ಉಡುಪಿ: ಆನ್‌ಲೈನ್‌ನಲ್ಲಿ ಸಾಲ ಮಾಡಿ ಮರು ಪಾವತಿ ಮಾಡಲಾಗದೆ ವ್ಯಕ್ತಿ ಆತ್ಮಹತ್ಯೆ

| Updated By: Ganapathi Sharma

Updated on: Aug 28, 2023 | 3:03 PM

Udupi News; ಮೃತರನ್ನು ಶಿವಳ್ಳಿ ನಿವಾಸಿ ರಾಘವೇಂದ್ರ ಎ ಶಾನುಭೋಗೆ (49) ಎಂದು ಗುರುತಿಸಲಾಗಿದ್ದು, ಬಾಳಿಗಾ ಫಿಶ್‌ನೆಟ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪದೇ ಪದೇ ಕರೆಗಳು ಬರುತ್ತಿರುವುದರಿಂದ ಕಂಗೆಟ್ಟ ಅವರು ಹುಡ್ಕೋ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಉಡುಪಿ: ಆನ್‌ಲೈನ್‌ನಲ್ಲಿ ಸಾಲ ಮಾಡಿ ಮರು ಪಾವತಿ ಮಾಡಲಾಗದೆ ವ್ಯಕ್ತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Follow us on

ಉಡುಪಿ, ಆಗಸ್ಟ್ 28: ಆನ್‌ಲೈನ್‌ನಲ್ಲಿ ಸಾಲ (Online Loan Apps) ಮರುಪಾವತಿಗೆ ಪದೇ ಪದೇ ಕರೆ ಮಾಡಿದ್ದರಿಂದ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಶಿವಳ್ಳಿ ನಿವಾಸಿ ರಾಘವೇಂದ್ರ ಎ ಶಾನುಭೋಗೆ (49) ಎಂದು ಗುರುತಿಸಲಾಗಿದ್ದು, ಬಾಳಿಗಾ ಫಿಶ್‌ನೆಟ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಘವೇಂದ್ರ ಆನ್‌ಲೈನ್ ಆ್ಯಪ್‌ನಿಂದ ಸಾಲ ಪಡೆದಿದ್ದರು. ಅವರಿಗೆ, ಸಾಲ ಮರುಪಾವತಿ ಮಾಡುವಂತೆ ಪದೇ ಪದೇ ಕರೆ ಬರುತ್ತಿತ್ತು ಎನ್ನಲಾಗಿದೆ.

ಪದೇ ಪದೇ ಕರೆಗಳು ಬರುತ್ತಿರುವುದರಿಂದ ಕಂಗೆಟ್ಟ ಅವರು ಹುಡ್ಕೋ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲ ನೀಡುವ ಚೀನಾ ಮೊಬೈಲ್ ಅಪ್ಲಿಕೇಶನ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ಮಂಗಳೂರು ಪೊಲೀಸ್ ಆಯುಕ್ತರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಚೀನಾ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿಯೂ ವರದಿಯಾಗಿತ್ತು.

ಮತ್ತೊಂದೆಡೆ, ಅಕ್ರಮವಾಗಿ ಸಾಲ ನೀಡಿ ಜನರನ್ನು ವಂಚಿಸುವ ಲೋನ್ ಆ್ಯಪ್​​ಗಳ ವಿರುದ್ಧ ಪೊಲೀಸರೂ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಆದಾಗ್ಯೂ, ಪದೇ ಪದೇ ಇಂಥ ಘಟನೆಗಳು ವರದಿಯಾಗುತ್ತಿವೆ.

ಇದನ್ನೂ ಓದಿ: ತಾಯಿಯ ಸಮಾಧಿ ಪಕ್ಕದಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಚೀನೀ ಆ್ಯಪ್​ಗಳು ವಂಚಿಸುವುದು ಹೇಗೆ?

ಚೀನೀ ಆ್ಯಪ್​ಗಳು ಸಾಲ ನೀಡುವ ಮೊದಲು ಮೊಬೈಲ್‌ನಲ್ಲಿರುವ ದತ್ತಾಂಶಗಳ ಆ್ಯಕ್ಸೆಸ್ ಪಡೆದುಕೊಳ್ಳುತ್ತವೆ. ನಿಗದಿತ ಸಮಯದಲ್ಲಿ ಹಣ ಮರು ಪಾವತಿ ಮಾಡದಿದ್ದಾಗ ಆ ದತ್ತಾಂಶಗಳನ್ನು ಬಳಸಿಕೊಂಡು, ಗ್ರಾಹಕರ ವೈಯಕ್ತಿಕ ವಿವರಗಳನ್ನು ಮುಂದೊಡ್ಡಿ ಬ್ಲ್ಯಾಕ್​ಮೇಲ್ ಮಾಡುವ ತಂತ್ರ ಅನುಸರಿಸುತ್ತವೆ. ಇದರಿಂದ ಮನನೊಂದು ಗ್ರಾಹಕರು ಅತ್ತ ದೂರು ನೀಡಲೂ ಆಗದೆ, ಹಣ ಪಾವತಿಸಲೂ ಆಗದೆ ನೊಂದು ಆತ್ಮಹತ್ಯೆಗೆ ಶರಣಾಗುತ್ತಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ