ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಿ ಎಂಬ ನಾರಾಯಣ ಮೂರ್ತಿ ಹೇಳಿಕೆಗೆ ಹೃದ್ರೋಗ ತಜ್ಞನ ವಿರೋಧ

ಭಾರತದಲ್ಲಿ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿಕೆಗೆ ಬೆಂಗಳೂರು ಮೂಲದ ಹೃದ್ರೋಗ ತಜ್ಞ ದೀಪಕ್ ಕೃಷ್ಣಮೂರ್ತಿ ಅವರು ವಿರೋಧ ವ್ಯಕ್ತಪಡಿಸಿ ಎಕ್ಸ್​ (ಹಿಂದಿನ ಟ್ವಿಟರ್​​) ಅಕೌಂಟ್​​​​ನಲ್ಲಿ ಪೋಸ್ಟ್​​​ ಹಾಕಿದ್ದಾರೆ.

ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಿ ಎಂಬ ನಾರಾಯಣ ಮೂರ್ತಿ ಹೇಳಿಕೆಗೆ ಹೃದ್ರೋಗ ತಜ್ಞನ ವಿರೋಧ
ಎನ್ ಆರ್ ನಾರಾಯಣಮೂರ್ತಿ
Follow us
ವಿವೇಕ ಬಿರಾದಾರ
|

Updated on: Oct 29, 2023 | 12:23 PM

ಬೆಂಗಳೂರು ಅ.29: ಭಾರತದಲ್ಲಿ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ (Infosys)​ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Narayan Murthy) ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾರಾಯಣ ಮೂರ್ತಿ ಅವರ ಅಭಿಪ್ರಾಯಕ್ಕೆ ಕೆಲವರು ಬೆಂಬಲ ಸೂಚಿಸಿದರೇ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಮೂಲದ ಹೃದ್ರೋಗ ತಜ್ಞ ದೀಪಕ್ ಕೃಷ್ಣಮೂರ್ತಿ, ಯುವಕರು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಕ್ಸ್​ (ಹಿಂದಿನ ಟ್ವಿಟರ್​​) ಅಕೌಂಟ್​​​​ನಲ್ಲಿ ಪೋಸ್ಟ್​​​ ಹಾಕಿದ್ದಾರೆ.

ದೀರ್ಘಾವಧಿಯ ಕೆಲಸವು ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವಾಗಬಹುದು. ಇದು ಸಾಮಾನ್ಯ ಸಂಗತಿಯಾಗಿದೆ. ವಾರಕ್ಕೆ 70 ಗಂಟೆ ಕೆಲಸವನ್ನು ದಿನದ ಲೆಕ್ಕದಲ್ಲಿ ನೋಡುವುವುದಾರೇ, ದಿನದ 24 ಗಂಟೆಗಳು, ನೀವು ವಾರದಲ್ಲಿ 6 ದಿನ 12 ಗಂಟೆ ಕೆಲಸ ಮಾಡುತ್ತೀರಿ. ಉಳಿದ 12 ಗಂಟೆಯಲ್ಲಿ 8 ಗಂಟೆ ನಿದ್ದೆ ಮಾಡುತ್ತೀರಿ. ಉಳಿದಿದ್ದು 4 ಗಂಟೆಗಳು ಮಾತ್ರ.

ಬೆಂಗಳೂರಿನಂತಹ ನಗರದಲ್ಲಿ ಟ್ರಾಫಿಕ್​ನಲ್ಲಿ 2 ಗಂಟೆ ಕಳೆಯುತ್ತದೆ. ಉಳಿದಿದ್ದು 2 ಗಂಟೆ ಇದು ಹಲ್ಲುಜ್ಜಲು, ಮಲ, ಸ್ನಾನ, ಆಹಾರ ಸೇವಿಸಲು ಹೋಗುತ್ತದೆ. ಇಷ್ಟಾದ ಮೇಲೆ ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಮಾತನಾಡಲು ಸಮಯವಿಲ್ಲ, ವ್ಯಾಯಾಮ ಮಾಡಲು ಸಮಯವಿಲ್ಲ, ಮನರಂಜನೆಗೆ ಸಮಯವಿಲ್ಲ. ಕೆಲಸದ ಸಮಯದ ನಂತರವೂ ಜನರು ಇಮೇಲ್‌ಗಳು ಮತ್ತು ಕರೆಗಳಿಗೆ ಉತ್ತರಿಸಬೇಕೆಂದು ಕಂಪನಿಗಳು ನಿರೀಕ್ಷಿಸುತ್ತವೆ ಎಂಬುವುದು ಇಲ್ಲಿ ಮರೆಯುವಹಾಗಿಲ್ಲ.

ಇದನ್ನೂ ಓದಿ: ಮೋದಿ ಪ್ರತಿದಿನ 16 ಗಂಟೆ ಕೆಲಸ ಮಾಡುತ್ತಾರೆ, ನಾರಾಯಣ ಮೂರ್ತಿ ಹೇಳಿಕೆ ಬೆಂಬಲಸಿದ ಸಜ್ಜನ್ ಜಿಂದಾಲ್

ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದಾದರೇ ಮದುವೆಯಾಗಬೇಡಿ, ಮಕ್ಕಳು ಬೇಡ. ಕೆಲಸ ಹೊರತು ಬೇರೆಯಾವುದರ ಬಗ್ಗೆಯೂ ಯೋಚಿಸಬೇಡಿ. ಈಗಾಗಲೆ ಕಂಪನಿಗೋಸ್ಕರ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿದರೇ ಮಾಲಿಕನಿಗೆ ಮಿಲಿಯನ್​ಗಟ್ಟಲೆ ಆದಾಯ ಬರುತ್ತದೆ. ಕೆಲಸಗಾರನಿಗೆ ಕಡಲೆಕಾಯಿ ಸಿಪ್ಪೆ ಎಂದು ವ್ಯಂಗ್ಯವಾಡಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ಚೀನಾ ಮತ್ತು ಜಪಾನ್‌ ದೇಶಗಳೊಂದಿಗೆ ನಾವು ಸ್ಪರ್ಧಿಸಬೇಕೆಂದರೇ ನಾವು ನಮ್ಮ ಕೆಲಸದ ಅವಧಿಯನ್ನು ಹೆಚ್ಚಿಸಿಕೊಳ್ಳಬೇಕು. ಭಾರತದಲ್ಲಿ ಕೆಲಸ ಮಾಡುವ ಸಮಯ ತುಂಬಾ ಕಡಿಮೆಯಾಗಿದೆ. “ನಮ್ಮ ಯುವಕರು ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ ಕೆಲಸ ಮಾಡಿದರೇ ವೇಗವಾಗಿ ಅಭಿವೃದ್ಧಿ ಹೊಂದಬಹುದು” ಎಂದು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗಿನ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ನಾರಾಯಣ ಮೂರ್ತಿ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ