇಲಿದೆ ಎಂದು ವರದಿಗಳು ಹೇಳುತ್ತಿವೆ.
ಸರ್ಕಾರದಿಂದ ಬೆಲೆ ನಿಯಂತ್ರಣಕ್ಕೆ ಕ್ರಮ
ಈರುಳ್ಳಿ ದಾಸ್ತಾನು ಸಾಕಷ್ಟು ಇರದ ಕಾರಣ ಬೆಲೆ ಏರಿಕೆ ಕೈಮೀರದಂತೆ ನಿಯಂತ್ರಿಸಲು ಕೇಂದ್ರ ಸರ್ಕಾರ ರಫ್ತು ನಿರ್ಬಂಧಗಳನ್ನು ಹೇರಿದೆ. ಒಂದು ಮೆಟ್ರಿಕ್ ಟನ್ ಈರುಳ್ಳಿಗೆ ಕನಿಷ್ಠ ರಫ್ತು ದರವಾಗಿ 800 ರೂ ನಿಗದಿ ಮಾಡಲಾಗಿದೆ. ಈ ನಿರ್ಬಂಧವು ಡಿಸೆಂಬರ್ 31ರವರೆಗೂ ಇರಲಿದೆ. ಈ ದರಕ್ಕಿಂತ ಕಡಿಮೆ ಬೆಲೆಗೆ ಯಾರೂ ಈರುಳ್ಳಿಯನ್ನು ರಫ್ತು ಮಾಡುವಂತಿಲ್ಲ.
ಇದನ್ನೂ ಓದಿ: Onion Shocker: ಈರುಳ್ಳಿ ಬೆಲೆ ಏರಿಕೆ ತಡೆಯಲು ಸರ್ಕಾರ ಕ್ರಮ; ಕನಿಷ್ಠ ರಫ್ತು ದರ ನಿಗದಿ
ಕೇಂದ್ರ ಸರ್ಕಾರ ಈರುಳ್ಳಿ ರಫ್ತನ್ನು ನಿರ್ಬಂಧಿಸಿರುವ ಜೊತೆಗೆ ದಾಸ್ತಾನು ಹೆಚ್ಚಿಸುತ್ತಿದೆ. ಈಗಾಗಲೇ 5 ಲಕ್ಷ ಟನ್ಗಳಷ್ಟು ಈರುಳ್ಳಿಯನ್ನು ಸರ್ಕಾರ ಖರೀದಿಸಿದೆ. ಈಗ ಹೆಚ್ಚುವರಿ 2 ಲಕ್ಷ ಟನ್ ಈರುಳ್ಳಿ ಖರೀದಿಗೆ ಮುಂದಾಗಿದೆ. ಬೆಲೆ ಏರಿಕೆ ಕೈಮೀರಿ ಹೋಗುವ ಪ್ರದೇಶಗಳಲ್ಲಿ ಸರ್ಕಾರ ಕಡಿಮೆ ಬೆಲೆಗೆ ಈರುಳ್ಳಿಯನ್ನು ಮಾರುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ