ಕೊಪ್ಪಳದ ಬಸ್ಸಾಪುರದ ಗುಡ್ಡದಲ್ಲಿ ಚಿರತೆ ಓಡಾಟ, ಗ್ರಾಮಸ್ಥರು ಎಚ್ಚರದಿಂದಿರಲು ಡಂಗುರ

ಕೊಪ್ಪಳದ ಬಸ್ಸಾಪುರದ ಗುಡ್ಡದಲ್ಲಿ ಚಿರತೆ ಓಡಾಟ, ಗ್ರಾಮಸ್ಥರು ಎಚ್ಚರದಿಂದಿರಲು ಡಂಗುರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 13, 2024 | 11:06 AM

ಸಾಯಂಕಾಲದ ನಂತರ ಗ್ರಾಮಸ್ಥರು ಮನೆಯಿಂದ ಹೊರಬೀಳಬಾರದು ಮತ್ತು ಹೊರಬರಲೇಬೇಕಾದ ಅನಿವಾರ್ಯತೆ ಉಂಟಾದಲ್ಲಿ 2-3 ಜನ ಜೊತೆಯಾಗಿ ಕೈಯಲ್ಲಿ ಟಾರ್ಚ್, ಲಾಠೀ-ಕೋಲು ಇಲ್ಲವೇ ಕಲ್ಲುಗಳನ್ನು ಹಿಡಿದು ಬರಬೇಕೆಂದು ಡಂಗುರ ಸಾರುತ್ತಿರುವ ವ್ಯಕ್ತಿ ಹೇಳುತ್ತಿದ್ದಾರೆ.

ಕೊಪ್ಪಳ: ಕಾಡಾನೆ ಮತ್ತು ಚಿರತೆ ಮಾನವನಿಗೆ ಒಂದೇಸಮ ಕಾಟಕೊಡುತ್ತಿರುವ ವನ್ಯಪ್ರಾಣಿಗಳೆಂದರೆ (wild animals) ಉತ್ಪ್ರೇಕ್ಷೆ ಅನಿಸದು. ಉತ್ತರ ಕರ್ನಾಟಕದಲ್ಲಿ ಕಾಡಾನೆಗಳ ಹಾವಳಿ ಇಲ್ಲ ಅದರೆ ಚಿರತೆಗಳು ಮಾತ್ರ ಅಗಾಗ ಕಾಣಿಸುತ್ತಿರುತ್ತವೆ. ಜಿಲ್ಲೆಯ ಕೊಪ್ಪಳ (Koppal) ತಾಲ್ಲೂಕಿನ ಬಸ್ಸಾಪುರ ಗ್ರಾಮದಲ್ಲಿರುವ ಬೆಟ್ಟದಲ್ಲಿ ಚಿರತೆಯೊಂದರ (a leopard) ಓಡಾಟ ಕಂಡುಬಂದಿದ್ದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ವನ್ಯಜೀವಿಯು ಗುಡ್ಡದಲ್ಲಿ ಕಾಣಿಸುತ್ತಿರುವ ಬಗ್ಗೆ ಜನರಲ್ಲಿ ಎಚ್ಚರ ಮೂಡಿಸಲು ಗ್ರಾಮ ಪಂಚಾಯಿತಿಯಿಂದ ಡಂಗುರ ಸಾರುತ್ತಿರುವ ದೃಶ್ಯಗಳನ್ನು ಚಿತ್ರದಲ್ಲಿ ನೋಡಬಹುದು. ಸಾಯಂಕಾಲದ ನಂತರ ಗ್ರಾಮಸ್ಥರು ಮನೆಯಿಂದ ಹೊರಬೀಳಬಾರದು ಮತ್ತು ಹೊರಬರಲೇಬೇಕಾದ ಅನಿವಾರ್ಯತೆ ಉಂಟಾದಲ್ಲಿ 2-3 ಜನ ಜೊತೆಯಾಗಿ ಕೈಯಲ್ಲಿ ಟಾರ್ಚ್, ಲಾಠೀ-ಕೋಲು ಇಲ್ಲವೇ ಕಲ್ಲುಗಳನ್ನು ಹಿಡಿದು ಬರಬೇಕೆಂದು ಡಂಗುರ ಸಾರುತ್ತಿರುವ ವ್ಯಕ್ತಿ ಹೇಳುತ್ತಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿದರೆ ಗ್ರಾಮಸ್ಥರು ನೆಮ್ಮದಿಯಿಂದ ನಿದ್ರಿಸಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ