ಬ್ರೌಸರ್​ಗಳಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಲು ಗೂಗಲ್ ತೆರುವ ಹಣ ವರ್ಷಕ್ಕೆ ಬರೋಬ್ಬರಿ 2 ಲಕ್ಷಕೋಟಿ ರೂ?

Google In Trial: ನ್ಯಾಯ ಇಲಾಖೆಯಲ್ಲಿ ಗೂಗಲ್ ವಿರುದ್ಧ ನಡೆಯುತ್ತಿರುವ ವಿಚಾರಣೆಯಲ್ಲಿ ಕೆಲ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ಬ್ಲೂಮ್​ಬರ್ಗ್ ನ್ಯೂಸ್​ನಲ್ಲಿ ಮೊನ್ನೆ (ಅ. 27) ಬಂದ ವರದಿ ಪ್ರಕಾರ, 2021ರ ವರ್ಷದಲ್ಲಿ ಗೂಗಲ್ ಸಂಸ್ಥೆ ವೆಬ್ ಬ್ರೌಸರ್​ಗಳಲ್ಲಿ ಮತ್ತು ಮೊಬೈಲ್ ಫೋನ್​ಗಳಲ್ಲಿ ತನ್ನ ಸರ್ಚ್ ಎಂಜಿನ್ ಡೀಫಾಲ್ಟ್ ಆಗಿರಿಸಲು 2 ಲಕ್ಷ ಕೋಟಿ ರೂಗೂ ಹೆಚ್ಚು ಹಣ ಖರ್ಚು ಮಾಡಿದೆಯಂತೆ.

ಬ್ರೌಸರ್​ಗಳಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಲು ಗೂಗಲ್ ತೆರುವ ಹಣ ವರ್ಷಕ್ಕೆ ಬರೋಬ್ಬರಿ 2 ಲಕ್ಷಕೋಟಿ ರೂ?
ಗೂಗಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2023 | 7:11 PM

ನವದೆಹಲಿ, ಅಕ್ಟೋಬರ್ 29: ವಿಶ್ವದ ನಂಬರ್ ಒನ್ ಸರ್ಚ್ ಎಂಜಿನ್ ಎನಿಸಲು ಗೂಗಲ್ (google) ಹಾಕುವ ಶ್ರಮ ಮತ್ತು ತೆರುವ ಬೆಲೆ ಬಹಳ ದೊಡ್ಡದು. ಬ್ರೌಸರ್ ಕಂಪನಿಗಳಿಗೆ ಗೂಗಲ್ ದೊಡ್ಡ ಮೊತ್ತವನ್ನು ಕೊಡುತ್ತದೆ. ನ್ಯಾಯ ಇಲಾಖೆಯಲ್ಲಿ (Justice department) ಗೂಗಲ್ ವಿರುದ್ಧ ನಡೆಯುತ್ತಿರುವ ವಿಚಾರಣೆಯಲ್ಲಿ ಕೆಲ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ಬ್ಲೂಮ್​ಬರ್ಗ್ ನ್ಯೂಸ್​ನಲ್ಲಿ ಮೊನ್ನೆ (ಅ. 27) ಬಂದ ವರದಿ ಪ್ರಕಾರ, 2021ರ ವರ್ಷದಲ್ಲಿ ಗೂಗಲ್ ಸಂಸ್ಥೆ ವೆಬ್ ಬ್ರೌಸರ್​ಗಳಲ್ಲಿ ಮತ್ತು ಮೊಬೈಲ್ ಫೋನ್​ಗಳಲ್ಲಿ ತನ್ನ ಸರ್ಚ್ ಎಂಜಿನ್ ಡೀಫಾಲ್ಟ್ (default search engine) ಆಗಿರಿಸಲು 26.3 ಬಿಲಿಯನ್ ಡಾಲರ್ (2 ಲಕ್ಷ ಕೋಟಿ ರೂಗೂ ಹೆಚ್ಚು) ಹಣ ಕೊಟ್ಟಿದೆಯಂತೆ.

ಗೂಗಲ್ ಪ್ರತೀ ವರ್ಷವೂ ಡೀಫಾಲ್ಟ್ ಸರ್ಚ್ ಎಂಜಿನ್​ಗಾಗಿ ಹಣ ಖರ್ಚು ಮಾಡುತ್ತದೆ. ಹೀಗೆ ಮಾಡುವ ವೆಚ್ಚ 2014ಕ್ಕೆ ಹೋಲಿಸಿದರೆ ಈಗ ಮೂರು ಪಟ್ಟು ಹೆಚ್ಚಾಗಿದೆ. ಜಸ್ಟಿಸ್ ಡಿಪಾರ್ಟ್ಮೆಂಟ್​ನ ಟ್ರಯಲ್ ವೇಳೆ ಗೂಗಲ್​ನ ಸರ್ಚ್ ಮತ್ತು ಅಡ್ವರ್ಟೈಸಿಂಗ್ ವಿಭಾಗದ ಸೀನಿಯರ್ ಎಕ್ಸಿಕ್ಯೂಟಿವ್ ಪ್ರಭಾಕರ್ ರಾಘವನ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ರಿಲಾಯನ್ಸ್ ಕ್ರೆಡಿಟ್ ಕಾರ್ಡ್; ಹೊಸ ಮಾರುಕಟ್ಟೆಗೆ ಬಂದ ಮುಕೇಶ್ ಅಂಬಾನಿ; ಎಸ್​ಬಿಐ ಜೊತೆ ಒಪ್ಪಂದ

ಗೂಗಲ್ ಸಂಸ್ಥೆಗೆ ಸರ್ಚ್ ಟ್ರಾಫಿಕ್​ನಿಂದ ಬಹಳಷ್ಟು ಜಾಹೀರಾತು ಆದಾಯ ಬರುತ್ತದೆ. 2021ರ ಅಂಕಿ ಅಂಶದ ಪ್ರಕಾರ ಸರ್ಚ್ ಅಡ್ವರ್ಟೈಸಿಂಗ್​ನಿಂದ ಗೂಗಲ್​ಗೆ 146.4 ಬಿಲಿಯನ್ ಡಾಲರ್ ಆದಾಯ ಬಂದಿದೆ. ಇದಕ್ಕಾಗಿ, ಗೂಗಲ್ ಮಾಡುವ ವೆಚ್ಚದಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಿರಿಸಲು ಕಂಪನಿಗಳಿಗೆ ಹಣ ನೀಡುವುದು ಪ್ರಮುಖವಾದುದು.

ಕೆಲ ಕಾನೂನುಗಳ ಪ್ರಕಾರ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಒಂದು ಕಂಪನಿಗೆ ಲಾಭವಾಗುವಂತಹ ವಾತಾವರಣ ಇರಬಹುದು. ಈ ನಿಟ್ಟಿನಲ್ಲಿ ಗೂಗಲ್ ವಿರುದ್ಧ ವಿವಿಧ ದೇಶಗಳಲ್ಲಿ ಕಾನೂನು ಮೊಕದ್ದಮೆಗಳು ದಾಖಲಾಗಿವೆ. ಆದರೆ, ತನ್ನ ಸರ್ಚ್ ಎಂಜಿನ್ ಅನ್ನು ವೆಬ್ ಬ್ರೌಸರ್​ಗಳಲ್ಲಿ ಮತ್ತು ಮೊಬೈಲ್ ಬ್ರೌಸರ್​ಗಳಲ್ಲಿ ಡೀಫಾಲ್ಟ್ ಆಗಿ ಇರಿಸಲು ಹಣ ತೆರುವುದನ್ನು ಗೂಗಲ್ ಸಮರ್ಥಿಸಿಕೊಂಡಿದೆ. ಸ್ಪರ್ಧಾತ್ಮಕ ವ್ಯವಹಾರದಲ್ಲಿ ಇದು ಸಹಜ. ಹಾಗೆಯೇ, ಬಳಕೆದಾರರು ಡೀಫಾಲ್ಟ್ ಬ್ರೌಸರ್ ಅನ್ನು ಬದಲಿಸುವ ಎಲ್ಲಾ ಸ್ವಾತಂತ್ರ್ಯ ಹೊಂದಿರುತ್ತಾರೆ ಎಂಬುದು ಅದರ ವಾದ.

ಇದನ್ನೂ ಓದಿ: ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ

ಇನ್ನು, ಡೀಫಾಲ್ಟ್ ಸರ್ಚ್ ಎಂಜಿನ್ ಆಗಿಸಲು ವಿವಿಧ ಕಂಪನಿಗಳಿಗೆ ತಾನು ನೀಡಿರುವ ಹಣ ಎಷ್ಟು ಎಂಬುದನ್ನು ಬಹಿರಂಗಪಡಿಸಬಾರದು. ಇದರಿಂದ ತನಗೆ ಮುಂದೆ ವ್ಯವಹರಿಸುವುದು ಕಷ್ಟವಾದೀತು ಎಂದು ಗೂಗಲ್ ಸಂಸ್ಥೆ ಈ ವಿಚಾರಣೆ ವೇಳೆ ಮನವಿ ಮಾಡಿತ್ತು. ಆದರೆ, ನ್ಯಾಯಮೂರ್ತಿಗಳು ಈ ವಾದವನ್ನು ಪುರಸ್ಕರಿಸಲಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್