ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಕೋರ್ಟಿಗೆ ಹೋಗುತ್ತೇವೆ: ಮಹೇಶ್ ಜೋಶಿ, ಕಸಾಪ ಅಧ್ಯಕ್ಷ
ಸಾಹಿತ್ಯ ಪರಿಷತ್ ಹಿಂದೆ ಯಾವತ್ತೂ ಕೋರ್ಟ್ ಗೆ ಹೋದ ನಿದರ್ಶನಗಳಿಲ್ಲ. ಅದರೆ ತನ್ನ ಅಧಿಕಾರಾವಧಿಯಲ್ಲಿ ಅದು ನಡೆಯಲಿದೆ ಎಂದು ಜೋಶಿ ಹೇಳಿದರು.
ಹಾವೇರಿ: ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ (Republic Day programme) ಕರ್ನಾಟಕ ರಾಜ್ಯದ ಸಂಸ್ಕೃತಿ-ಪರಂಪರೆಯನ್ನು ನಿದರ್ಶಿಸುವ ಸ್ತಬ್ಧಚಿತ್ರಕ್ಕೆ (tableau) ಕೇಂದ್ರ ಸರ್ಕಾರದಿಂದ ಅನುಮತಿ ಸಿಗದಿರುವುದು ಕನ್ನಡಿಗರನ್ನು ಕೆರಳಿಸಿದೆ. ಹಾವೇರಿಯಲ್ಲಿಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ (Mahesh Joshi) ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ಹೇಳಿದರು. ಸಾಹಿತ್ಯ ಪರಿಷತ್ ಹಿಂದೆ ಯಾವತ್ತೂ ಕೋರ್ಟ್ ಗೆ ಹೋದ ನಿದರ್ಶನಗಳಿಲ್ಲ. ಅದರೆ ತನ್ನ ಅಧಿಕಾರಾವಧಿಯಲ್ಲಿ ಅದು ನಡೆಯಲಿದೆ ಎಂದು ಜೋಶಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos