ಉಡುಪಿ, (ಜುಲೈ 14): ಉಡುಪಿ, (ಜುಲೈ 14): ಜಿಲ್ಲೆಯ ಸಮಾಜ ಸೇವಕ, ಆಪತ್ಭಾಂದವ ಎಂದೇ ಖ್ಯಾತಿ ಪಡೆದುಕೊಂಡಿರುವ ಆಸೀಫ್ನ ನೀಚ ಕೃತ್ಯ ಬಟಾಬಯಲಾಗಿದೆ. ಸ್ವಂತ ಪುತ್ರಿಯ ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿದ್ದಾನೆ. ಹೌದು.. ಪಡುಬಿದ್ರಿಯಲ್ಲಿ ತನ್ನ ಸ್ವಂತ ಪುತ್ರಿಯ ಖಾಸಗಿ ವಿಡಿಯೋಗಳನ್ನೇ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿಬಿಟ್ಟಿರುವ ಆರೋಪ ಕೇಳಿಬಂದಿದೆ. ಈ ಕುರಿತು ಪತಿ ವಿರುದ್ಧ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಬೆನ್ನಲ್ಲೇ ಆರೋಪಿಯ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸೀಫ್ನ ಪುತ್ರಿ ತೀರ್ಥಹಳ್ಳಿಯ ತಮ್ಮ ಸಂಬಂಧಿ ಆಗಿರುವ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಇದು ಯುವತಿಯ ತಂದೆಗೆ ಇಷ್ಟವಿರಲಿಲ್ಲ. ಈ ಕೋಪದಿಂದ ಪುತ್ರಿಯ ಫೋಟೋ, ವಿಡಿಯೋಗಳನ್ನು ಸಂಬಂಧಿ ಹುಡುಗನ ಜೊತೆಗಿನ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದಾನೆ. ಅಲ್ಲದೇ ಮಗಳು ಪ್ರೀತಿಸುತ್ತಿದ್ದ ಹುಡಗನನ್ನು ಮನೆಗೆ ಕರೆಸಿ ಆತನ ಮೇಲೆ ಹಲ್ಲೆ ಮಾಡಿದ್ದನಂತೆ. ಬಳಿಕ ಆ ಹುಡುಗನ ಮತ್ತು ತನ್ನ ಮಗಳ ಫೋನ್ಗಳನ್ನು ಕಸಿದುಕೊಂಡು ಅದರಲ್ಲಿದ್ದ ವಿಡಿಯೋಗಳನ್ನು ತನ್ನ ಫೋನ್ಗೆ ವರ್ಗಾಯಿಸಿಕೊಂಡು ಅವುಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ವಾಟ್ಸಾಪ್ ಗ್ರೂಪ್ಗಳಿಗೆ ಕಳುಹಿಸಿದ್ದಾನೆ ಎಂದು ಅರೋಪಿಸಲಾಗಿದೆ.
ಇದನ್ನೂ ಓದಿ: ಹಾವೇರಿ: ನಾಯಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕರು
ಉಡುಪಿ ಮೂಲದ ಸಮಾಜ ಸೇವಕನೊಬ್ಬ ಮಗಳ ಪ್ರೀತಿ ವಿಚಾರ ತಿಳಿದು ಪತ್ನಿ ಮತ್ತು ಪುತ್ರಿಯನ್ನು ಯದ್ವತದ್ವ ತಳಿಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗಳ ಪ್ರೀತಿಯ ವಿಚಾರ ಗೊತ್ತಾಗಿ ಆಸೀಫ್‌ಗೆ ಕೆಂಡಾಮಂಡಲನಾಗಿದ್ದು, ಇದೇ ಸಿಟ್ಟಿನಲ್ಲಿ ಅಮಾನುಷವಾಗಿ ಮಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ನಡುವೆ ಬಂದ ಪತ್ನಿಯನ್ನೂ ಸಹ ಕಾಲಿನಲ್ಲಿ ತುಳಿದು ಹಲ್ಲೆ ಮಾಡಿದ್ದಾನೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ವೈರಲ್ ಆಗಿದೆ.
ಮುಲ್ಖಿಯಲ್ಲಿ ಆಪತ್ಭಾಂದವ ಸೈಕೋ ರಿಹ್ಯಾಬಿಟೇಷನ್ ಸೆಂಟರ್ ಪ್ರಾರಂಭಿಸಿ ಮಾಧಕ ವ್ಯಸನಿಗಳು ಮತ್ತು ಮಾನಸಿಕ ಅಸ್ವಸ್ತರಿಗೆ ಪುರ್ನವಸತಿ ಕಲ್ಪಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಆಪತ್ಭಾಂಧವ ಎಂದೇ ಆಸೀಫ್ ಹೆಸರಾಗಿದ್ದ. ಇದೀಗ ಊರಿಗೆ ಉಪಕಾರಿ ಮನೆಗೆ ಮಾರಿ ಎನ್ನುವಂತೆ ಆಸೀಫ್ನ ಅಸಲಿ ಮುಖವನ್ನು ಪತ್ನೀ ಬಿಚ್ಚಿಟ್ಟಿದ್ದಾರೆ.
ಅಲ್ಲದೇ ತನ್ನ ಪತಿ ಡ್ರಗ್ ವ್ಯಸನಿಯಾಗಿದ್ದು, ಬ್ರೌನ್ ಶುಗರ್ ತೆಗೆದುಕೊಂಡು ಹಲ್ಲೆ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಆಶ್ರಮದಲ್ಲಿಯೂ ಅಕ್ರಮಗಳನ್ನು ನಡೆಸಿರುವುದಾಗಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪೋಲೀಸರೊಂದಿಗೆ ಆಸಿಫ್‌ಗೆ ಉತ್ತಮ ಸಂಬಂಧ ಇರುವ ಕಾರಣ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಮೀನಾಮೇಷ ಎಂದು ಶಬನಮ್ ಆರೋಪಿಸಿದ್ದಾರೆ. ಬಳಿಕ ಪಡಿಬಿದ್ರೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ, ಆಸೀಫ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ