ಪಡುಹಿತ್ಲು ಜಾರಂದಾಯ ದೈವದ ಕೋಲ ನಡೆಸುವ ವಿವಾದ ಅಂತ್ಯ: ದೈವದ ಎದುರು ಟ್ರಸ್ಟ್​​ ಬೆಂಬಲಿಗರ ಸಾಮೂಹಿಕ ಪ್ರಾರ್ಥನೆ

ಜಾರಂದಾಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವದಲ್ಲಿ ಉಂಟಾದ ವಿವಾದ ಅಂತಿಮ ಹಂತಕ್ಕೆ ತಲುಪಿದೆ. ಕೋಲೋತ್ಸವ ನಡೆಯುವ ಪ್ರಯತ್ನವನ್ನು ಕೈಬಿಟ್ಟ ಟ್ರಸ್ಟ್, ಸಾಮೂಹಿಕ ಪ್ರಾರ್ಥನೆ ಮಾಡಿ ತೆರಳಿದೆ.

ಪಡುಹಿತ್ಲು ಜಾರಂದಾಯ ದೈವದ ಕೋಲ ನಡೆಸುವ ವಿವಾದ ಅಂತ್ಯ: ದೈವದ ಎದುರು ಟ್ರಸ್ಟ್​​ ಬೆಂಬಲಿಗರ ಸಾಮೂಹಿಕ ಪ್ರಾರ್ಥನೆ
ಶ್ರೀ ಜಾರಂದಾಯ ಬಂಟ ದೈವಸ್ಥಾನ ಪಡುಹಿತ್ಲು
Edited By:

Updated on: Jan 07, 2023 | 2:34 PM

ಉಡುಪಿ: ಜಿಲ್ಲೆಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಗ್ರಾಮದ ಜಾರಂದಾಯ ಬಂಟ ದೈವಸ್ಥಾನದ (Paduhitlu Jarandaya Banta Daivasthana) ವಾರ್ಷಿಕ ನೇಮೋತ್ಸವದಲ್ಲಿ ಉಂಟಾದ ವಿವಾದ (Controversy) ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಸೂತಕದ ನಡುವೆಯೂ ಕೋಲ ನಡೆಸಲು ಪಟ್ಟು ಹಿಡಿದಿದ್ದ ಟ್ರಸ್ಟ್, ಇದೀಗ ಕೋಲೋತ್ಸವ ನಡೆಸುವ ಪ್ರಯತ್ನವನ್ನು ಕೈಬಿಟ್ಟು ಸಾಮೂಹಿಕ ಪ್ರಾರ್ಥನೆ ಮಾಡಿ ತೆರಳಿದೆ. ದೈವಸ್ಥಾನದ ಎದುರು ನಿಂತು ಸಮೂಹಿಕ ಪ್ರಾರ್ಥನೆ ಮಾಡಿದ ಟ್ರಸ್ಟ್ ಸದಸ್ಯರು, ನಿಮ್ಮ ಸ್ಥಾನಕ್ಕೆ ಬೀಗ ಹಾಕಿದ್ದಾರೆ‌. ಇಲ್ಲಿ ಆಗುತ್ತಿರುವುದು ನಿಮ್ಮ(ದೈವದ) ಇಚ್ಚೆ. ನಮಗೆ ಯಾವ ದೋಷ ಬರದಂತೆ ನೋಡಿಕೋ. ಮುಂದಿನ ದಿಗಗಳಲ್ಲಿ ಸಮಿತಿಯವರಿಗೆ ಒಳ್ಳೆ ಬುದ್ದಿ ಕೊಡು ಎಂದು ಪ್ರಾರ್ಥನೆ ಮಾಡಿ ದೈವಕ್ಕೆ ಅಡ್ಡ ಬಿದ್ದು ತೆರಳಿದ್ದಾರೆ.

ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಅಧಿಕಾರ ಕೈ ತಪ್ಪಿತ್ತು. ಹೀಗಾಗಿ ಅಧಿಕಾರದ ಹಪಹಪಿಯಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇಲ್ಲಿಯ ಬಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಅಲ್ಲದೆ ಸಮಿತಿ ನಿರ್ಣಯಿಸಿದಂತೆ ಜನವರಿ 7ರಂದು ನೇಮೋತ್ಸವಕ್ಕೆ ತಯಾರಿ ನಡೆಸಲಾಗುತ್ತಿತ್ತು. ಆದರೆ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಜಯಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ‌ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಡಿಸೆಂಬರ್ 23ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ, ಡಿಸೆಂಬರ್ 24 ರಂದು ದೈವದ ತಂಬಿಲ ಸೇವೆ ಸಂದರ್ಭದಲ್ಲಿ ಎಲ್ಲರ ಮುಂದೆ ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಕೋರ್ಟಿಗೆ ಹೋಗುತ್ತೇವೆ: ಮಹೇಶ್ ಜೋಶಿ, ಕಸಾಪ ಅಧ್ಯಕ್ಷ

ಆದರೆ ಟ್ರಸ್ಟ್​ನವರು ಜಯಪೂಜಾರಿ ಉತ್ತರಕ್ರಿಯೆಯ ದಿನವಾದ ಇಂದೇ ಕೋಲ ನಡೆಸಲು ಪಟ್ಟುಹಿಡಿದಿತ್ತು. ಅದರಂತೆ ದೈವಸ್ಥಾನಕ್ಕೆ ಕುರ್ಚಿ ಇತ್ಯಾದಿಗಳನ್ನು ಟ್ರಸ್ಟ್ ತರಿಸಿತ್ತು. ಆದರೆ ಇದನ್ನು ಸಮಿತಿಯವರು ವಾಪಸ್ ಕಳುಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಗೊಂಡಿತ್ತು. ಮುಂಜಾಗ್ರತಾಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಒಂದೆಡೆ ಜಾರಂದಾಯ ದೈವಸ್ಥಾನದ ಬಳಿ ಟ್ರಸ್ಟ್​ನವರು ಆಗಮಿಸಿದರೆ, ಇನ್ನೊಂದೆಡೆ ಸಮಿತಿ ಸದಸ್ಯರು ಬಂಡಾರದ ಮನೆ ಬಳಿ ಜಮಾಯಿಸಿದ್ದರು.

ಈ ಎಲ್ಲಾ ಬೆಳವಣಿಗೆ ನಡುವೆ ಸೂತಕ ಹಿನ್ನಲೆ ಸಮಿತಿಯು ದೈವಸ್ಥಾನಕ್ಕೆ ಬೀಗ ಹಾಕಿತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಟ್ರಸ್ಟ್, ಇದು ಗ್ರಾಮಕ್ಕೆ ಸಂಬಂಧಿಸಿದ ದೈವಸ್ಥಾನ. ಅವರ ಮನೆಗೆ ಸೂತಕವಿದ್ದರೆ ದೈವಸ್ಥಾನಕ್ಕೆ ಬೀಗ ಹಾಕಿದ್ದು ಯಾಕೆ‌ ಅಂತಾ ಪೊಲೀಸರನ್ನು ಪ್ರಶ್ನಿಸಿದರು.

ದೈವಸ್ಥಾನಕ್ಕೆ ಬೀಗ ಹಾಕಿದ ಬಗ್ಗೆ ಸಮಿತಿ ಮತ್ತು ಬಂಡಾರದ ಕುಟುಂಬಸ್ಥರು ಹೇಳುವುದೇನು?

ಜಾರಂದಾಯ ದೈವಸ್ಥಾನಕ್ಕೆ ಬೀಗ ಹಾಕಿದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸಮಿತಿ ಮತ್ತು ಬಂಡಾರದ ಕುಟುಂಬಸ್ಥರು, ಬಂಡಾರದ ಕುಟುಂಬಕ್ಕೆ ಸೂತಕ ಇದೆ. ಆದ್ದರಿಂದ ನಾವು ಇಂದು ಕೋಲ ನಡೆಸಲು ಬಿಡದೆ ದೈವಸ್ಥಾನಕ್ಕೆ ಬೀಗ ಹಾಕಿದ್ದೇವೆ. ದೈವದ ವಿರುದ್ಧ ಹೋಗಿ ನಮ್ಮ ಮನೆಯ ಜಯಾ ಪೂಜಾರಿ ಅವರನ್ನು ಕಳೆದುಕೊಂಡಿದ್ದೇವೆ. ಅವರ ಅಂತಿಮ ಸಂಸ್ಕಾರ ಮಾಡಲು ಅವಕಾಶ ನೀಡಲಿಲ್ಲ. ಅವರ ಮರಣೋತ್ತರ ಪರೀಕ್ಷೆ ಕೂಡ ನಡೆಸಲಿಲ್ಲ. ಅವರು ತುಂಬಾ ಆರೋಗ್ಯವಾಗಿದ್ದರು. ದೈವವೇ ಈ ರೀತಿ ಮಾಡಿ ಎಚ್ಚರಿಕೆ ನೀಡಿದೆ ಅಂತಾ ನಂಬುತ್ತೇವೆ. ಆದರೂ ಟ್ರಸ್ಟ್​​ನವರು ಇನ್ನು ಕೂಡ ಬುದ್ದಿ ಕಲಿತಿಲ್ಲ ಎಂದಿದ್ದಾರೆ.

ಜನವರಿ 7ಕ್ಕೆ ನಡೆಯಬೇಕಿದ್ದ ನೇಮೋತ್ಸವವನ್ನು ದೈವಸ್ಥಾನ‌ ಸಮಿತಿ‌ ಜಯ ಪೂಜಾರಿ ದೈವದೀನರಾದ ಕಾರಣಕ್ಕೆ ಮುಂದೂಡಿದೆ. ಆದರೆ ಹಠ ಬಿಡದ ಪ್ರಕಾಶ್ ಶೆಟ್ಟಿ ಮತ್ತು ತಂಡ ಜಯ ಪೂಜಾರಿಯವರ ಉತ್ತರಕ್ರಿಯೆಯ ದಿನವಾದ ಜ.7 ರಂದೇ ಕಾಲಾವಧಿ ನೇಮೋತ್ಸವ ಮಾಡಲು ಹೊರಟಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:55 pm, Sat, 7 January 23