ಜನರು ಶಿಸ್ತು, ಶ್ರಮ ಹಾಕದಿದ್ದರೆ ಯಾವ ಸರ್ಕಾರ ಬಂದರೂ ಅಷ್ಟೇ; ಯುವಕರು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು: ಇನ್ಫೋಸಿಸ್ ನಾರಾಯಣಮೂರ್ತಿ

Work For 12 Hours a Day: ನಮ್ಮ ಕೆಲಸದ ಉತ್ಪನ್ನತೆಯನ್ನು ಹೆಚ್ಚಿಸುವವರೆಗೂ, ಸರ್ಕಾರದಲ್ಲಿನ ಭ್ರಷ್ಟಾಚಾರ ಒಂದು ಮಟ್ಟದಲ್ಲಿ ಕಡಿಮೆ ಆಗುವವರೆಗೂ, ನಮ್ಮ ಆಡಳಿತವರ್ಗದಿಂದ ವಿಳಂಬಿತ ನಿರ್ಧಾರಗಳು ಕಡಿಮೆ ಆಗುವವರೆಗೂ ನಾವು ಪ್ರಗತಿ ಹೊಂದಿದ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಸಲಹೆ ನೀಡಿದ್ದಾರೆ.

ಜನರು ಶಿಸ್ತು, ಶ್ರಮ ಹಾಕದಿದ್ದರೆ ಯಾವ ಸರ್ಕಾರ ಬಂದರೂ ಅಷ್ಟೇ; ಯುವಕರು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು: ಇನ್ಫೋಸಿಸ್ ನಾರಾಯಣಮೂರ್ತಿ
ಎನ್ ಆರ್ ನಾರಾಯಣಮೂರ್ತಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 26, 2023 | 6:39 PM

ನವದೆಹಲಿ, ಅಕ್ಟೋಬರ್ 26: ಭಾರತೀಯರ ಕೆಲಸದ ಉತ್ಪನ್ನಶೀಲತೆ (productivity) ಬಹಳ ಕಡಿಮೆ ಇದೆ. ಕಳೆದ ಎರಡು ಮೂರು ದಶಕಗಳಲ್ಲಿ ಭಾರೀ ಪ್ರಗತಿ ಕಂಡಿರುವ ಆರ್ಥಿಕತೆಗಳೊಂದಿಗೆ ಭಾರತ ಪೈಪೋಟಿ ನಡೆಸಬೇಕಾದರೆ ದೇಶದ ಯುವಕರು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಕರೆ ನೀಡಿದ್ದಾರೆ. ಇನ್ಫೋಸಿಸ್​ನ ಮಾಜಿ ಸಿಎಫ್​ಒ ಮೋಹನದಾಸ್ ಪೈ ಅವರೊಂದಿಗೆ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಿದ್ದ ಮಾಜಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ, ಎರಡನೇ ವಿಶ್ವ ಮಹಾಯುದ್ಧದ ಬಳಿಕ ಜರ್ಮನಿ ಮತ್ತು ಜಪಾನ್​ನ ಜನರು ಹೆಚ್ಚುವರಿ ಸಮಯ ಕೆಲಸ ಮಾಡುತ್ತಿದ್ದುದನ್ನು ಉದಾಹರಿಸಿದ್ದಾರೆ.

‘ನಮ್ಮ ಕೆಲಸದ ಉತ್ಪನ್ನತೆಯನ್ನು ಹೆಚ್ಚಿಸುವವರೆಗೂ, ಸರ್ಕಾರದಲ್ಲಿನ ಭ್ರಷ್ಟಾಚಾರ ಒಂದು ಮಟ್ಟದಲ್ಲಿ ಕಡಿಮೆ ಆಗುವವರೆಗೂ, ನಮ್ಮ ಆಡಳಿತವರ್ಗದಿಂದ ವಿಳಂಬಿತ ನಿರ್ಧಾರಗಳು ಕಡಿಮೆ ಆಗುವವರೆಗೂ ನಾವು ಪ್ರಗತಿ ಹೊಂದಿದ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Inspiring Story: ಅಂದು ತಮ್ಮ ಬಿಸಿನೆಸ್​ಗೆ ಬಂಡವಾಳ ತರಲು 150 ಬಾರಿ ವಿಫಲ; ಇಂದು ಹರ್ಷ್ ಕನಸಿನ ಬಿಸಿನೆಸ್ ಮೌಲ್ಯ 64,000 ಕೋಟಿ ರೂ

‘ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆ ಕೆಲಸ ಮಾಡಲು ಬಯಸುತ್ತೇನೆ ಎಂದು ನಮ್ಮ ಯುವಕರು ಹೇಳಬೇಕು ಎಂಬುದು ನನ್ನ ಇಚ್ಛೆ’ ಎಂದು ಪೋಡ್​ಕ್ಯಾಸ್ಟ್ ವೇಳೆ ನಾರಾಯಣಮೂರ್ತಿ ಹೇಳುತ್ತಾ ಜರ್ಮನಿ ಮತ್ತು ಜಪಾನೀಯರ ಉದಾಹರಣೆ ನೀಡಿದ್ದಾರೆ.

ಯಥಾ ರಾಜಾ ತಥಾ ಪ್ರಜೆ ಎಂಬಂತೆ, ಜನರ ಸಂಸ್ಕೃತಿಗೆ ತಕ್ಕಂತೆ ಸರ್ಕಾರ ಇರುತ್ತದೆ ಎಂಬುದು ಇನ್ಫೋಸಿಸ್ ಸಂಸ್ಥಾಪಕರ ಅನಿಸಿಕೆ. ‘ಪ್ರತಿಯೊಂದು ಸರ್ಕಾರವೂ ಜನರ ಸಂಸ್ಕೃತಿಯಂತೆಯೇ ಇರುತ್ತದೆ. ನಮ್ಮ ಸಂಸ್ಕೃತಿ ಬದಲಾಗಬೇಕು. ಹೆಚ್ಚು ಶಿಸ್ತು, ಹೆಚ್ಚು ಶ್ರಮದ ಗುಣವನ್ನು ಜನರು ಅಳವಡಿಸಿಕೊಳ್ಳಬೇಕು. ನಾವು ಶಿಸ್ತಿನಿಂದ ಕೆಲಸ ಮಾಡಿ ಉತ್ಪನ್ನಶೀಲತೆ ಉತ್ತಮಪಡಿಸಿಕೊಳ್ಳಬೇಕು. ಅದನ್ನು ಜನರು ರೂಢಿಸಿಕೊಳ್ಳದೇ ಹೋದರೆ ಯಾವ ಸರ್ಕಾರ ತಾನೇ ಏನು ಮಾಡೀತು?’ ಎಂದು ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ: Capital gain Tax: ನೀವು ಮನೆ ಖರೀದಿಸಿ ಲಾಭಕ್ಕೆ ಮಾರಿದರೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ಲೆಕ್ಕಚಾರ

ಭಾರತದಲ್ಲಿ ಸರಾಸರಿಯಾಗಿ ದಿನಕ್ಕೆ 9 ತಾಸು ಕೆಲಸ ಮಾಡಲಾಗುತ್ತಿದೆ. ಐಟಿ ವಲಯದ ಕಂಪನಿಗಳಲ್ಲಿ ದಿನಕ್ಕೆ 10 ಗಂಟೆಗೂ ಹೆಚ್ಚು ಹೊತ್ತು ಕೆಲಸ ಮಾಡಲಾಗುತ್ತದೆ. ಸರ್ಕಾರದ ಕಾರ್ಮಿಕ ಕಾನೂನು ಪ್ರಕಾರ ದಿನಕ್ಕೆ 9 ಗಂಟೆಗಿಂತ ಹೆಚ್ಚು ಹೊತ್ತು ಕೆಲಸ ಮಾಡಿಸಿಕೊಳ್ಳುವಂತಿಲ್ಲ. ವಿಶ್ವದ ಹಲವು ಮುಂದುವರಿದ ದೇಶಗಳಲ್ಲಿ ಒಂದು ವಾರದಲ್ಲಿ ಸರಾಸರಿಯಾಗಿ 40ರಿಂದ 60 ಗಂಟೆಗಳ ಕೆಲಸ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ