PSI Recruitment Scam: ಕಲಬುರಗಿ ಜೈಲಿನಿಂದ ಹೊರಬಂದ ದಿವ್ಯಾ; ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮ!

PSI Recruitment Scam: ಕಲಬುರಗಿ ಜೈಲಿನಿಂದ ಹೊರಬಂದ ದಿವ್ಯಾ; ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 07, 2023 | 12:32 PM

ಮೇಡಂ ಅಭಿಮಾನಿಗಳಿಗೆ ಅವರು ಯುದ್ಧ ಗೆದ್ದುಬಂದಷ್ಟು ಸಂತೋಷವಾಗಿದೆ. ದಿವ್ಯಾ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಕಲಬುರಗಿ: ಇಲ್ಲ ಮಾರಾಯ್ರೇ ದೀಪಾವಳಿ ಹಬ್ಬವಿನ್ನೂ ಗಾವುದ ದೂರದಲ್ಲಿದೆ, ಪಟಾಕಿ ಸಿಡಿಸುತ್ತಿರುವುದಕ್ಕೆ ಕಾರಣವೇ ಬೇರೆ. ಕೆಂಪುಡುಗೆಯಲ್ಲಿ ಕಾಣುತ್ತಿರುವ ದಿವ್ಯಾ ಹಾಗರಗಿ (Divya Hagaragi) ಮೇಡಂ ಜಾಮೀನು ಪಡೆದು ಕಲಬುರಗಿ ಜೈಲಿನಿಂದ (Kalaburagi jail) ಹೊರಬಂದಿದ್ದಾರೆ. 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ (PSI Recruitment) ನಡೆದ ಅಕ್ರಮದಲ್ಲಿ ದಿವ್ಯಾ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದರು. ದಿವ್ಯಾ ಸೇರಿದಂತೆ ಪ್ರಕರಣದ 26 ಆರೋಪಿಗಳಿಗೆ ಜನೆವರಿ 5 ರಂದು ಜಾಮೀನು ಸಿಕ್ಕಿದೆ. ಹಾಗಾಗೇ, ಮೇಡಂ ಅಭಿಮಾನಿಗಳಿಗೆ ಅವರು ಯುದ್ಧ ಗೆದ್ದುಬಂದಷ್ಟು ಸಂತೋಷವಾಗಿದೆ. ದಿವ್ಯಾ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ