KPMG Report: ಮುಂದಿನ 5 ವರ್ಷದಲ್ಲಿ ಸೆಮಿಕಂಡಕ್ಟರ್ ಸೇರಿ ಈ ಮೂರು ಕ್ಷೇತ್ರಗಳಿಂದ ಭಾರತೀಯ ಆರ್ಥಿಕತೆಗೆ 240 ಬಿಲಿಯನ್ ಡಾಲರ್ ಕೊಡುಗೆ: ಕೆಪಿಎಂಜಿ ವರದಿ

Indian Economy: ಸೆಮಿಕಂಡಕ್ಟರ್ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಭಾರತ ಗಣನೀಯ ವೃದ್ಧಿ ಸಾಧಿಸುತ್ತದೆ ಎಂದು ಕೆಪಿಎಂಜಿ ವರದಿಯೊಂದು ಹೇಳಿದೆ. ಮಿಕಂಡಕ್ಟರ್, 5ಜಿ ಮತ್ತು ಸ್ಯಾಟಿಲೈಟ್ ಕಮ್ಯೂನಿಕೇಶನ್ ತಂತ್ರಜ್ಞಾನಗಳು ಭಾರತದ ಪ್ರಮುಖ ರಾಷ್ಟ್ರೀಯ ಶಕ್ತಿಗಳಾದ ಆರ್ಥಿಕತೆ, ತಂತ್ರಜ್ಞಾನ, ಜನಸಂಖ್ಯೆ ಮತ್ತು ಬೇಡಿಕೆಯನ್ನು ಸರಿಯಾಗಿ ಬಳಸಿಕೊಳ್ಳಲಿವೆ. ಹೀಗಾಗಿ, ಈ ಮೂರು ಕ್ಷೇತ್ರಗಳು ಮುಂದಿನ ವರ್ಷಗಳಲ್ಲಿ ಗಣನೀಯ ಅಭಿವೃದ್ಧಿ ಹೊಂದಬಹುದು ಎಂಬ ನಿರೀಕ್ಷೆ ಇದೆ.

KPMG Report: ಮುಂದಿನ 5 ವರ್ಷದಲ್ಲಿ ಸೆಮಿಕಂಡಕ್ಟರ್ ಸೇರಿ ಈ ಮೂರು ಕ್ಷೇತ್ರಗಳಿಂದ ಭಾರತೀಯ ಆರ್ಥಿಕತೆಗೆ 240 ಬಿಲಿಯನ್ ಡಾಲರ್ ಕೊಡುಗೆ: ಕೆಪಿಎಂಜಿ ವರದಿ
ಸೆಮಿಕಂಡಕ್ಟರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 30, 2023 | 10:28 AM

ನವದೆಹಲಿ, ಅಕ್ಟೋಬರ್ 30: ವಿಶ್ವದ ಎಲೆಕ್ಟ್ರಾನಿಕ್ಸ್ ಫ್ಯಾಕ್ಟರಿ ಆಗಲು ಹೊರಟಿರುವ ಭಾರತಕ್ಕೆ ಖುಷಿಯ ಸುದ್ದಿ. ಸೆಮಿಕಂಡಕ್ಟರ್ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಭಾರತ ಗಣನೀಯ ವೃದ್ಧಿ ಸಾಧಿಸುತ್ತದೆ ಎಂದು ಕೆಪಿಎಂಜಿ (KPMG- Klynveld Peat Marwick Goerdeler) ವರದಿಯೊಂದು ಹೇಳಿದೆ. ಸೆಮಿಕಂಡಕ್ಟರ್ಸ್, 5ಜಿ ಮತ್ತು ಸ್ಯಾಟಿಲೈಟ್ ಕಮ್ಯೂನಿಕೇಶನ್ಸ್ ಕ್ಷೇತ್ರಗಳು ಮುಂದಿನ 5 ವರ್ಷದಲ್ಲಿ ಭಾರತದ ಆರ್ಥಿಕತೆಗೆ (Indian economy) 240 ಬಿಲಿಯನ್ ಡಾಲರ್ ಕೊಡುಗೆ ನೀಡುತ್ತದೆ. ಅಂದರೆ ಬರೋಬ್ಬರಿ 20 ಲಕ್ಷ ರುಪಾಯಿಯಷ್ಟು ವಿಸ್ತಾರ ಹೊಂದಲಿವೆ. 2027-28ರ ಹಣಕಾಸು ವರ್ಷದಷ್ಟರಲ್ಲಿ ಈ ಮೂರು ಕ್ಷೇತ್ರಗಳಿಂದ ಭಾರತದ ಜಿಡಿಪಿಗೆ ಸಿಗುವ ಕೊಡುಗೆ ಶೇ. 1.6ರಷ್ಟು ಇರಲಿದೆ ಎಂದು ಕೆಪಿಎಂಜಿ ತನ್ನ ವರದಿಯಲ್ಲಿ ಅಂದಾಜಿಸಿದೆ.

ನೆದರ್​ಲ್ಯಾಂಡ್ಸ್ ಮೂಲದ ಕೆಪಿಎಂಜಿ ವಿಶ್ವದ ಅಗ್ರಗಣ್ಯ ಅಕೌಂಟಿಂಗ್ ಕಂಪನಿಗಳಲ್ಲಿ ಒಂದು. ಇಂಡಿಯಾ ಮೊಬೈಲ್ ಕಾಂಗ್ರೆಸ್​ನ ಏಳನೇ ಆವೃತ್ತಿಯ ಕಾರ್ಯಕ್ರಮದ ವೇಳೆ ಈ ವರದಿ ಬಿಡುಗಡೆ ಮಾಡಿದ ಕೆಪಿಎಂಜಿ, ಜಾಗತಿಕ ಡಿಜಿಟಲ್ ಶಕ್ತಿಕೇಂದ್ರವಾಗಿ ಪರಿವರ್ತಿತವಾಗಲು ಭಾರತ ಅಣಿಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಸೆಮಿಕಂಡಕ್ಟರ್, 5ಜಿ ಮತ್ತು ಸ್ಯಾಟಿಲೈಟ್ ಕಮ್ಯೂನಿಕೇಶನ್ ತಂತ್ರಜ್ಞಾನಗಳು ಭಾರತದ ಪ್ರಮುಖ ರಾಷ್ಟ್ರೀಯ ಶಕ್ತಿಗಳಾದ ಆರ್ಥಿಕತೆ, ತಂತ್ರಜ್ಞಾನ, ಜನಸಂಖ್ಯೆ ಮತ್ತು ಬೇಡಿಕೆಯನ್ನು ಸರಿಯಾಗಿ ಬಳಸಿಕೊಳ್ಳಲಿವೆ. ಹೀಗಾಗಿ, ಈ ಮೂರು ಕ್ಷೇತ್ರಗಳು ಮುಂದಿನ ವರ್ಷಗಳಲ್ಲಿ ಗಣನೀಯ ಅಭಿವೃದ್ಧಿ ಹೊಂದಬಹುದು ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: ರಿಲಾಯನ್ಸ್ ಕ್ರೆಡಿಟ್ ಕಾರ್ಡ್; ಹೊಸ ಮಾರುಕಟ್ಟೆಗೆ ಬಂದ ಮುಕೇಶ್ ಅಂಬಾನಿ; ಎಸ್​ಬಿಐ ಜೊತೆ ಒಪ್ಪಂದ

ಟೆಲಿಕಮ್ಯೂನಿಕೇಶನ್ಸ್ ಅಥವಾ ದೂರಸಂಕರ್ಪ ಕ್ಷೇತ್ರದ ಮೌಲ್ಯ ಸದ್ಯಕ್ಕೆ 3,000 ಬಿಲಿಯನ್ ಡಾಲರ್ ಎಂದು ಪರಿಗಣಿಸಲಾಗಿದೆ. ಈ ಹಣಕಾಸು ವರ್ಷದಲ್ಲಿ (2023-24) ಇದು ಶೇ. 7ರಿಂದ 9ರಷ್ಟು ಸಿಎಜಿಆರ್​ನಲ್ಲಿ ಬೆಳೆಯಬಹುದೆಂದು ಕೆಪಿಎಂಜಿ ನಿರೀಕ್ಷಿಸಿದೆ.

‘ಟೆಲಿಕಾಂ ಹಾಗೂ ಸಂಬಂಧಿತ ಉದ್ಯಮಗಳಲ್ಲಿ ನೇಮಕಾತಿಯಲ್ಲಿ ಶೇ. 40ರಷ್ಟು ಹೆಚ್ಚಳವಾಗಬಹುದು. 5ಜಿ/6ಜಿ ಬಿಡುಗಡೆಯು ಟೆಲಿಕಾಂ ಸೆಕ್ಟರ್​ನಲ್ಲಿ ಉದ್ಯೋಗ ಸಾಧ್ಯತೆಯನ್ನು ಹೆಚ್ಚಿಸುತ್ತದೆ,’ ಎಂದು ಅದು ಹೇಳಿದೆ.

ಇವತ್ತಿನ ಸಂದರ್ಭದಲ್ಲಿ ದೂರಸಂಕಪರ್ಕ ಉದ್ಯಮದಲ್ಲಿ 40 ಲಕ್ಷ ಮಂದಿ ಕೆಲಸ ಪಡೆದಿದ್ದಾರೆ. ಇದರಲ್ಲಿ 22 ಲಕ್ಷ ನೇರ ಉದ್ಯೋಗವಾಗಿದ್ದರೆ 18 ಲಕ್ಷದಷ್ಟು ಮಂದಿ ಪರೋಕ್ಷವಾಗಿ ಕೆಲಸ ಪಡೆದಿದ್ದಾರೆ. ಕೆಪಿಎಂಜಿ ವರದಿ ಪ್ರಕಾರ 2025-26ರ ಹಣಕಅಸು ವರ್ಷದಲ್ಲಿ ಟೆಲಿಕಮ್ಯೂನಿಕೇಶನ್ಸ್ ಕ್ಷೇತ್ರದಲ್ಲಿ ಉದ್ಯೋಗ ಸಂಖ್ಯೆ 60 ಲಕ್ಷ ದಾಟುವ ಸಾಧ್ಯತೆ ಇದೆ.

ಇದನ್ನೂ ಓದಿ: ಬ್ರೌಸರ್​ಗಳಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಲು ಗೂಗಲ್ ತೆರುವ ಹಣ ವರ್ಷಕ್ಕೆ ಬರೋಬ್ಬರಿ 2 ಲಕ್ಷಕೋಟಿ ರೂ?

ಭಾರತದಲ್ಲಿ ಸ್ಮಾರ್ಟ್​ಫೋನ್ ಮತ್ತು ಡಾಟಾ ಬಳಕೆ ಗಣನೀಯವಾಗಿ ಹೆಚ್ಚಾಗಬಹುದು. ಕೋವಿಡ್​ಗಿಂತ ಮುಂಚಿನ ದಿನದಿಂದ ಆರಂಭಿಸಿ 2023ರವರೆಗೂ ಗ್ರಾಮೀಣ ಭಾಗದಲ್ಲಿ ಸ್ಮಾರ್ಟ್​ಫೋನ್ ಹೊಂದಿರುವವರ ಸಂಖ್ಯೆ ದ್ವಿಗುಣಗೊಂಡಿದೆ. ಭಾರತದ 75.9 ಕೋಟಿ ಸ್ಮಾರ್ಟ್​ಫೋನ್ ಬಳಕೆದಾರರ ಪೈಕಿ 35.8 ಕೋಟಿ ಮಂದಿ ಗ್ರಾಮೀಣ ಭಾಗದಲ್ಲಿ ನೆಲಸಿದ್ದಾರೆ ಎಂಬ ಮಾಹಿತಿಯನ್ನು ಕೆಪಿಎಂಜಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ